ನೌಕರರ ವೇತನ ತಾರತಮ್ಯ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ

ಲೋಕದರ್ಶನ ವರದಿ

ವಿಜಯಪುರ.ನ.24: ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆ ಅಧಿಕಾರಿ-ನೌಕರರನ್ನು 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನೌಕರರಂತೆಯೇ ರಾಜ್ಯ ಸಕರ್ಾರಿ ನೌಕರರೆಂದು ಪರಿಗಣಿಸಲು ಹಾಗೂ ಮಹಾನಗರ ಪಾಲಿಕೆ ಸಮಾನ ವೇತನ ತಾರತಮ್ಯ ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ನಾಗಠಾಣ ಕ್ಷೇತ್ರದ ಶಾಸಕರಾದ ದೇವಾನಂದ ಚವ್ಹಾಣ ಅವರು ಭರವಸೆ ನೀಡಿದರು. 

ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 24ರ ರವಿವಾರದಂದು ನಗರದ ಹೋಟೆಲ್ ಮಧುವನ್ ಇಂಟರ್ ನ್ಯಾಶನಲ್ನಲ್ಲಿ ನಡೆದ 11ನೇ ತ್ರೈಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ನೌಕರರನ್ನು ಸ್ಥಳೀಯ ಸಂಸ್ಥೆ ನೌಕರರೆಂದು ಪರಿಗಣಿಸುವುದು ಸೇರಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಒದಗಿಸುತ್ತಿರುವ ಎಲ್ಲ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೆ ವಿಸ್ತರಿಸುವುದು, ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೂರೈಸಲು ನಗರ ಶಾಸಕರೊಂದಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ವಿಜಯಪುರ ನಗರದ ಡಿಸಿಸಿ ಬ್ಯಾಂಕ್ ಹತ್ತಿರವಿರುವ 6 ಗುಂಟೆ ಜಾಗದಲ್ಲಿ ನೌಕರರ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5ಲಕ್ಷ ರೂ. ಅನುದಾನವನ್ನು ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಅದರಂತೆ ನಗರ ಶಾಸಕರ ನೇತೃತ್ವದಲ್ಲಿ ನೌಕರರಿಗೆ ನಿವೇಶನ-ಮನೆಗಳನ್ನು ನಿಮರ್ಿಸಿ ಒದಗಿಸಲು ಮಂಜೂರಾತಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಎಂದು ತಿಳಿಸಿದ ಅವರು, ನೌಕರರ ಎಲ್ಲ ತಾರತಮ್ಯಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. 

ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಹರ್ಷ ಶೆಟ್ಟಿ ಅವರು ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ಸಹ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಅಡೆ-ತಡೆಗಳಾಗುತ್ತಿಲ್ಲ. ಪಾಲಿಕೆಯಲ್ಲಿ ಶೇ.40 ರಿಂದ 50 ರಷ್ಟು ಸಿಬ್ಬಂದಿಗಳು ಮಾತ್ರ ಇದ್ದರೂ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಅಭಿವೃದ್ದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಅವರು ಹೇಳಿದರು. 

ಇಬ್ಬರೂ ಮಾಡುವ ಕೆಲಸವನ್ನು ಪಾಲಿಕೆಯ ಒಬ್ಬ ಸಿಬ್ಬಂದಿ ಮಾಡುತ್ತಿದ್ದಾನೆ. ಕೆಲಸದ ಒತ್ತಡ ಇದ್ದರೂ ಸಹ  ಕರ್ತವ್ಯದಲ್ಲಿ  ಅದು ಕಾಣಿಸುವುದಿಲ್ಲ. ಅಷ್ಟು ಅಚ್ಚುಕಟ್ಟಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದಾರೆ. ಆದರೂ ಪಾಲಿಕೆ ಸಿಬ್ಬಂದಿ ಮಾಡುತ್ತಿರುವ ಕೆಲಸಕ್ಕೆ ಸೂಕ್ತ ಪ್ರೊತ್ಸಾಹ ದೊರೆಯುತ್ತಿಲ್ಲ. ಆದರೂ ಕುಗ್ಗದೇ ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ನೌಕರರಿಗೆ ಶಾಶ್ವತ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಯಾ ಯೋಜನೆ ಸಿದ್ಧಪಡಿಸಲಾಗಿದೆ. ಪೌರಕಾಮರ್ಿಕ ಗೃಹ ಭಾಗ್ಯ ಯೋಜನೆಯಡಿ ಬರಟಗಿ ತಾಂಡಾ ಹತ್ತಿರ 10 ಎಕರೆ ಲಭ್ಯವಾಗಿದೆ. ಈಗಾಗಲೇ ಬಿಡಿಎದಿಂದ ಲೇಔಟ್ ಸಹ ಮಾಡಿಸಲಾಗಿದೆ. ಸಕರ್ಾರದ ಅನುಮತಿ ಪಡೆದುಕೊಂಡು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

