ಸಮಾಜ ತಿದ್ದುವ ಕೆಲಸ ಮಾಡುವ ಕಲಾವಿದ

ಲೋಕದರ್ಶನ ವರದಿ

ಬೆಳಗಾವಿ : ಚಿತ್ರಕಲಾವಿದ ತನ್ನ ಭಾವನೆಗಳನ್ನ ಚಿತ್ರಕಲಾಕೃತಿಯಲ್ಲಿ ಮೂಡಿಸಿರುತ್ತಾನೆ. ಅದನ್ನ ಅರಿತುಕೊಳ್ಳುವ ಮನೋಭಾವ ವೀಕ್ಷಕರಲ್ಲಿ ಇರಬೇಕು. ಸಮಾಜದಲ್ಲಿನ ಅಂಕುಡೊಂಕುಗಳನ್ನ ಸುಧಾರಿಸುವ ಕೆಲಸವನ್ನ ಮುಕ್ತವಾಗಿ ಕಲಾವಿದ ತನ್ನ ಕಲೆಯಲ್ಲಿ ತೋರಿಸಿ ಅದನ್ನ ತಿದ್ದುವ ಕೆಲಸ ಮಾಡುತ್ತಾನೆ ಎಂದು ಬಹುಭಾಷಾ ಚಲನ ಚಿತ್ರನಟ ನಾನಾ ಪಾಟೇಕರ ಇಂದಿಲ್ಲಿ ಹೇಳಿದರು.

ನಗರದಲ್ಲಿ ಮೂರು ದಿನಗಳಕಾಲ ನಡೆಯಲಿರುವ ಕಲಾಮಹಷರ್ಿ ಕೆ. ಬಿ. ಕುಲಕಣರ್ಿ ಜನ್ಮ ಶತಾಭ್ದಿ ಮಹೋತ್ಸವವನ್ನು ಲೋಕಮಾನ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. 

ಈ ಕಾರ್ಯಕ್ರಮವನ್ನು ನಟ ನಾನಾ ಪಾಟೇಕರ ಅವರು ಉದ್ಘಾಟಿಸಿ ಮಾತನಾಡುತ್ತ, ಕಲೆಗಾರನಲ್ಲಿಯೂ ಕಾಂತ್ರಿಯ ಪ್ರಕಾರವಿರುತ್ತದೆ ಎಂದು ನುಡಿದರು.

ಈ ಮೊದಲು ಗಣ್ಯರ ಹಸ್ತದಿಂದ ಕಲಾಮಹಷರ್ಿ ಕೆ.ಬಿ. ಕುಲಕಣರ್ಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ಮೊದಲ ಗೋಷ್ಠಿಯಲ್ಲಿ ಕೆಬಿ ಆಟರ್್ ಗ್ಯಾಲರಿ, ಟಿಳಕವಾಡಿಯ ವರೇರಕರ ನಾಟ್ಯ ಗೃಹದಲ್ಲಿ ಆಯೋಜಿಸಿದ್ಧ ಚಿತ್ರಕಲಾಪ್ರದರ್ಶನವನ್ನ ಚಿತ್ರಕಲಾವಿದ ರವಿ ಪರಾಂಜಪೆ ಉದ್ಘಾಟಿಸಿದರು. ಇದೇ ವೇಳೆ ಸೃತಿ ಗ್ರಂಥವನ್ನ ಬಿಡುಗಡೆ ಮಾಡಲಾಯಿತು.