ಲೋಕದರ್ಶನ ವರದಿ
ಬ್ಯಾಡಗಿ27: ಇತ್ತೀಚಿಗೆ ಸ್ಥಳೀಯ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ (ಲಿಯಾಫಿ) ಕಾಯರ್ಾಲಯದಲ್ಲಿ ಲಿಯಾಪಿಯ ಸರ್ವ ಸದಸ್ಯರ ಸಭೆ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಲಿಯಾಫಿಯ ಅಧ್ಯಕ್ಷ ನಾಗೇಶ ಗುತ್ತಲ ವಿಭಾಗ ಲಿಯಾಫಿ ಸರ್ವ ಸದಸ್ಯರ ಸಭೆಯು ಹುಬ್ಬಳ್ಳಿಯ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಅ.28 ರಂದು ನಡೆಯಲಿದೆ. ವಿಭಾಗೀಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಲಿಯಾಫಿ ರಾಷ್ಟ್ರೀಯ ಅಧ್ಯಕ್ಷ ರಣವೀರ ಶಮರ್ಾ, ಸಂಸದರಾದ ಪ್ರಹಲ್ಲಾದ ಜೋಶಿ, ಶಿವಕುಮಾರ ಉದಾಸಿ ಈ ಸಭೆಗೆ ಆಗಮಿಸಲಿದ್ದಾರೆ. ಆದ್ದರಿಂದ ನಮ್ಮ ವಿಭಾಗದ ಎಲ್ಲ ಸರ್ವ ಸದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಸಭೆಯಲ್ಲಿ ಬಸವರಾಜಯ್ಯ ಹಿರೇಮಠ, ಚಂದ್ರಶೇಖರ ಹುದ್ದಾರ, ಮಾಲತೇಶ ಯಲಿ, ಮೃತ್ಯುಂಜಯ್ಯ ರಾಮಗೊಂಡನಹಳ್ಳಿ, ಮಾಹದೇವಪ್ಪ ಕುರುಬರ, ಮಹಾರುದ್ರಪ್ಪ ಅಂಗಡಿ, ರಘುವೀರ ಬಾಗೋಜಿ, ಗಣೇಶ ಸೋಮನಕಟ್ಟಿ, ಹನುಮಂತಪ್ಪ ಬನ್ನಿಹಟ್ಟಿ, ಸುಮಾ ಬಕೀಟಗಾರ, ಮಂಜಪ್ಪ ರಂಗಾರಿ, ಫಕೀರಗೌಡ ಪಾಟೀಲ, ಗುಡ್ಡಪ್ಪ ಹಾನಗಲ, ನಾಗರಾಜ ಶೀಗಿಹಳ್ಳಿ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.