ಧರ್ಮರಕ್ಷಣೆಗಾಗಿ ಸರ್ವರೂ ಒಗ್ಗಟ್ಟಾಗಬೇಕಿದೆ: ವೈದ್ಯ

ಗಂಗಾವತಿ 12: ನಗರದ ಶಂಕರಮಠದ ಶಾರದಾದೇಗುಲದಲ್ಲಿ ಶರಣ್ನವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಾರ್ಥಕವಾಗಿ ನವಚಂಡಿಹವನ ವೇದಮೂರ್ತಿ ಮಹೇಶ್ಬಟ್ಜೋಶಿ ಹಾಗೂ ತಂಡದವರಿಂದ ಶುಕ್ರವಾರದಂದು ಅಪಾರಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸಂಪನ್ನಗೊಂಡಿತು. ವಿದ್ಯಾತೀರ್ಥ ನಾರ್ವೆ ಅಕ್ಷಯ ಅಳವಂಡಿ ಕಾರ್ತಿಕ್ ಪ್ರಕಾಶ್ ಅಳವಂಡಿ ಜಂಬಣ್ಣ ಐಲಿ ದಂಪತಿಗಳು ಹೋಮದ ನೇತೃತ್ವವನ್ನುವಹಿಸಿದ್ದರು. ಬಳಿಕ ಜರುಗಿದಕುಮಾರಿಕಾಪೂಜೆಯನ್ನುದೇವಸ್ಥಾನದಪ್ರಧಾನಅರ್ಚಕಕುಮಾರ್ಭಟ್ . ನೇತೃತ್ವದಲ್ಲಿಶಾರದಾಶಂಕರಭಜನಾಮಂಡಳಿಯಸದಸ್ಯರುವಿಶೇಷಪೂಜೆಯನ್ನುನೆರವೇರಿಸಿದರು. ನಾರಾಯಣವೈದ್ಯರಾಘವೇಂದ್ರಅಳವಂಡಿ. ಶ್ರೀಪಾದ್ಜಗನ್ನಾಥ್ವೇಣುಗೋಪಾಲ್ ಅಳವಂಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.  

ಸಂಜೆಜರುಗಿದ ಲಲಿತಾ ಸಹಸ್ರ ನಾಮ ಹಾಗೂ ಕುಂಕುಮಾರ್ಚನೆಯ ಬಳಿಕ ಜರುಗಿದ ಧರ್ಮಸಭೆಯನ್ನು ಉದ್ದೇಶಿಸಿ ಧರ್ಮದರ್ಶಿ ನಾರಾಯಣರಾವ ವೈದ್ಯಮಾತನಾಡಿಸನಾತನಧರ್ಮರಕ್ಷಣೆಗಾಗಿ ಪ್ರತಿಯೊಬ್ಬರು ಒಂದಾಗಬೇಕಾದ ಅವಶ್ಯಕತೆಇದೆ. ಇದಕ್ಕಾಗಿ ಮಠದ ಉಭಯಜಗದ್ಗುರು ಭಾರತಿ ತೀರ್ಥಮಹಾಸ್ವಾಮಿಗಳು ಹಾಗೂಶ್ರೀವಿದುಶೇಖರ ಮಹಾಸ್ವಾಮಿಗಳು ಧರ್ಮಜಾಗೃತಿಗಾಗಿ ದೇಶವಿದೇಶದಲ್ಲಿ ಸಂಚರಿಸುತ್ತಿದ್ದಾರೆ.  

ಸುಮಾರು 13 ಲಕ್ಷ ಅಧಿಕ ಕುಂಕುಮಾರ್ಚನೆ ಹಾಗೂ 12 ಲಕ್ಷ ಅಧಿಕ ಲಲಿತಾ ಸಹಸ್ರನಾಮ ಪಾರಾಯಣ ಜರುಗಿದ್ದು ಸರ್ವ ಸಮಾಜದ ಮಹಿಳೆಯರು ಪಾಲ್ಗೊಂಡ ಪ್ರಯುಕ್ತ ಶರಣ್ನವರಾತ್ರಿ ಯಶಸ್ವಿಯಾಗಲು ಸಹಕಾರಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆಲ್ಲಿ ಸಹಸ್ರನಾಮಗ್ರಂಥ ಕುಂಕುಮಾರ್ಚನೆ ಜೊತೆಗೆ ಶ್ರೀಚಕ್ರ ಹಾಗೂ ಕವಿತಾಅಳವಂಡಿಕರ್ ಅವರ ಪ್ರಾಯೋಜಕತ್ವದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜಾ ಗ್ರಂಥವನ್ನು ಉಚಿತವಾಗಿ ಭಕ್ತಾದಿಗಳಿಗೆ ಕಲ್ಪಿಸಲಾಯಿತು.ದತ್ತಾತ್ರೇಯ ಜೋಶಿ ಅವರ ಧರ್ಮಪತ್ನಿ ಹಾಗೂ ಕುಟುಂಬಸ್ಥರಿಂದ ಮಹಿಳೆಯರಿಗೆ ಉಡಿತುಂಬುವಿಕೆ ನಡೆಸಲಾಯಿತು.