ಮುಂಬೈ, ಜ.28 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಋತುವಿನ ಪ್ರಾರಂಭದ ಮೊದಲು, ಎಲ್ಲಾ ಎಂಟು ಫ್ರ್ಯಾಂಚೈಸ್ ತಂಡಗಳ ಆಟಗಾರರನ್ನು ಒಳಗೊಂಡ ಆಲ್-ಸ್ಟಾರ್ ಪಂದ್ಯ ಆಡಲಾಗುತ್ತದೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಲ್-ಸ್ಟಾರ್ ಪಂದ್ಯವನ್ನು ಆಡಲಾಗುತ್ತದೆ. ಪಂದ್ಯಾವಳಿಯ ಉದ್ಘಾಟನಾ ಪಂದ್ಯದ ಮೂರು ದಿನಗಳ ಮೊದಲು ಪಂದ್ಯ ನಡೆಯಲಿದೆ. ಮಾರ್ಚ್ 29 ರಂದು ಪಂದ್ಯ ನಡೆಯಲಿದ್ದು, ಇದಕ್ಕಾಗಿ ಸ್ಥಳವನ್ನು ಅಂತಿಮವಾಗಿಲ್ಲ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ನ ತವರು ಮೈದಾನದಲ್ಲಿ ಉದ್ಘಾಟನೆ ಮತ್ತು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ.
ಆಲ್ ಸ್ಟಾರ್ ಪಂದ್ಯಕ್ಕಾಗಿ ಎಂಟು ಫ್ರ್ಯಾಂಚೈಸ್ ತಂಡಗಳ ಆಟಗಾರರನ್ನು ಎರಡೂ ತಂಡಗಳಲ್ಲಿ ಸೇರಿಸಲಾಗುವುದು. ಒಂದು ತಂಡದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಆಟಗಾರರನ್ನು ಒಳಗೊಂಡಿರುತ್ತದೆ ಮತ್ತು ಇನ್ನೊಂದು ತಂಡವು ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಆಟಗಾರರನ್ನು ಒಳಗೊಂಡಿದೆ.
ಆಲ್-ಸ್ಟಾರ್ ತಂಡದಲ್ಲಿ ನಾಲ್ಕು ಬಾರಿ ಚಾಂಪಿಯನ್ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಧೋನಿ ನಾಯಕ ಸ್ಥಾನವನ್ನು ತುಂಬಲು ತುದಿಗಾಲಿನಲ್ಲಿ ನಿಂತಿದ್ದಾರೆ.
ದೆಹಲಿಯಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಸಿಸಿಐ ಅಧ್ಯಕ್ಷ ಸೌರಭ್ ಗಂಗೂಲಿ ಮತ್ತು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ಆಲ್-ಸ್ಟಾರ್ ಪಂದ್ಯದ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಐಪಿಎಲ್ ಜೊತೆಗೆ ಮಹಿಳಾ ಟಿ-20 ಪಂದ್ಯಾವಳಿ ನಡೆಯಲಿದ್ದು, ಈ ಬಾರಿ ನಾಲ್ಕನೇ ತಂಡವನ್ನು ಸೇರಿಸಲಾಗಿದೆ. ಮಹಿಳಾ ಪಂದ್ಯಾವಳಿಯಲ್ಲಿ ಫೈನಲ್ ಸೇರಿದಂತೆ ಏಳು ಪಂದ್ಯಗಳು ನಡೆಯಲಿವೆ. ಮೂರು ತಂಡಗಳು ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಹಾಗೂ ನಾಲ್ಕನೇ ತಂಡದ ಹೆಸರನ್ನು ಘೋಷಿಸ ಬೇಕಿದೆ.