ಜಾರ್ಖಂಡ್ನಲ್ಲಿ ಜೊಹರ್ ಜನ ಆಶೀರ್ವಾದ ಯಾತ್ರೆಗೆ ಅಮಿತ್ ಶಾ ಚಾಲನೆ


ನವದೆಹಲಿ, ಸೆ 18    ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಜಾರ್ಖಂಡ್ನಲ್ಲಿ ಬುಧವಾರ 'ಜೊಹರ್ ಜನ್ ಆಶೀರ್ವಾದ್ ಯಾತ್ರೆ"ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ. 

ಜಮತರಾದ ಕಾಲಿ ಮಂದಿರ ಮೈದಾನದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ರಘುಬರ್ ದಾಸ್ ಭಾಗವಹಿಸಲಿದ್ದಾರೆ.

ಜೋಹರ್ ಜನ ಆಶೀರ್ವಾದ್ ಯಾತ್ರೆ ಈ ಮೊದಲು ಸೆಪ್ಟೆಂಬರ್ 15 ರಂದು ನಿಗದಿಯಾಗಿತ್ತು, ಆದರೆ ನಂತರ ಅದನ್ನು ಸೆಪ್ಟೆಂಬರ್ 18 ಕ್ಕೆ ಮುಂದೂಡಲಾಯಿತು. 

 ಏಳು ದಿನಗಳ 'ಜೊಹರ್ ಜನ ಆಶೀರ್ವಾದ್ ಯಾತ್ರೆ,  581 ಕಿ.ಮೀ. ಸಂಚರಿಸಲಿದ್ದು, ಈ ಸಮಯದಲ್ಲಿ ಮುಖ್ಯಮಂತ್ರಿ ಹಲವು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಖನಿಜ ಸಮೃದ್ಧ ರಾಜ್ಯವಾಗಿರುವ ಜಾರ್ಖಂಡ್ನಲ್ಲಿ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.