ಮುಂಬೈ, ಜೂನ್ 19 : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮುಂಬರುವ 'ಗುಲಾಬೊ ಸಿತಾಬೋ' ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ.
ಸೂಜಿತ್ ಸಿರ್ಕಾರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಅಮಿತಾಬ್ ಬಚ್ಚನ್ ಹಾಗೂ ನಟ ಆಯುಷ್ಮಾನ್ ಖುರಾನಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯ ಲಕ್ನೋದಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಜೂಹಿ ಚತುರ್ವೇದಿ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರ ಏಪ್ರಿಲ್ 24, 2020ರಲ್ಲಿ ಬಿಡುಗಡೆಗೊಳ್ಳಲಿದೆ.
ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್, ಒಂದು ಅಂತ್ಯ, ಮತ್ತೊಂದು ಆರಂಭ. ಸ್ಥಳ, ವೇಶದ ಜೊತೆಗೆ ಜೊತೆಗಾರರು ಬದಲಾದರು, ಕಥೆಯೂ ಬದಲಾಯಿತು. ಲಕ್ನೋದಲ್ಲಿ ಗುಲಾಬೊ ಸಿತಾಬೋ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಸುಜಿತ್ ಸಿರ್ಕಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪಿಕೂ' ಚಿತ್ರದಲ್ಲಿ ಅಮಿತಾಬ್ ಹಾಗೂ 'ವಿಕ್ಕಿ ಡೋನರ್' ಚಿತ್ರದಲ್ಲಿ ಆಯುಷ್ಮಾನ್ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅಮಿತಾಬ್ ಹಾಗೂ ಆಯುಷ್ಮಾನ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.