ಭ್ರಷ್ಠಾಚಾರದ ಧ್ವನಿ ತನಿಖೆಗೆ ಪಟ್ಟು ಆರೋಪ, ಪ್ರತ್ಯಾರೋಪ

ಬಾಗಲಕೋಟೆ18: ವಿವಿಧ ಕಾರಣಗಳಿಂದ ಮೂರದಿಂದ ನಾಲ್ಕು ಬಾರಿ ಮುಂದೂಡಲ್ಪಟ್ಟಿದ್ದ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಶುಕ್ರವಾರ ನಡೆಯಿತಾದರೂ ಅಕ್ಷರಶಃ ರಣಾಂಗಣವಾಗಿತ್ತು.

ಯಾರದೋ ಮಾತಿಗೆ ಇನ್ನಾರೋ ಉತ್ತರ ಕೊಡುವುದು, ಸಂಬಂಧಿಸಿದವರು ಮೌನಕ್ಕೆ ಶರಣಾಗುವುದು, ಅಧ್ಯಕ್ಷರ ಬಳಿ ಹೋಗಿ ಧರಣಿಗೆ ಕೂಡ್ರೂವುದು, ಸದಸ್ಯರ ಯಾವ ಪ್ರಶ್ನೆಗೆ ಉತ್ತರ ಸಿಗದೇ ಇರುವುದು, ಸಂಬಂದ ಇಲ್ಲದವರು ಸಮನ್ವಯ ಸಾಧಿಸಲು ಮುಂದಾಗುವುದು ನಡೆಯಿತೆ ವಿನಃ ಜಿಲ್ಲೆಯ ಅಭಿವೃದ್ದಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಪರಿಣಾಮಕಾರಿ ಚಚರ್ೆಗಳು ನಡೆಯಲಿಲ್ಲ.

ಜಿ.ಪಂ ಸದಸ್ಯ ಶಿವಾನಂದ ಪಾಟೀಲ ಮದ್ಯೆ ಪ್ರವೇಶಿಸಿ ಸಭೆ ಆರಂಭಕ್ಕೆ ನಾಡಿನಲ್ಲಿ ನಿಧನಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಬೇಕಾದುದು ಸಂಪ್ರದಾಯ, ಆದರೆ ಇಲ್ಲಿ ಇತ್ತೇಚೆಗೆ ನಿಧನರಾದ ಪೇಜಾವರ ಶ್ರೀ ಮತ್ತು ಚಿದಾನಂದ ಮೂತರ್ಿ ಅವರ ನಿಧನಕ್ಕೆ ಏಕೆ ಸಂತಾಪ ಸೂಚಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. 

ಸದಸ್ಯರ ಮಾತಿನ ಮಧ್ಯೆಯೆ ಶಶಿಕಾಂತ ಪಾಟೀಲ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ಏಕೆ ವರದಿ ಕೊಡುತ್ತಿಲ್ಲ. ಅವ್ಯವಹಾರ ತನಿಖೆ ನಡೆಯುತ್ತಿರುವಾಗಲೇ ಕಾಮಗಾರಿಗೆ ಏಕೆ ಚಾಲನೆ ನೀಡಿದಿರಿ, ನಾವೇನೂ ದನ ಕಾಯುವವರಾ? ಯಾರದೋ ಮನೆ ಕಾಯ್ದು ನಾವು ಜಿ.ಪಂಗೆ ಬಂದಿಲ್ಲ ಎನ್ನುತ್ತಲೇ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಡುವೆ ಪರಸ್ಪರ ವಾಗ್ದಾಳಿ ಶುರುವಾಯಿತು. ಸಭೆ ರಣಾರಂಗವಾಗಿ ಮಾರ್ಪಟ್ಟಿತು. ಅವ್ಯವಹಾರ ತನಿಖೆ ನಡೆಸಲು ನೇಮಕ ಮಾಡಿದ್ದ ಸಮಿತಿ ವರದಿ ಕೊಡಿ ಇಲ್ಲವೇ ರಾಜಿನಾಮೆ ಕೊಡುವಂತೆ ಪಟ್ಟು ಹಿಡಿದರು. ಇಲ್ಲವೇ ನಾನೇ ರಾಜೀನಾಮೆ ಕೊಡುತ್ತೇನೆ ಎಂದರು. ಇಷ್ಟೇಲ್ಲಾ ಆಗುತ್ತಿದ್ದರೂ ಜಿ.ಪಂ ಸಿಇಓ ಅವರು ಮೌನಕ್ಕೆ ಶರಣಾಗಿದ್ದರು. 

ಹೂವಪ್ಪ ರಾಠೋಡ ಮಾತನಾಡಿ ಪ್ರತಿಯೊಂದು ಇಲಾಖೆಯಲ್ಲಿ ಲೋಕದೋಶವಿಲ್ಲದೇ ಕೆಲಸ ಕಾರ್ಯಗಳು ನಡೆಯಬೇಕು. ಕೆಲವೊಂದು ಕಾಮಗಾರಿಗಳಲ್ಲಿ ಶೇ.50 ರಷ್ಟು ಕೆಲಸವಾಗದರೆ ಇನ್ನು ಶೇ.50 ರಷ್ಟು ಕೆಲಸವಾಗಿರದೇ ಹಣ ಡ್ರಾ ಆಗಿರುವ ಬಗ್ಗೆ ಸಭೆಗೆ ತಿಳಿಸಿದರು. 

