ಬೆಗುಸರಯಿಯಲ್ಲಿ ವೃದ್ಧನ ಗುಂಪು ಹತ್ಯೆ

ಬೆಗುಸರಯಿ, ಮೇ 25, ವೃದ್ಧರೊಬ್ಬರನ್ನು ಗುಂಪು ಹತ್ಯೆ ನಡೆಸಿರುವ ಘಟನೆ ಬೆಗುಸರಯಿ ಜಿಲ್ಲೆಯ ಚೆರಿಯಾ ಬರಿಯಾರ್ಪುರ ಎಂಬಲ್ಲಿ ಇಂದು ನಡೆದಿದೆ.ನೆರೆಹೊರೆಯವನು ಕಂಬದಿಂದ ವಿದ್ಯುತ್ ಕದಿಯುತ್ತಿದ್ದಾಗ ಸ್ಥಳೀಯ ನಿವಾಸಿ ಸುಖದೇವ್ ತಂತಿ  ಎಂಬಾತ ಪ್ರತಿಭಟನೆ ನಡೆಸಿದ್ದಾನೆ. ಪ್ರತಿಭಟನೆಯಿಂದ ಕೋಪಗೊಂಡ ಅವನ ನೆರೆಹೊರೆಯವನು ಆತನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದು, ಲಾಠಿಗಳಿಂದ ನಿರ್ದಯವಾಗಿ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ನಂತರ ಅಪರಾಧಿ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆತನನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.