ಸ್ನೇಹಮಯ ವ್ಯಕ್ತಿತ್ವವುಳ್ಳ ಸದಾ ಹಸನ್ಮೂಖಿ ಶಾಂತಣ್ಣ ಅಡಿವೆಪ್ಪಾ ಮುಳವಾಡ

ಗದಗ,30: ಸೇವಾ ನಿವೃತ್ತರಾಗಿ ಗದಗನ ಕೆ ಎಚ್ ಪಾಟೀಲ್ ಸಭಾಭವನದಲ್ಲಿ ಜರೂಗಲಿರುವ ಸೇವಾ ನಿವೃತ್ತಿ ಅಭಿನಂದನಾ ಜು.31 2024 ರಂದು  ಸಮಾರಂಭದ ಪ್ರಯುಕ್ತ ವಿಶೇಷ ಲೇಖನ. 

ಸಮಾಜ್ಯೋನ್ಮೂಖಿಯಾಗಿ, ಸದಾ ಹಸನ್ಮೂಖಿಯಾಗಿ ಸಮಸ್ತ ತಮ್ಮ ಸಹೋದ್ಯೋಗಿಗಳೊಂದಿಗೆ ಸ್ನೇಹಮಯೀಯಾಗಿರುವ  ಶಾಂತಣ್ಣ ಅಡಿವೆಪ್ಪ ಮಾಳವಾಡ ಇವರು 22/7/1964 ರಂದು ಗದಗನಲ್ಲಿ ತಂದೆ,ತಾಯಿಯವರ ಮಗನಾಗಿ  ಜನಿಸಿದರು. 

ಇವರ ಶೈಕ್ಷಣಿಕ ವಿದ್ಯಾಭ್ಯಾಸವು ಗದಗನಲ್ಲಿಯೇ ಪೂರೈಸಿಕೊಂಡ ನಂತರ ವೃತ್ತಿ ಉಪಜೀವನಕ್ಕಾಗಿ ​‍್ರ​‍್ರಥಮವಾಗಿ ತಮ್ಮ  ಕಾರ್ಯವೃತ್ತಿಯನ್ನು ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಚಾಲಕರಾಗಿ ದಿನಾಂಕ 1/2/1993 ರಂದು ತಮ್ಮ ಸೇವಾವೃತ್ತಿಯಲ್ಲಿ ಸೇರಿಕೊಂಡರು.  ಇವರು ಶಿರಸಿ ವಿಭಾಗದ ಹಳಿಯಾಳ ಘಟಕದಲ್ಲಿ ತಮ್ಮ ಪ್ರಾರಂಭಿಕ ಸೇವೆಯನ್ನು 1993 ರಿಂದ 1996 ರ ವರೆಗೆ ಸೇವೆ ಸಲ್ಲಿಸಿದರು. ತಮ್ಮ ಸೇವಾವಧಿಯಲ್ಲಿ ತಮ್ಮ ಹಿರಿಯ ಕಿರಿಯ ಅಧಿಕಾರಿಗಳೊಂದಿಗೆ ಒಳ್ಳೆಯ ಸಹೋದರ ಭಾವತ್ವವನ್ನು ಹೊಂದಿ ಸಭಿಕರ ಪ್ರೀತಿ ಪಾತ್ರರಾಗಿ ತಮ್ಮ ಪ್ರಾರಂಭಿಕ ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ಪಡೆದು, ತದನಂತರ 1996 ರಲ್ಲಿ ವರ್ಗಾವಣೆಗೊಂಡು ಗದಗ ವಿಭಾಗೀಯ ಕೇಂದ್ರ ಕಚೇರಿಯ ಉಗ್ರಾಣ ವಿಭಾಗದಲ್ಲಿ ಸುಧಿರ್ಘ 31 ವರ್ಷ 6 ತಿಂಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. 

ಇವರ ಸೇವಾ ನಿಷ್ಠೆಯನ್ನು ಸಮಸ್ತ ಸಹೋದ್ಯೋಗಿಗಳಲ್ಲಿ ನವ ಚೈತನ್ಯವನ್ನುಂಟು ನೀಡಿದ ಕೀರ್ತಿಗೆ ಪಾತ್ರರಾಗಿರುವರು ಇವರ ಸೇವಾವಧಿಯಲ್ಲಿ ರಸ್ತೆ ಸಾರಿಗೆಯಲ್ಲಿ ನಿರಂತರ  ಅಪಘಾತ ರಹಿತ ಚಾಲನೆ ಮಾಡಿ ಸೇವೆಯನ್ನು ಒದಗಿಸಿದ ಪ್ರಯುಕ್ತ ಸನ್ 2004 ರಲ್ಲಿ ಸಾರಿಗೆ ಸಂಸ್ಥೆಯಿಂದ ಬೆಳ್ಳಿ ಪದಕ ಪಡೆದು ಪುರಸ್ಕೃತರಾಗಿರುತ್ತಾರೆ.  

