ಎಲ್ಲಾ ಇಲಾಖೆಗಳ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ: ಸುನೀಲ್ಕುಮಾರ್

ಕೊಪ್ಪಳ 30: ಜಿಲ್ಲೆಯ ಎಲ್ಲಾ ಸಕರ್ಾರಿ ಇಲಾಖೆಗಳು, ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು

                ಕೊಪ್ಪಳ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

                ಕನ್ನಡ ಅಭಿವೃದ್ಧ ಪ್ರಾಧಿಕಾರವು ಕನ್ನಡ ಅಭಿವೃದ್ಧಿಗಾಗಿ ಕನ್ನಡ ಅನುಷ್ಠಾನದ ಕುರಿತು 20 ಅಂಶಗಳನ್ನು ನೀಡಿದೆ ಎಲ್ಲಾ ಇಪ್ಪತ್ತು ಅಂಶಗಳನ್ನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕುಇದರ ಜೊತೆ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗಾಗಿಯೂ ಸಹ ಪ್ರಾಧಿಕಾರವು ನಿದರ್ೇಶಿಸಿದೆಸಾಂಸ್ಕೃತಿ ಕ್ಷೇತ್ರದಲ್ಲಿ ಪ್ರವಾಸೋಧ್ಯಮ ಪ್ರಮುಖ ಪಾತ್ರದ್ದಾಗಿದೆಜಿಲ್ಲೆಯಲ್ಲಿ ಉತ್ಸವಗಳು ನಡೆಯಬೇಕುಇದರಿಂದಾಗಿ ಪ್ರವಾಸೋಧ್ಯಮವು ಸಾಕಷ್ಟು ಅಭಿವೃದ್ಧಿಗಾಗಿಯಾಗಲಿದೆಹಂಪಿ ಉತ್ಸವದಂತೆ ಆನೆಗುಂದಿ ಉತ್ಸವವು ಸಹ ನಡೆಯಬೇಕುಆದರೆ ಬರದ ಕಾರಣದಿಂದಾಗಿ ಉತ್ಸವಗಳು ಬೇಡ ಎಂಬುವುದು ಸಾರ್ವಜನಿಕರ ಬೇಡಿಕೆಯಾಗಿದೆಆದರೆ ಉತ್ಸವಗಳಿಗೆ ಸಕರ್ಾರವು ಅನುದಾನ ಬಿಡುಗಡೆ ಮಾಡುತ್ತಿದ್ದು, ಕಡಿಮೆ ವೆಚ್ಚದಲ್ಲಾದರೂ ಉತ್ಸವಗಳನ್ನು ಆಚರಿಸಲೇ ಬೇಕುಎಲ್ಲಾ ಸಾರ್ವಜನಿಕರು ಸಹ ತಮ್ಮ ಅಂಗಡಿ, ಹೋಟೆಲ್ ಹೀಗೆ ತಮ್ಮ-ತಮ್ಮ ವ್ಯವಹಾರಗಳಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಕೆಮಾಡಬೇಕುಜಿಲ್ಲೆಯಲ್ಲಿ ಕನ್ನಡವನ್ನು ಅನುಷ್ಠಾನ ಮಾಡುವ ನೀಟ್ಟಿನಲ್ಲಿ ಅಧಿಕಾರಿಗಳಿಗಿಂತ ಮೊದಲು ಸಾರ್ವಜನಿಕರಿಂದಲೇ ಇಂತಹ ಚಳುವಳಿಗಳು ಪ್ರಾರಂಭವಾಗಬೇಕು

