ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿಧರ್ಿಷ್ಟ ಧರಣಿ ಸತ್ಯಾಗ್ರಹ ಮುಂದುವರಿಕೆ ವಿವಿಧ ಸಂಘ-ಸಂಸ್ಥೆಯವರಿಂದ ಸ್ವಯಂಪ್ರೇರಿತ ಬೆಂಬಲ

ಲೋಕದರ್ಶನ ವರದಿ:-

ಮುಧೋಳ:30:-ಮುಧೋಳ ಬಸವೇಶ್ವರ ಸರ್ಕಲ್ನಲ್ಲಿ ನಗರ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಧ ಮೂಲಭೂತ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರದಿಂದ ಹಮ್ಮಿಕೊಂಡಿರುವ ಅನಿರ್ಧಷ್ಟ ಧರಣಿ ಸತ್ಯಾಗ್ರಹ ರವಿವಾರ ನಾಲ್ಕನೇ ದಿನಕ್ಕೆ ಮುಂದುವರೆದಿದೆ. ಒಂದೆಡೆ ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ಅತೀಕ್ರಮಣ ಮಾಡಿಕೊಂಡಿರುವ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸು ತ್ತಿದ್ದರೆ,ಇನ್ನೊಂದಡೆ ನಗರಸಭೆಯವರು ತೆರವು ಕಾಯರ್ಾಚರಣೆಯಲ್ಲಿ ನಿರತರಾಗಿದ್ದಾರೆ. ನಗರದ ವಿವಿಧ ಸಂಘ-ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ನಗರ ಹಿತರಕ್ಷಣಾ ಸಮಿತಿಯವರು ಕೈಗೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ,ಧರಣಿ ಸತ್ಯಾಗ್ರದಲ್ಲಿ ಕುಳಿತಿ ದ್ದಾರೆ. 

   ರಾಚಪ್ಪಣ್ಣ ಕರೆಹೊನ್ನ, ಮಹಾದೇವ ಸದಲಗಿ, ತಿಮ್ಮಣ್ಣ ಹಲಗತ್ತಿ, ಅಜೀತ ಹೊನವಾಡ, ಶಂಕರ ನಾಯ್ಕ, ನಾರಾಯಣ ಹವಾಲ್ದಾರ, ಡಾ.ಸತೀಶ ಎಸ್.ಮಲಘಾಣ ಸೇರಿದಂತೆ ಇತರರು ಧರಣಿ ಸತ್ಯಾಗ್ರದಲ್ಲಿ ಕುಳಿತು ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.