ಬೆಳಗಾವಿ 17: ರಂದು ಭಾರತೀಯ ಜನತಾ ಪಾರ್ಟಿ ಯ ರಾಷ್ಟ್ರಾಧ್ಯಕ್ಷರಾದ ಅಮಿತ ಶಾ ರವರು ಮೂರನೇ ಆವೃತ್ತಿಯ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕ ಹಾಗೂ ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಬೆಳಗಾವಿಗೆ ಭೇಟಿ ನೀಡಿದರು. ಬೆಳಗಾವಿಯ ಶಾಸಕರಾದ ಅನಿಲ ಬೆನಕೆ, ಶಾಸಕ ಅಭಯ ಪಾಟೀಲ, ರಾಜ್ಯ ಸಭಾ ಸದ್ಯರಾದ ಪ್ರಭಾಕರ ಕೋರೆ, ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕರಾದ ಮಹಾಂತೇಶ ಕವಟಗಿಮಠ ಹಾಗೂ ಇತರರು ಶಾಲು ಹೊದಿಸಿ ಪುಷ್ಪಗುಚ್ಛವನ್ನು ನೀಡುವುದರ ಮೂಲಕ ಸ್ವಾಗತಿಸಿದರು.
ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರಾಧ್ಕ್ಷರಾದ ಅಮಿತ ಶಾ ರವರು ಮುಂಬೈ ಕನರ್ಾಟಕದ ಚುನಾವಣಾ ಸಿದ್ದತೆಯ ಕುರಿತು ಸ್ಥಳೀಯ ನಾಯಕರಲ್ಲಿ ಚಚರ್ಿಸಿದರು. ಈ ಭಾಗದ ಎಲ್ಲ ಏಳೂ ಕ್ಷೇತ್ರಗಳನ್ನು ಗೆಲ್ಲುವುದಾಗಿ ಹಾಗೂ ಅದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.