ಸರ್ವರಲ್ಲೂ ಒಂದಿಲ್ಲೊಂದು ಕಲೆ ಇರುತ್ತದೆ

ಲೋಕದರ್ಶನ ವರದಿ

ಬೈಲಹೊಂಗಲ 22: ಸರ್ವರಲ್ಲೂ ಒಂದಿಲ್ಲೊಂದು ಕಲೆ ಇರುತ್ತದೆ. ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದಾಗ ಕಲೆಗೆ ಒಂದು ಒಂದು ಬೆಲೆ ಸಿಗುತ್ತದೆ ಎಂದು ಗದಗ ತೊಂಟದಾರ್ಯಮಠದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

    ತಾಲೂಕಿನ  ನಾಗನೂರಿನಲ್ಲಿ ಕಾಯಕಯೋಗಿ ಡಾ.ಶಿವಬಸವ ಮಹಾಸ್ವಾಮೀಜಿ ಪುಣ್ಯಸ್ಮರಣೆ ರಜತ ಮಹೋತ್ಸವ ಹಾಗೂ ಸಾವಳಗೀಶ್ವರ ದೇವರ ನಿರಂಜನ ಪಟ್ಟಾಭಿಷೇಕ ಕಾರ್ಯದಂಗವಾಗಿ ಅಖಿಲ ಕರ್ನಾಟಕ ಸರ್ವಕಲ್ಲಾವಿದರ ಹಿತ ರಕ್ಷಣಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ನಡೆದ  ಸಾಂಸ್ಕೃತಿಕ ಸೌರಭವನ್ನು ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಹಮ್ಮಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಜನಪದ ಗೀತೆಗಳು, ಸುಗ್ಗಿ ನೃತ್ಯ, ರೈತ ಗೀತೆ, ಜೋಗುತಿ ನೃತ್ಯ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.

    ನಾಗನೂರ ರುದ್ರಾಕ್ಷಿ ಮಠದ ಡಾ. ಸಾವಳಗೀಶ್ವರ ಸ್ವಾಮೀಜಿ, ಜನಪದ ಕಲಾವಿದ ಶಂಕರ ಕೊತವಾಳ ಹಾಗೂ ಸರ್ವ ಕಲಾವಿದರ ಹಿತ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ರಮೇಶ ಪರವಿನಾಯ್ಕರ, ಬಾಬಣ್ಣ ಶಿವನಾಯ್ಕರ,ರವಿ ಶಿವನಾಯ್ಕರ ಮತ್ತಿತರರು ಇದ್ದರು.