ನವದೆಹಲಿ, ಅಕ್ಟೋಬರ್ 11: ಅಕ್ಟೋಬರ್ 12 ರಂದು ಇಲ್ಲಿ ನಡೆಯಲಿರುವ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) 14 ನೇ ವಾಷರ್ಿಕ ಸಮಾವೇಶದ ಉದ್ಘಾಟನಾ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈಶಾನ್ಯ ಪ್ರದೇಶದ ಅಭಿವೃದ್ಧಿ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಖಾತೆ) ಡಾ.ಜಿತೇಂದ್ರ ಸಿಂಗ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರೀಯ ಮಾಹಿತಿ ಆಯೋಗವು ವಾರ್ಷಿಕ ಸಮಾವೇಶದ ಮೂರು ಅಧಿವೇಶನಗಳಿಗೆ ಗಾಂಧಿವಾದಿ ಆಲೋಚನೆಗಳು ಮತ್ತು ಆರ್ಟಿಐ, ಆರ್ಟಿಐ ಪರಿಣಾಮಕಾರಿ ಆಡಳಿತದ ಸಾಧನವಾಗಿ, ಮತ್ತು ಆರ್ಟಿಐ ಕಾಯ್ದೆ- ಮುಂದೆ ಸವಾಲುಗಳು ಎಂಬ ವಿಷಯವನ್ನು ನಿಗಧಿಪಡಿಸಿದೆ. ಪವನ್ ಕೆ ವರ್ಮಾ, ಪ್ರೊಫೆಸರ್ ಎನ್ ರಾಧಾಕೃಷ್ಣನ್, ಪ್ರೊಫೆಸರ್ ಅನುರಾಗ್ ಗಂಗಲ್ ಅವರು ಗಾಂಧಿ ಚಿಂತನೆಗಳು ಮತ್ತು ಆರ್ಟಿಐ ಕುರಿತು ಭಾಷಣ ಮಾಡಲಿದ್ದಾರೆ. ವಜಾಹತ್ ಹಬೀಬುಲ್ಲಾ, ಎ ಎನ್ ತಿವಾರಿ, ಶ್ಯಾಮ್ಲಾಲ್ ಯಾದವ್ ಅವರು ಆರ್ಟಿಐ ಕುರಿತು ಅನಿಸಿಕೆ ಹಂಚಿಕೊಳ್ಳುತ್ತಾರೆ. ಬಿಮಲ್ ಜುಲ್ಕಾ, ಪ್ರೊಫೆಸರ್ ಪಾರ್ಥ ಪ್ರತಿಮ್ ಚಕ್ರವರ್ತಿ, ಅಂಜಲಿ ಭರದ್ವಾಜ್ ಅವರು ಮುಂದಿನ ಸವಾಲುಗಳ ಕುರಿತು ಮಾತನಾಡಲಿದ್ದಾರೆ. ಕೇಂದ್ರ ಮಾಹಿತಿ ಆಯೋಗದ ಎಲ್ಲಾ ಪ್ರಸ್ತುತ ಮತ್ತು ಮಾಜಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರು, ರಾಜ್ಯ ಮಾಹಿತಿ ಆಯೋಗಗಳ ಸಿಐಸಿಗಳು ಮತ್ತು ಐಸಿಗಳು ಮತ್ತು ಪ್ರಥಮ ಮೇಲ್ಮನವಿ ಅಧಿಕಾರಿಗಳು ಮತ್ತು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ವಾರ್ಷಿಕ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವ ಕೆಲವು ನಾಮನಿರ್ದಿಶಿತ ಎನ್ಜಿಒಗಳನ್ನು ಸಹ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.