                ಪ್ರಾಧಿಕಾರದ ಕನ್ನಡ ಅನುಷ್ಠಾನದ 20 ಅಂಶಗಳನ್ವಯ ಜಿಲ್ಲೆಯ ಎಲ್ಲಾ ಇಲಾಖೆಗಳ ಅಂತಜರ್ಾಲ ತಾಣದ ಪ್ರಧಾನ ಪುಟ ಕನ್ನಡದಲ್ಲಿ (ಡಿಫಾಲ್ಟ್ ಪೇಜ್) ರೂಪಿಸುವುದು ಮತ್ತು ಒಳಪುಟದ ಮಾಹಿತಿಗಳೆಲ್ಲವೂ ಕನ್ನಡದಲ್ಲಿಯೇ ಇರಬೇಕುಎಲ್ಲಾ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕುಆಡಳಿತಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು, ಕಡತಗಳ ನಿರ್ವಹಣೆ, ತಂತ್ರಾಂಶಗಳ ಅಳವಡಿಕೆ, ಅಂತಜರ್ಾಲ ತಾಣ, ಸಾಮಾಜಿಕ ಜಾಲತಾಣ, ಯೋಜನೆಗಳ ಪ್ರಚಾರ, ಜಾಹಿರಾತು ಇತ್ಯಾದಿ ಎಲ್ಲಾ ಕಛೇರಿ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಕನ್ನಡ ಯುನಿಕೋಡ್ ತಂತ್ರಾಂಶವನ್ನೇ ಬಳಸಬೇಕುಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ, ನಡವಳಿಗಳೆಲ್ಲವನ್ನೂ ಕಡ್ಡಾಯವಾಗಿ ಕನ್ನಡದಲ್ಲಿ ಹೊರಡಿಸಬೇಕುಎಲ್ಲಾ ಕಾಗದಗಳ ತೆಲೆಬರಹಗಳು (ಲೆಟರ್ ಹೆಡ್) ಅಥವಾ ವಿಸಿಟಿಂಗ್ ಕಾಡರ್್ಗಳು, ಮೊಹರುಗಳು, ಲೆಕ್ಕಪತ್ರಗಳು ಮತ್ತು ಎಲ್ಲಾ ವಹಿಗಳು ಕನ್ನಡದಲ್ಲಿರಬೇಕುಸಚಿವಾಲಯ ಮಟ್ಟದಲ್ಲಿ ಕನ್ನಡ ಅನುಷ್ಠಾನ ವಿಭಾಗವನ್ನು ರಚನೆ ಮಾಡಿ ಕನ್ನಡ ಅನುಷ್ಠಾನದ ಪ್ರಗತಿಯ ವಿವರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕುಕನ್ನಡ ಅಭಿವೃದ್ಧಿಯ ಉದ್ದೇಶಗಳನ್ನು ನೇರವೇರಿಸಲು ಜವಾಬ್ದಾರರನ್ನಾಗಿ ಮಾಡಿರುವ ಅಧಿಕಾರಿಗಳು ಸಕರ್ಾರದ ಸುತ್ತೋಲೆ ಡಿ.ಪಿ.ಆರ್ 24 ಪಿಒಎಲ್ 80, ದಿ. 5/1/1982ರನ್ವಯ ಅಧಿನ ಕಚೇರಿ/ ಶಾಖೆಗಳ ತನಿಖೆ ಮಾಡಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕುಇಲಾಖಾ ವಾಷರ್ಿಕ ಆಡಳಿತ ವರದಿಗಳು, ವಾಷರ್ಿಕ ವರದಿಗಳು, ಆಯವ್ಯಯ ದಾಖಲೆಗಳು ಮತ್ತು ಇತರೆ ಎಲ್ಲಾ ಅಗತ್ಯ ದಾಖಲಾತಿಗಳು ಕನ್ನಡದಲ್ಲಿರಬೇಕು ಹಾಗೂ ವಾಷರ್ಿಕ ವರದಿಗಳ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದುಕನ್ನಡ ಅನುಷ್ಠಾನದ ಪ್ರಗತಿಯ ವರದಿಯನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ನಿಗಧಿತ ನಮೂನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು-ಟೆಂಡರ್, ಜಾಹೀರಾತು, ದರಪಟ್ಟಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು.           

