ಹೈದರಾಬಾದ್, ಜ 12 : ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) 2019 ರ ಯಾವುದೇ ತಿದ್ದುಪಡಿ ಸಾಧ್ಯವಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಪೀಪಲ್ ಪ್ಲಾಜಾದಲ್ಲಿ ನಡೆದ ಒಂದು ವಾರದ ಹುನಾರ್ ಹಾತ್ ಉದ್ಘಾಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಂಸತ್ತು ಅಂಗೀಕರಿಸಿದ ಕಾಯ್ದೆಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಮಾಡಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ಮುಸ್ಲಿಮರು ಸೇರಿದಂತೆ ಪ್ರತಿಯೊಬ್ಬ ಭಾರತೀಯರ , ಧಾರ್ಮಿಕ ಮತ್ತು ಸಾಮಾಜಿಕ ಹಕ್ಕುಗಳು ಸಂಪೂರ್ಣ ಸುರಕ್ಷಿತವಾಗಿದೆ ಅಪಪ್ರಚಾರಕ್ಕೆ ಜನರು ಕಿವಿಕೊಡಬಾರದು ಎಂದು ಮನವಿ ಮಾಡಿದರು.
ರಾಜಕೀಯ ಕಾರಣ್ಕಾಗಿ ಕೆಲ ರಾಜಕೀಯ ಪಕ್ಷಗಳು ದಾರಿತಪ್ಪಿಸಿ, ಭೀತಿ ಉಂಟುಮಾಡುತ್ತಿವೆ ಎಂದು ಸಚಿವ ನಖ್ವಿ ದೂರಿದರು.
ಸಿಎಎ 2019 ಅನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಈ ಕಾಯಿದೆಯು ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ ಮೇಲೆ ಯಾವುದೇ ಅಡ್ಡ, ಕೆಟ್ಟ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಬಂದ ಅಲ್ಪಸಂಖ್ಯಾತ ಜನರಿಗೆ ಇದು ಪ್ರಯೋಜನವಾಗಲಿದೆ ಎಂದರು.
ಬೇರೆ ಯಾವುದೇ ದೇಶವು ಮುಸ್ಲಿಮರಿಗೆ ಭಾರತೀಯ ಪೌರತ್ವ ಬಯಸಿದರೆ ಅವರು ಭಾರತೀಯ ಕಾಯ್ದೆ 1956 ರ ಪ್ರಕಾರ ಅದನ್ನು ಪಡೆಯುತ್ತಾರೆ ಎಂದು ನಖ್ವಿ ಹೇಳಿದರು. ಕಳೆದ ಐದು ವರ್ಷಗಳಲ್ಲಿ ಸುಮಾರು 600 ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದರು.
ಈಗ ಸಿಎಎಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರರು ಸೇರಿದಂತೆ ರಾಜಕೀಯ ಪಕ್ಷಗಳು ಜಂಟಿ ಸಂಸದೀಯ ಆಯ್ಕೆ ಸಮಿತಿಯ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರಾಗಿದ್ದಾರೆ.
ಆಯ್ಕೆ ಸಮಿತಿಯಲ್ಲೂ ಅವರು ಇದನ್ನು ವಿರೋಧಿಸಿಲ್ಲ. ಸಿಎಎ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸಕರ್ಾರ ವಿಚಾರ ಸಂಕಿರಣಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲಿದೆ ಎಂದೂ ಸಚಿವರು ಹೇಳಿದರು.