ಲೋಕದರ್ಶನವರದಿ
ರಾಣೇಬೆನ್ನೂರು09: ನಮ್ಮ ಸನಾತನ ಪರಂಪರೆಯಲ್ಲಿ ಆಯುವರ್ೇದವು ಭಾರತೀಯ ಸನಾತನ ಧರ್ಮದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪೂರ್ವಜರು ಮಾನವ ಕುಲದ ಪರಿಪೂರ್ಣ ಬೆಳವಣಿಗೆ ಹಾಗೂ ಆರೋಗ್ಯಯುತ ಬದುಕಿಗೆ ಇಂತಹ ಪರಿಪೂರ್ಣವಾದ ಗಿಡಮೂಲಿಕಾಧಾರಿತ ಸುವರ್ಣ ಬಿಂದು ಪ್ರಾಸನ ಲಸಿಕೆ ಕಂಡು ಹಿಡಿದಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಹಾಗೂ ಚುರುಕುತನದ ಬುದ್ದಿ ಹೊಂದಲು ಅತ್ಯಂತ ಸಹಕಾರಿಯಾಗಿದೆ ಎಂದು ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕರ ಸಂಘದ ತಾಲೂಕಾಧ್ಯಕ್ಷ ಕೃಷ್ಣಮೂತರ್ಿ ಹೇಳಿದರು.
ಅವರು ಇಲ್ಲಿನ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜು ಸಭಾಭವನದಲ್ಲಿ ಶನಿವಾರ ಬಿ.ಎಂ.ಕಂಕಣವಾಡಿ ಆಯುವರ್ೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕೌಮಾರಭೃತ್ಯ ವಿಭಾಗವು ಆಯೋಜಿಸಿದ್ದ ಮಾಸಿಕ ಸುವರ್ಣಬಿಂದು ಪ್ರಾಸನ ಲಸಿಕಾ ಶಿಬಿರ ಉದ್ಘಾಟಿಸಿ, ಮಾತನಾಡಿದರು. ಮಾತನಾಡಿದ ಬಿ.ಎಂ.ಕಂಕಣವಾಡಿ ಆಯುವರ್ೇದ ಆಸ್ಪತ್ರೆಯ ವೈದ್ಯ ಡಾ. ನಟರಾಜ ಅರಳಗುಪ್ಪಿ ಆಯುವರ್ೇದ ಶಾಸ್ತ್ರದಲ್ಲಿ ಹಲವಾರು ವನಸ್ಪತಿಗಳು, ಖನಿಜಗಳು, ಚಿಕಿತ್ಸಾ ಪದ್ಧತಿಯಲ್ಲಿ ಬಳಕೆಯಾಗುತ್ತಿವೆ. ಋಷಿ ಮುನಿಗಳು ತಮ್ಮ ಪ್ರತ್ಯಕ್ಷ ಜ್ಞಾನ ಹಾಗೂ ದಿವ್ಯ ದೃಷ್ಠಿಯಿಂದ ಪ್ರತಿಯೊಂದು ದ್ರವ್ಯದ ಔಷದ ಗುಣಧರ್ಮಗಳನ್ನು ಕಂಡು ಸಂಹಿತಾ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ ಎಂದರು. ಪ್ರಾಚಾರ್ಯ ಎಂ.ವಿ.ಎಲಿಗಾರ ಮಾತನಾಡಿ ಸುವರ್ಣ ಬಿಂದು ಪ್ರಾಸನ ಶಾಸ್ತ್ರೋಕ್ತ ಪದ್ಧತಿಯಲ್ಲಿ ತಯಾರಿಸಲಾಗಿದ್ದು, ಇದು ಕನರ್ಾಟಕ ಸಕರ್ಾರದ ಆಯುವರ್ೇದ ಔಷಧ ನಿಮರ್ಾಣ ಮಂಡಳಿಯಿಂದ ಲಸಿಕೆ ಪ್ರಮಾಣಿಕರಿಸಲಾಗಿದೆ. ಎಲ್ಲ ರೀತಿಯ ಭೌತಿಕ ಹಾಗೂ ರಾಸಾಯಿನಿಕ ಪರೀಕ್ಷೆಗಳಿಗೆ ಒಳಪಡಿಸಿ, ಇದರ ಸುರಕ್ಷತೆಯೆನ್ನು ಪರೀಕ್ಷಿಸಿ, ದೃಡಪಡಿಸಿದೆ. ಮಕ್ಕಳಿಗೆ ಬಳಸುವ ಶಾಸ್ತ್ರೋಕ್ತ ಉಲ್ಲೇಖವಿದೆ. ಲಸಿಕೆಯಲ್ಲಿ ಸುವರ್ಣ ಭಸ್ಮ ಬಳಸಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಹಾಕಲಾಗುತ್ತದೆ ಎಂದರು.
ಪಿ.ಯು. ಕಾಲೇಜು ಪ್ರಾಚಾರ್ಯ ಪಿ.ಪ್ರಲ್ಹಾದ, ಉಪನ್ಯಾಸಕರಾದ ಎಂ ಸಿ ಮಲ್ಲಾಪುರ, ವ್ಯವಸ್ಥಾಪಕ ಅನಿಲ್ ದಂಡಗಿ, ಸುಭಾಷ, ಸೇರಿದಂತೆ ಅನೇಕ ಗಣ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. ಮುಂಜಾನೆಯಿಂದ ಸಂಜೆಯವರೆಗೂ ನಡೆದ ಸುವರ್ಣ ಬಿಂದು ಪ್ರಾಸನ ಲಸಿಕಾ ಶಿಬಿರದಲ್ಲಿ 300 ಕ್ಕೂ ಹೆಚ್ಚು ಪಾಲಕರು ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡಿದ್ದರು.