ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಅಮಿತ್ ಶಾ ಚಾಲನೆ

 ನವದೆಹಲಿ, ಅ 3: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.    ಈ ರೈಲು ದೆಹಲಿ ಮತ್ತು ಕತ್ರಾ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 12 ಗಂಟೆಗಳಿಂದ ಎಂಟು ಗಂಟೆಗೆ ತಗ್ಗಿಸುತ್ತದೆ.    ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಹೈಸ್ಪೀಡ್ ರೈಲು ಚಲಿಸಲಿದ್ದು, ಅದರ ಮೊದಲ ವಾಣಿಜ್ಯ ಓಡಾಟ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ.    ರೈಲು ಸಂಖ್ಯೆ 22439 ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ನವದೆಹಲಿ ರೈಲ್ವೆ ನಿಲ್ದಾಣದಿಂದ 0600 ಗಂಟೆಗೆ ಹೊರಟು 1400 ಗಂಟೆಗೆ ಕತ್ರಾ ತಲುಪಲಿದೆ. ಇದು ಅದೇ ದಿನ ಕತ್ರಾವನ್ನು 1500 ಗಂಟೆಗೆ ಬಿಟ್ಟು 2300 ಗಂಟೆಗೆ ನವದೆಹಲಿ ರೈಲ್ವೆ ನಿಲ್ದಾಣವನ್ನು ತಲುಪಲಿದೆ.    ಈ ರೈಲು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಎಂಟು ಗಂಟೆಗಳಲ್ಲಿ ಕತ್ರವನ್ನು ತಲುಪುವ ಮೊದಲು ಅಂಬಾಲಾ ಕ್ಯಾಂಟ್, ಲುಧಿಯಾನ ಮತ್ತು ಜಮ್ಮು ತಾವಿಯಲ್ಲಿ ನಿಲ್ಲುತ್ತದೆ.    ಈ ಸಮಾರಂಭದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ ವರ್ಧನ್ ಮತ್ತು ಕೇಂದ್ರ ಸಚಿವ ಜಿತೇಂದರ್ ಸಿಂಗ್ ಭಾಗವಹಿಸಿದ್ದರು.