ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆನಂದಗೌಡ ಆಯ್ಕೆ

Anand Gowda elected as the new chairman of the Government Employees' Cooperative Bank

ಮುದ್ದೇಬಿಹಾಳ 17: ವಿಜಯಪುರ ಜಿಲ್ಲೆಯ ಸರಕಾರಿ ನೌಕರರ ಸಹಕಾರಿ(ಜಿಓಸಿಸಿ)ನಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮುದ್ದೇಬಿಹಾಳದ ಆರೋಗ್ಯ ಇಲಾಖೆಯ ಆನಂದಗೌಡ ಎನ್ ಬಿರಾದಾರ ಉಪಾಧ್ಯಕ್ಷರಾಗಿ ಮಲಕಪ್ಪ ಟಕ್ಕಳಕಿ  ಶಿಕ್ಷಣ ಇಲಾಖೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಸರಕಾರಿ ನೌಕರರ ಸಹಕಾರಿ ಬ್ಯಾಂಕ ವಿಜಯಪುರ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರವನ್ನು ಆನಂದಗೌಡ ಎನ್ ಬಿರಾದಾರ ಸ್ವೀಕರಿಸಿದರು. ಈ ಶುಭ ಸಂದರ್ಭದಲ್ಲಿ (ವಿಜಯಪುರ ಹಾಗೂ ಬಾಗಲಕೋಟ) ಅವಳಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಇಲಾಖೆಯ ಗೌರವಾನ್ವಿತ ಅಧಿಕಾರಿ/ನೌಕರರು, ಗುರು-ಹಿರಿಯರು ಹಾಗೂ ಹಿತೈಷಿಗಳು ಆಗಮಿಸಿ, ಬೆಂಬಲಿಸಿ, ಶುಭಕೋರಿದರು ಸಮಾರಂಭದಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಅವರು ಎಲ್ಲ ಇಲಾಖೆಯ ನೌಕರರು ಹಾಜರಿದ್ದರು