ಇವರು 31/7/2007 ರಲ್ಲಿ ಕೆ ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್ ನಲ್ಲಿ ಗದಗ ವಿಭಾಗದ ಉಪಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಸದರ ಸಂಘಟನೆಯಲ್ಲಿ ಸಮಸ್ತ ವೃತ್ತಿ ಬಾಂಧವರನ್ನು ಒಗ್ಗೂಡಿಸಿಕೊಂಡು ಸಹೋದ್ಯೋಗಿಗಳ ಕುಂದು ಕೊರತೆಗಳಿಗೆ ಸೂಕ್ತ  ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖಪಾತ್ರ ವಹಿಸಿಕೊಂಡಿದ್ದರು. ಇವರ ಸಂಘಟನಾಸಕ್ತಿಯನ್ನು ಪರಿಗಣಿಸಿ ಶಾಂತಣ್ಣನವರನ್ನು ಇವರನ್ನು ಕೆ ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ದಿನಾಂಕ 27/7/2009 ರಲ್ಲಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅದರಂತೆ ದಿನಾಂಕ 8/12/2022 ರಲ್ಲಿ ಕೇಂದ್ರೀಯ ಎ ಆಯ್ ಟಿ ಯು ಸಿ ಯೂನಿಯನ್ ನಲ್ಲಿ ಕಾರ್ಯನಿರ್ವಾಹಿಸಿರುತ್ತಾರೆ. ಇವರು ತಮ್ಮ ಸೇವಾವಧಿಯಲ್ಲಿ ಸಂಸ್ಥೆಯ ಸಿಬ್ಬಂದಿಗಳಲ್ಲಿ ಉಂಟಾಗುವ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪಾರದರ್ಶಕವಾಗಿ, ಕಾನೂನುಬದ್ದವಾದ ಸಲಹೆಗಳನ್ನು ನೀಡಿ ಉತ್ತಮ ಜನಸ್ಪಂಧನೆಯನ್ನು ನೀಡಿದ ಕೀರ್ತಿಗೆ ಪಾತ್ರರಾಗಿರುತ್ತಾರೆ. 

ಇವರ ಸ್ನೇಹಮಯ ಪ್ರವೃತ್ತಿ,ಸರಳ ಸಜ್ಜನಿಕೆಯ ಶಾಂತಸ್ವಭಾವ ಎಲ್ಲರೂ ನಮ್ಮವರೇ ಎನ್ನುವ ಮನೋಭಾವನೆಯಿಂದ ಸಮಸ್ತ ಇಲಾಖೆಯ ಸಿಬ್ಬಂದಿವರ್ಗದವರಲ್ಲಿ ಪ್ರೀತಿಪಾತ್ರರಾಗಿರುತ್ತಾರೆ. ಇವರ ಈ ಒಂದು ಸರಳ ಸಜ್ಜನಿಕೆಯ ಸ್ವಭಾವದಿಂದಾಗಿ ಸಮಸ್ತ ಸಿಬ್ಬಂದಿವರ್ಗದವರಲ್ಲಿ ಹಾಗೂ ಗದಗ ಜಿಲ್ಲೆಯಾದ್ಯೆಂತ ಚಿರಪರಿಚಿತರಾಗಿರುತ್ತಾರೆ. ಅದರಂತೆ ಧಾರ್ಮಿಕ ಕ್ಷೇತ್ರದಲ್ಲಿಯು ತಮ್ಮ ಒಂದು ಸೇವೆಯನ್ನು ಸಲ್ಲಿಸಿದ್ದಾರೆ.ಅದರಲ್ಲಿ ಪ್ರಮುಖವಾಗಿ ದುರ್ಗಾದೇವಿ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ದೈವಿಕ ಸೇವೆಯನ್ನು ಸಲ್ಲಿಸಿದ್ದಾರೆ.  

ಶಾಂತಣ್ಣ ಅಡಿವೆಪ್ಪ ಮಾಳವಾಡರವರು ಇಂದು ತಮ್ಮ ಸೇವಾನಿವೃತ್ತಿ ಹೊಂದುತ್ತಿರುವುದರಿಂದ ಅವರ ಇ ಒಂದು ನಿವೃತ್ತಿ ಜೀವನವು ಸುಖಮಯವಾಗಿ ಸಂತೋಷದಿಂದ ಕೂಡಿರಲಿ ಮತ್ತು ದೇವರು ಮುಳವಾಡ ರವರಿಗೆ ಉತ್ತಮ  ಆರೋಗ್ಯ ಆಯಸ್ಸು ಕರುಣಿಸಲಿ ಎಂದು  ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್  ಗದಗ ವಿಭಾಗದ ಸರ್ವ ಸದಸ್ಯರು  ಗದಗ ಬೆಟಗೇರಿ ನಗರಸಭೆಯ ಮಾಜಿ ನಾಮ ನಿರ್ದೇಶೀತ ಸದಸ್ಯರಾದ ಜನಾಬ ಚಾಂದಸಾಬ್ ಕೊಟ್ಟೂರ್ ರವರು  ದೇವರಲ್ಲಿ ಪ್ರಾರ್ಥಿಸಿರುತ್ತಾರೆ.