ಅದರಂತೆ ನಗರದ ಸ್ಟೇಶನ್ ರಸ್ತೆಯಲ್ಲಿರುವ ಪಾಲಿಕೆ ಹಳೆ ಕ್ವಾಟರ್ಸ್ಗಳು ಹಾಳಾಗಿದ್ದು, 11 ಕೋಟಿ ರೂ.ವೆಚ್ಚದಲ್ಲಿ ನಗರ ಶಾಸಕರೊಂದಿಗೆ ಸಕರ್ಾರದಿಂದ ಅನುದಾನ ಲಭ್ಯ ಮಾಡಿಕೊಂಡು ಅಪಾಟರ್್ಮೆಂಟ್ ಮಾದರಿಯಲ್ಲಿ ಪರಮಂಟ್ ಸಿಬ್ಬಂದಿಗೆ ಹಂಚಿಕೆ ಮಾಡಲು ಸಹ ಕ್ರೀಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ದಿನದ 24 ಗಂಟೆ ಕಾರ್ಯನಿರ್ವಹಿಸುವುದು ನಗರಾಭಿವೃದ್ದಿ ಇಲಾಖೆ-ಮಹಾನಗರ ಪಾಲಿಕೆ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಹೀಗೆ ವ್ಯಕ್ತಿಯ ಜನನದಿಂದ ಹಿಡಿದು ಮರಣದವರೆಗೆ ಎಲ್ಲ ಸೌಲಭ್ಯಗಳನ್ನು ನೀಡುವ ಜವಾಬಬ್ದಾರಿ ನಮ್ಮ ಮೇಲಿದೆ. ಅದರಂತೆ ಪ್ರತಿಯೊಬ್ಬರಿಗೂ ವಸತಿ ಸೌಕರ್ಯ, ಶೌಚಾಲಯ, ದಿನಬೆಳಗಾಗದರೆ ಸಂಜೆ ಓಡಾಟಕ್ಕೆ ಲೈಟಿನ್ ವ್ಯವಸ್ಥೆ ಸೇರಿದಂತೆ ಮಹತ್ತರ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಇಂತಹ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ನಮಗೂ ಹೆಮ್ಮೆ ಎನಿಸುತ್ತದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಮಹಾನಗರ ಪಾಲಿಕೆಗಳ ಪರಿಷತ್ ರಾಜ್ಯಾಧ್ಯಕ್ಷರಾದ ಎಸ್.ಎಚ್.ಗುರುಮೂತರ್ಿ, ಉಪಾಧ್ಯಕ್ಷ ಬಿ.ವೆಂಕಟರಾಮ, ಪಾಲಿಕೆ ನೌಕರರ ಸಂಘದ ಗೌರವ ಅಧ್ಯಕ್ಷ ರವೀಂದ್ರ ಶಿರಶ್ಯಾಡ, ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಪಡಸಲಗಿ, ರಾಜ್ಯ ಪ್ರಧಾನ ಕಾರ್ಯದಶರ್ಿ ಟಿ.ಸಿ.ಬಸವರಾಜಯ್ಯ, ಪಾಲಿಕೆ ಅಧಿಕಾರಿ-ಸಿಬ್ಬಂದಿಗಳಾಗಿ ಜಗದೀಶ ಎಸ್.ಆರ್., ಮಹೇಶ ಹೇರಲಗಿ, ಶೆಟ್ಟಲಯ್ಯ, ಗೋವಿಂದರಾಜು, ದೇವೇಂದ್ರಪ್ಪ ಪರಾರಿ, ಗೋವಿಂದಬಾಬು, ಪ್ರಸಾದ ಎಂ.ಪೆರೂರ, ಅಜರ್ುನ ಡಿ.ಮೇಟಿ, ಪ್ರಹ್ಲಾದ ಕುಲಕಣರ್ಿ, ಸಿದ್ದಪ್ಪ  ಸೇರಿದಂತೆ ಇತರರು ಉಪಸ್ಥಿತರಿದ್ದರು.