  ಜಿ.ಪಂ ಸದಸ್ಯ ಶಶಿಕಾಂತ ಪಾಟೀಲ ಅವರು ಇಲಾಳ ಗ್ರಾಮದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಳೆದ 2017 ರಲ್ಲಿ ಪ್ರಾರಂಭವಾದರೂ ಸಹ ಇನ್ನು ಕಾಮಗಾರಿ ಮುಗಿದಿಲ್ಲ. ಅಲ್ಲದೇ ತನಿಖೆಗೆ ಒಳಪಡಿಸಲು ತಿಳಿಸಿದರು ಇದರ ಬಗ್ಗೆ ಯಾವುದೇ ಕ್ರಮಗಳು ಆಗದಿರುವ ಬಗ್ಗೆ ಸಭೆಯಲ್ಲಿ ತಿಳಿಸಿದಾಗ ಇದಕ್ಕೆ ಉತ್ತರಿಸಿದ ಜಿ.ಪಂ ಸಿಇಓ ಗಂಗೂಬಾಯಿ ಮಾತನಾಡಿ ಈಗಾಗಲೇ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲಾಗಿದ್ದು, ಸರಕಾರಕ್ಕೆ ಪತ್ರ ಬರೆಯುವ ಮೂಲಕ ಉಳಿದ ಕಾಮಗಾರಿಯನ್ನು ಟೆಂಡರ ಕೊಬೇಕಾಗಿದೆ ಅದಕ್ಕಾಗಿ ಶೇ.100 ರಷ್ಟು ನೀರು ಕೊಡಲು ಸಾಧ್ಯವಾಗುತ್ತಿಲ್ಲವೆಂದರು.

   ಜಿ.ಪಂ ವ್ಯಾಪ್ತಿಯ ವಿವಿಧ ಕ್ರೀಯಾಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಭೆಯಲ್ಲಿ ಜಿ.ಪಂ ಸದಸ್ಯರು ತಿಳಿಸಿದಾಗ ಇದಕ್ಕೆ ಉತ್ತರಿಸಿದ ಜಿ.ಪಂ ಸಿಇಓ ಮಾನಕರ ಅವರು ನರೇಗಾ ಯೋಜನೆಯಡಿ ವಿವಿಧ ಕ್ರೀಯಾ ಯೋಜನೆಗಳಿಗೆ ಆಯಾ ತಾಲೂಕಾ ಕೇಂದ್ರಗಳಲ್ಲಿಯೇ ಒಟ್ಟು 175 ಕ್ರೀಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗ್ರಾಮ ಮಟ್ಟದಿಂದ ತಾಲೂಕಾ ಹಂತ ಹಾಗೂ ತಾಲೂಕಾ ಹಂತದಿಂದ ಜಿಲ್ಲಾ ಹಂತಕ್ಕೆ ಬಂದ ಪ್ರತಿಯೊಂದು ಕ್ರೀಯಾಯೋಜನೆಗಳಿಗೆ ಯಾವುದೇ ವಿಳಂಬಕ್ಕ ಅವಕಾಶ ಕೊಡದೇ ಅನುಮೋದನೆ ನೀಡಿರುವುದಾಗಿ ಸಭೆಗೆ ತಿಳಿಸಿದರು.

ಮುಧೋಳ ತಾಲೂಕಾ ಪಂಚಾಯತಿ ವತಿಯಿಂದ ನಿಮರ್ಿಸಲಾದ 5 ಮಳಿಗೆಗಳ ಬಾಡಿಗೆ ಪ್ರತಿ ತಿಂಗಳು ಬರುತ್ತಿಲ್ಲ. ಮೊದಲು ಬಾಡಿಗೆ ಬರುತ್ತಿದ್ದು, ಈಗ ಕಳೇದ 20 ತಿಂಗಳಿಂದ ಬಾಡಿಗೆ ಬಂದಿರುವುದಿಲ್ಲ ಎಂದು ಜಿ.ಪಂ ಸದಸ್ಯ ಮಹಾಂತೇಶ ಉದಪುಡಿ ಸಭೆಗೆ ತಿಳಿಸಿದಾಗ ಈ ಕುರಿತು ಬಾಡಿಗೆದಾರರಿಗೆ ಅಂತಿಮ ನೋಟಿಸ್ ನೀಡಲಾಗಿದ್ದು, ವಸೂಲಿ ಮಾಡಲಾಗುವುದೆಂದು ತಿಳಿಸಿದರು.

 ಅಲ್ಲದೇ ಇತರೆ ಜಿ.ಪಂ ಸದಸ್ಯರು ತಮ್ಮ ತಮ್ಮ ಕ್ಷೇತ್ರದಲ್ಲಾದ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷರು ಸೂಚಿಸಿದರು. ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.