ವಿಜೃಂಭಣೆಯಿಂದ ಜರುಗಿದ ಅಮೋಘಸಿದ್ದೇಶ್ವರ ಜಾತ್ರೆ
Amoghasiddheshwar fair held with great pomp
ತಾಳಿಕೋಟೆ 18 : ತಾಲ್ಲೂಕಿನ ಸುಕ್ಷೇತ್ರ ಚಬನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಬಾದ್ಮಿ ಅಮವಾಸೆಯಂದು ಶನಿವಾರ ಸಂಭ್ರಮದಿಂದ ನೆರವೇರಿತು. ಶುಕ್ರವಾರ ಸಂಜೆ ಪುರಾಣ ಮಂಗಲ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು. ರೋಣ ತಾಲ್ಲೂಕು ಬೂದಿಹಾಳ ಗ್ರಾಮದ ಗವಿಸಿದ್ದೇಶ್ವರ ಶಾಸ್ತ್ರೀಜಿ ಅವರಿಂದ ನಡೆದು ಬಂದ ‘ಕಲ್ಯಾಣ ದರ್ಶನ‘ ಪ್ರವಚನ ಕಾರ್ಯಕ್ರಮವು ಮಹಾಮಂಗಳವಾಯಿತು. ಗ್ರಾಮದಲ್ಲಿಯೇ ವ್ಯಾಸಂಗ ಮಾಡಿ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಶನಿವಾರ ಬೃಹತ್ ಉಚಿತ ನೇತ್ರ ಮತ್ತು ಆರೋಗ್ಯತಪಾಸಣಾ ಶಿಬಿರ ನಡೆಯಲಿದ್ದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬ.ಲಿಂಗದಳ್ಳಿ, (ಚಬನೂರ) ಹಾಗೂ ಬಿಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಚಬನೂರ ಗ್ರಾಮದ ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ರಾತ್ರಿ ವಿವಿಧ ಗ್ರಾಮಗಳಿಂದ ಬಂದಿದ್ದ ಡೊಳ್ಳಿನ ಮೇಳದವರಡೊಳ್ಳಿನ ಕೈಪಟ್ಟು ವಾದನ ಗ್ರಾಮದಲ್ಲಿ ಮಾರ್ಧನಿಸಿತು. ಭಕ್ತಾದಿಗಳಿಗೆ ಕೈಚಕ್ಕಳಿ ಪ್ರಸಾದ ವಿತರಣೆ ಮಾಡಲಾಯಿತು. ನಂತರ ನಸುಕಿನಲ್ಲಿ ದೇವರ ಹೇಳಿಕೆ ಯಾಯಿತು. ಉತ್ಸವದಲ್ಲಿ ನೂರಾರು ಗ್ರಾಮಗಳಿಂದ ಬಂದಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 