                ಡಾ. ಸರೋಜಿನಿ ಮಹಿಷಿ ವರದಿಯನ್ವಯ ಎಲ್ಲಾ ಸಕರ್ಾರಿ ಹಾಗೂ ಖಾಸಗಿ ಸಂಸ್ಥೆ, ಕಾಖರ್ಾನೆಗಳಲ್ಲಿ, ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ನೌಕರರನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ನೀಡುವುದುಪ್ರತಿ ಮೂರು ತಿಂಗಳಿಗೊಮ್ಮೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿದರ್ೇಶಕರು/ಉಪ ನಿದರ್ೇಶಕರುಗಳು ಎಲ್ಲಾ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದುಜಿಲ್ಲೆಯಲ್ಲಿರುವ ಕೇಂದ್ರ ಸಕರ್ಾರಿ ಇಲಾಖೆಗಳು, ಉದ್ದಿಮೆಗಳು, ಸಂಸ್ಥೆಗಳಲ್ಲಿ ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕಾಲಿಕ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕುಕನ್ನಡ ಅಭಿವೃದ್ಧಿ ಕಾರ್ಯಕ್ರಮ ಸಭೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಧಾನವಾಗಿ ಚಚರ್ಿಸಿ ಪ್ರತಿ ಜಿಲ್ಲೆಯ ನಡುವಳಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದುಜಿಲ್ಲೆಯ ಪ್ರಮುಖ ರಸ್ತೆಗಳಿಗೆ ನಾಡಿನ ಪ್ರಸಿದ್ಧ ಸಾಹಿತಿಗಳ, ಜಿಲ್ಲೆಯ ಹಿರಿಯ ಹೊರಟಗಾರರ, ಗಣ್ಯ ವ್ಯಕ್ತಿಗಳ ಹೆಸರನ್ನು ಇಡುವ ಕ್ರಮಕೈಗೊಳ್ಳುವುದು ಮತ್ತು ವೃತ್ತಗಳಲ್ಲಿ ಜಿಲ್ಲೆಗೆ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳ ಪ್ರತಿಮೆಗಳ ಅನಾವರಣಗೊಳಿಸುವುದುಬ್ಯಾಂಕ್ಗಳಲ್ಲಿ ಜನೋಪಯೋಗಕ್ಕೆ ಬಳಸುವ ಚಲನ್, ನಮೂನೆ, ಅಜರ್ಿಗಳನ್ನು ಕನ್ನಡದಲ್ಲಿಯೂ ಮುದ್ರಿಸಬೇಕು ಹಾಗೂ ಬ್ಯಾಂಕ್ಗಳ ಎಟಿಎಂ ಯಂತ್ರಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದುಜಿಲ್ಲೆಯ ಎಲ್ಲಾ ರಸ್ತೆ, ರಾಜ್ಯ, ರಾಷ್ಟ್ರ ಹೆದ್ದಾರಿಗಳಲ್ಲಿರುವ ನಾಮಫಲಕಗಳು, ಹೆದ್ದಾರಿ ಫಲಕಗಳು, ಮಾರ್ಗ ಸೂಚಿಗಳು ಹಾಗೂ ವಿಷಯ ಸೂಚಿಗಳನ್ನು ಕನ್ನಡದಲ್ಲಿ ಬರೆಸುವುದುಕನ್ನಡ ಭಾಷಾ ಅಧಿನಿಯಮ 2015 ರನ್ವಯ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು 1 ರಿಂದ 10ನೇ ತರಗತಿಯವರಿಗೆ ಪ್ರಥಮ ಅಥವಾ ದ್ವೀತಿಯ ಭಾಷೆಯಾಗಿ ಕಡ್ಡಾಯವಾಗಿ ಭೋಧಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ಶಾಲೆಗಳಿಂದ ಕ್ರೂಢೀಕೃತ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು

    ಆದ್ದರಿಂದ ಎಲ್ಲರೂ ಕನ್ನಡ ಅನುಷ್ಠಾನಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿದರ್ೇಶಕರಾದ ಕೃಷ್ಣಮೂತರ್ಿ ದೇಸಾಯಿ ಅವರು ಮಾತನಾಡಿ, ಕನ್ನಡ ಅನುಷ್ಠಾನಕ್ಕಾಗಿ ಕೊಪ್ಪಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯನ್ನು ರಚಿಸಿದ್ದು, ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದಾರೆಜಿಲ್ಲೆಯ ಐದು ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರು ಸದಸ್ಯ ಕಾರ್ಯದಶರ್ಿಯಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರುಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರುಸಮಿತಿ ಸದಸ್ಯರಾದ ಎಸ್.ಎಸ್. ಪಾಟೀಲ್, ಅಲ್ಲಪ್ರಭು ಬೆಟ್ಟದೂರ, ಸಿರಾಜ್ ಬಿಸರಳ್ಳಿ, ರವಿಂದ್ರ ಬಾಕಳೆ ಮತ್ತು ಹನುಮೇಶ ಗುಮಗೇರಿ ಉಪಸ್ಥಿತರಿದ್ದು, ಉಪಯುಕ್ತ ಸಲಹೇಗಳನ್ನು ನೀಡಿದರು.