ವಾಷಿಂಗ್ಟನ್, ಜೂನ್ ೧೯, ಚೀನಾದೊಂದಿಗೆ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಆಯ್ಕೆಯನ್ನು ಅಮೆರಿಕಾ ಉಳಿಸಿಕೊಂಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.ಅಮರಿಕಾ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ಜೈಜರ್ ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧ ಕಡಿತಗೊಳಿಸಲು ಸಾಧ್ಯವಾಗದಿರಬಹುದು ಎಂದು ಹೇಳಿಕೆ ನೀಡಿದ ನಂತರ ಅಧ್ಯಕ್ಷ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.ಇದು ರಾಯಬಾರಿ ರಾಬರ್ಟ್ ಲೈಟ್ಜೈಜರ್ ಅವರ ಪ್ರಮಾದವಲ್ಲ, ಇದನ್ನು ನಾನು ಸ್ಪಷ್ಟಪಡಿಸುತ್ತಿಲ್ಲ. ಆದರೆ, ಕೆಲವು ಷರತ್ತುಗಳೊಂದಿಗೆ ಚೈನಾದೊಂದಿಗೆ ಸಂಪೂರ್ಣ ಸಂಬಂಧ ಕಡಿತಗೊಳಿಸುವ ಆಯ್ಕೆನ್ನು ಅಮೆರಿಕಾ ನಿಶ್ಚಿತವಾಗಿ ಹೊಂದಿದೆ ಎಂದು ಟ್ರಂಪ್ ಗುರುವಾರ ಟ್ವೀಟರ್ ನಲ್ಲಿ ಹೇಳಿದ್ದಾರೆ.ರಾಬರ್ಟ್ ಲೈಟ್ಜೈಜರ್, ಬುಧವಾರ ಕಾಂಗ್ರೆಸ್ ಗೆ ನೀಡಿದ ಹೇಳಿಕೆಯಲ್ಲಿ ಎರಡು ದೇಶಗಳ ನಡುವಣ ಆರ್ಥಿಕ ಸಂಬಂಧ ಕಡಿತಗೊಳಿಸುವ ಐಚ್ಛಿಕ ನೀತಿ ಸಾಧ್ಯವಾಗದಿರಬಹುದು ಎಂದು ಹೇಳಿದ್ದರುಇದಕ್ಕೂ ಮುನ್ನ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಅಮೆರಿಕಾ ಹಾಗೂ ಚೈನಾ ನಡುವಣ ಒಂದನೇ ಹಂತದ ವ್ಯಾಪಾರ ಒಪ್ಪಂದದಂತೆ ಬೀಜಿಂಗ್ ತನ್ನ ಹೊಣೆಗಾರಿಕೆಯನ್ನು ಮುಂದುವರಿಸುವ ಬದ್ದತೆಯನ್ನು ಚೈನಾದ ಉನ್ನತ ರಾಜತಾಂತ್ರಿಕ