ಲೋಕದರ್ಶನ ವರದಿ
ಸ್ವಾವಲಂಭಿ ಬದುಕಿಗಾಗಿ ರೈತರೆಲ್ಲರೂ ಕಾರ್ಯಕ್ರಮಕ್ಕೆ ಬನ್ನಿ : ಸಂಗಮೇಶ ಸಗರ ಕರೆ
ವಿಜಯಪುರ : ಮೇ 7 ರಿಂದ 9 ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶ, ಕೃಷಿಮೇಳ, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರಿಂದ ಚಿಂತನಾ ಘೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವಾಲ್ ಪೋಸ್ಟರನ್ನು ಜಿಲ್ಲೆಯ ವಿವಿಧ ಮಠಾಧಿಶರು ಹಾಗೂ ಸರಕಾರಿ ಅಧಿಕಾರಿಗಳು ಮತ್ತು ಮುಖಂಡರಿಂದ ಬಿಡುಗಡೆಗೋಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು
ದಿನಾಂಕ 7 ರಂದು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಬೃಕತ್ ರೈತ ಶೋಭಾಯಾತ್ರೆಯೂ ವಿವಿಧ ಕಲಾ ತಂಡಗಳಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ ಹಣಮಂತ್ರಾಯ ರಂಗಮಂದಿರದವರೆಗೆ ಆಗಮಿಸಿ ಕೃಷಿ ಮೇಳವನ್ನು ಉದ್ಘಾಟಿಸಿ 3 ದಿನಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಪ್ರಕಠಣೆಯ ಮುಖಾಂತರ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ರಾಜ್ಯ ಮಟ್ಟದ ಬ್ರಹತ್ ರೈತ ಜಾಗೃತಿ ಸಾಮಾವೇಶವನ್ನು ಆಯೋಜನೆ ಮಾಡಲಾಗಿದೆ. ಈ ವರ್ಷ ವಿಶೇಷವಾಗಿ 3 ದಿನಗಳ ಕಾಲ ನಮ್ಮ ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ರೈತರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. 3 ದಿನಗಳ ಪ್ರತಿನಿತ್ಯ ಆಗಮಿಸುವ ರೈತರಿಗೆ ಬೆಳಿಗ್ಗೆ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ನಾಡಿನ ಹೆಸರಾಂತ 15 ಕ್ಕೂ ಅಧಿಕ ಸ್ವಾಮೀಜಿಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶಿವಚನ ನೀಡಲಿರುವರು ಹಾಗೆ ಪ್ರತಿನಿತ್ಯ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ವಿದ್ಯುತ್, ವಿಮೂಲ್ (ನಂದಿನಿ) ಸೇರಿದಂತೆ ರೈತರಿಗೆ ಸಂಬಂದಿಸಿದ ಇಲಾಖೆಗಳ ವಿಜ್ಞಾನಿಗಳಿಂದ ಹಾಗೂ ಅನುಭವಿ ಪ್ರಗತಿಪರ ರೈತರಿಂದ ಘೋಷ್ಟಿ ನಡೆಯಲಿವೆ. 100 ಕ್ಕೂ ಅಧಿಕ ಕೃಷಿ ಮಳಿಗೆಗಳು ಕೂಡಾ ಬರಲಿವೆ.
ರೈತ ಕವನ ಘೋಷ್ಟಿ, ರೈತ ಚಿತ್ರಕಲಾ ಸ್ಪರ್ಧೆ, ರೈತ ರಂಗೋಲಿ ಸ್ಪರ್ಧೆ ಹಾಗೂ ಹಂತಿ ಪದ
ಸೇರಿದಂತೆ ಸಂಜೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನ ರೈತರತ್ನ ಪ್ರೋ ಎಂ.ಡಿ. ನಂಜುಡಸ್ವಾಮಿಯವರ ಜೀವನಾಧಾರಿತ ಡೈರೆಕ್ಟ ಎಕ್ಷನ್ ಎಂಭ ನಾಟಕವನ್ನು ಬೆಂಗಳೂರಿನ ಕಲಾ ತಂಡದಿಂದ ಪ್ರಸ್ತುತಗೊಳ್ಳಲಿದೆ ಜಿಲ್ಲೆಯ ಎಲ್ಲಾ ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ರೈತರ ಏಳ್ಗೆಗಾಗಿ, ಜಾಗೃತಿಗಾಗಿ, ರೈತರನ್ನು ಸಾಲಮುಕ್ತರನ್ನಾಗಿಸಿ ರೈತ ಆತ್ಮಹತ್ಯೆಯಂತಹ ಪೀಡಗನ್ನು ಬೇರು ಸಮೇತ ಕಿಳಬೇಕಾದರೆ ಇಂತಹ ಸಮಾವೇಶಗಳು ಬಹಳ ಮುಖ್ಯವಾಗಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ರಾಜ್ಯದ ಎಲ್ಲಾ ರೈತರಿಗೂ ಮುಕ್ತವಾಗಿ ಆವ್ಹಾನ ನೀಡಿದರು.