ಬೆಳಗಾವಿ: ಶೋಷಿತ ಸಮುದಾಯಗಳಿಗೆ ಬಸವಣ್ಣನವರೇ ಸತ್ವ. ಅಂಬೇಡ್ಕರರೇ ಶಕ್ತಿ. ಸತ್ವ ಮತ್ತು ಶಕ್ತಿಗಳನ್ನು ಸಮೀಕರಿಸಿಕೊಂಡು ಬದುಕಿನ ಹಾಗೂ ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡಬೇಕಾಗಿದೆ. ಮತ್ತೆ ಈ ನೆಲದಲ್ಲಿ ವೈಚಾರಿಕ ಚಿಂತನೆಗಳನ್ನು ಬಲಗೊಳಿಸಬೇಕಾಗಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.
ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 26 ರರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಶನಿವಾರದಂದು ಛಲವಾದಿ ಮಹಾಸಭೆಯ ಜಿಲ್ಲಾಧ್ಯಕ್ಷ ದುಗರ್ೆಶ ಮೇತ್ರಿ ಅವರ ಮಾತೋಶ್ರೀ ಹಾಗೂ ದಶಕಗಳ ಕಾಲ ಕಾಮರ್ಿಕರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದ ಹಿರಿಯ ಚೇತನ ಅವ್ವಕ್ಕ ಮೇತ್ರಿ ಅವರನ್ನು ಅವರ ಕಂಗ್ರಾಳಗಲ್ಲಿಯ ನಿವಾಸದಲ್ಲಿ ಗೌರವಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಾಯಕ ಜೀವಿಗಳ ಚಳುವಳಿ ನಡೆಯದಿದ್ದರೇ, ಈ ದೇಶವು ಜಗತ್ತಿನ ಇತಿಹಾಸಕ್ಕೆ ನೀಡುವ, ಸುವರ್ಣ ಅಕ್ಷರಗಳಲ್ಲಿ ಬರೆದಿಟತಕ್ಕ ಇತಿಹಾಸವೇ ಇರುತ್ತಿರಲಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರರು ಹುಟ್ಟಿ ಬರದಿದ್ದರೇ, 21 ನೇ ಶತಮಾನವು ಶೂನ್ಯ ಶತಮಾನವಾಗುತ್ತಿತ್ತು. ಈ ಎರಡು ಮಹಾನ್ ಶಕ್ತಿಗಳು ಭಾರತವು ವಿಶ್ವಕ್ಕೆ ನೀಡಿರುವ ವಿಶ್ವ ಚೇತನಗಳು ಎಂದು ಬಣ್ಣಿಸಿದರು.
ಬಸವ-ಅಂಬೇಡ್ಕರರ ಆದರ್ಶಗಳ ಅಡಿಯಲ್ಲಿ ಶೋಷಿತ ಸಮುದಾಯಗಳೆಲ್ಲ ಒಂದಾಗಬೇಕು. ಪ್ರಭುದ್ದ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳಬೇಕು. ರಾಜಕೀಯವಾಗಿಯೂ ಪಯರ್ಾಯ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕು. ವೈಚಾರಿಕ ಚಿಂತನೆಗಳು ಹಾಗೂ ಚಳುವಳಿಯು ಈ ನೆಲದ ಹೆಗ್ಗುರುತಾಗಬೇಕು ಎಂದರು.
ದುಗರ್ೆಶ ಮೇತ್ರಿ ಮಾತನಾಡಿ, ಬಸವ ಭೀಮ ಸೇನೆಯು ಹಮ್ಮಿಕೊಂಡಿರುವ ಸಮುದಾಯಗಳ ಜೋಡಣೆ ಚಳುವಳಿಯು ಎಲ್ಲ ಶೋಷಿತ ಸಮುದಾಯಗಳಿಗೆ ಮಾದರಿಯಾಗಿದೆ. ಶೋಷಿತ ಸಮುದಾಯಗಳಿಗೆ ಬಸವ-ಅಂಬೇಡ್ಕರರೇ ಉಸಿರಾಗಬೇಕು ಎಂದರು.
ಸಮುದಾಯ ಜೋಡಣೆ ಚಳುವಳಿಯಲ್ಲಿ ಛಲವಾದಿ ಸಮಾಜವನ್ನು ಗುರುತಿಸಿರುವದಕ್ಕೆ ಛಲವಾದಿ ಸಮಾಜವು ಬಸವ ಭೀಮ ಸೇನೆಗೆ ಋಣಿಯಾಗಿದೆ. ಈ ಚಳುವಳಿಗೆ ಸಮಾಜದ ಸಂಪೂರ್ಣ ಬೆಂಬಲ ಇದೆ ಎಂದರು.
ಸನ್ಮಾನ ಸ್ವೀಕರಿಸಿ ಆಶೀರ್ವದಿಸಿದ ಅವ್ವಕ್ಕ ಮೇತ್ರಿ ಅವರು, ನಾನು ನಡೆಸಿದ ಹೋರಾಟಗಳಿಗೆ ಸಂದ ಗೌರವ ಎಂದು ಭಾವಿಸಿದ್ದೇನೆ. ಛಲವಾದಿ ಸಮಾಜದ ಹಿರಿಯ ಪ್ರತಿನಿಧಿಯಾಗಿ ಈ ಗೌರವ ಸ್ವೀಕರಿಸಿದ್ದೇನೆ ಎಂದರು.
ಕಾವೇರಿ ಮೇತ್ರಿ, ಗೌರಿ ಮೇತ್ರಿ, ನವ್ಯ ಮೇತ್ರಿ ಉಪಸ್ಥಿತರಿದ್ದರು.