ಕೊರೋನಾ ವೈರಸ್ ಅನ್ನು ‘ವುಹಾನ್ ವೈರಸ್ ‘ ಎಂದು ಕರೆದ ಅಮೆರಿಕ

ವಾಷಿಂಗ್ಟನ್, ಮಾ 26 ಜಿ7 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಅಮೆರಿಕ  ಕೊರೋನಾ ವೈರಸ್ ಸೋಂಕನ್ನು ‘ವುಹಾನ್ ವೈರಸ್ ‘ ಉಲ್ಲೇಖಿಸಿರುವುದು ಹಲವು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಪರಿಣಾಮವಾಗಿ, ಸದಸ್ಯ ರಾಷ್ಟ್ರಗಳು ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿವೆ, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯೂರೋಪಿಯನ್ ರಾಯಭಾರಿ, ಅಮೆರಿಕ ಉಲ್ಲೇಖಿಸಿರುವುದು ಅಪಾಯಕಾರಿ ಹೇಳಿಕೆ. ಈ ವೈರಸ್ ಅನ್ನು ಹೀಗೆ ಬ್ರಾಂಡ್ ಮಾಡುವುದು ಸರಿಯಲ್ಲ. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಲು ಯತ್ನಿಸುತ್ತಿದ್ದೇವೆ ಎಂದಿದ್ದಾರೆ. ಜಿ7 ಸದಸ್ಯರ ಪೈಕಿ ಅಮೆರಿಕ ಪ್ರಮುಖ ಸ್ಥಾನ ಹೊಂದಿದ್ದರು. ಇದರಲ್ಲಿ ರಷ್ಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ ರಾಷ್ಟ್ರಗಳು 12 ಪ್ಯಾರಾಗ್ರಾಫ್ ಅನ್ನು ಒಳಗೊಂಡ ಹೇಳಿಕೆ ಬಿಡುಗಡೆ ಮಾಡಿದ್ದವು. ಆದರೆ, ಮಾರ್ಚ್ 16ರ ವಿಡಿಯೋ ಕಾನ್ಫರೆನ್ಸಿಂಗ್ ಸಭೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು  ಇತರ ಜಿ7 ನಾಯಕರು ನೀಡಿದ್ದ ಜಂಟಿ ಹೇಳಿಕೆಯಲ್ಲಿ ಚೀನಾದ ಕುರಿತು ಪ್ರಸ್ತಾಪವೇ ಇರಲಿಲ್ಲ. ಕೊರೋನಾ ವೈರಸ್ ಹರಡುವಿಕೆ ಕುರಿತು ಪಾರದರ್ಶಕತೆ ಕಾಪಾಡದ ವಿರುದ್ಧ ಚೀನಾದ ವಿರುದ್ಧ ಅಮೆರಿಕ ಮೊದಲಿನಿಂದ ಆರೋಪ ಮಾಡುತ್ತಲೇ ಇದೆ.