ಆಯುರ್ವೇದದಿಂದ ಸರ್ವರೂ ಆರೋಗ್ಯ ಕಾಪಾಡಿಕೊಳ್ಳಬಹುದು

ಗದಗ: ಭಾರತೀಯ ಸಂಸ್ಕೃತಿಯ ಭಾಗವಾದ ಆಯುರ್ವೇದವನ್ನು     ಪಾಲಿಸಿದಲ್ಲಿ ಸರ್ವರೂ  ಆರೋಗ್ಯ  ಕಾಪಾಡಿಕೊಳ್ಳಬಹುದಾಗಿದೆ   ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.   

        ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿಂದು ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ   ರಾಷ್ಟ್ರೀಯ ಆಯುಷ್  ಅಭಿಯಾನ, ಆಯುಷ್ ಇಲಾಖೆ ಆಯೋಜಿಸಿದ ದೀರ್ಘಯುಷ್ಯಕ್ಕಾಗಿ ಆಯುವರ್ೆದ ಎಂಬ ಘೋಷವಾಕ್ಯದಡಿ ನಾಲ್ಕನೇ  ರಾಷ್ಟ್ರೀಯ  ಆಯುವರ್ೆದ ದಿನಾಚರಣೆ ಕಾರ್ಯಕ್ರಮದಲ್ಲಿ  ಆಯುವರ್ೆದದ ಮೂಲ ಪುರುಷ ಧನ್ವಂತ್ರಿ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಸಲ್ಲಿಸಿ ನಂತರ ಔಷಧೀಯ ಸಸ್ಯಕ್ಕೆ ನೀರೆರೆದು ಉದ್ಘಾಟಿಸಿದ  ಅವರು ಮಾತನಾಡಿದರು.   

         ಗದಗ ಜಿಲ್ಲೆಯಲ್ಲಿನ ಕಪ್ಪತಗುಡ್ಡದಲ್ಲಿಯೂ ಸಹ ಸಾಕಷ್ಟು ಪ್ರಮಾಣದಲ್ಲಿ ಅಮೂಲ್ಯವಾದ ಆಯುವರ್ೆದ ಔಷಧೀಯ ಗಿಡಗಳು ಬೆಳೆಯುತ್ತಿವೆ.  ರಾಷ್ಟ್ರೀಯ ಆಯುವರ್ೆದ ದಿನಾಚರಣೆ  ಹಾಗೂ ಜಯಂತಿಯನ್ನು ಆಚರಿಸುವುದರೊಂದಿಗೆ  ಭಾರತೀಯ ಸಂಸ್ಕ್ರತಿಯನ್ನು ಮೆಲುಕು ಹಾಕುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪಾಶ್ಚಿಮಾತ್ಯದವರು ಕೂಡ ನಮ್ಮ ಈ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಗೌರವಿಸಿ ಅನುಸರಿಸುತ್ತಿದ್ದಾರೆ.  ಆಯುವರ್ೆದದ ಬಗ್ಗೆ ಪ್ರಚಾರ, ಪ್ರಸಾರ, ತಿಳುವಳಿಕೆ ಅಗತ್ಯವಿದೆ.  ಯೋಗವು ಕೂಡ ಜನಪ್ರಿಯವಾಗಿದ್ದು ಯೋಗವನ್ನು ಎಲ್ಲಾ ರಾಷ್ಟ್ರಗಳು ಪ್ರೀತಿಸುವಂತಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ ತಿಳಿಸಿದರು.   

       ಇದೇ ಸಂದರ್ಭದಲ್ಲಿ  ಗಾಯ, ಚರ್ಮರೋಗ, ಸಂಧಿವಾತಗಳ ಉಪಶಮನಕ್ಕಾಗಿ ಗದಗ ಆಯುವರ್ೆದಿಕ್ ವೈದ್ಯರುಗಳು ತಯಾರಿಸಿದ  ಮುಲಾಮನ್ನು  ಬಿಡುಗಡೆ ಮಾಡಲಾಯಿತು.   

ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ. ಕೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಉಪ ಕಾರ್ಯದಶರ್ಿ ಪ್ರಾಣೇಶರಾವ್, ಜಿ.ಪಂ ಸದಸ್ಯ ವಾಸಣ್ಣ ಕುರಡಗಿ,  ಪ್ರೋಬಸ್ ಕ್ಲಬ್ದ ಅದ್ಯಕ್ಷ ಮುಂದಿನಮನಿ, ಎನ್.ಆಯ್.ಎಂ.ಎ ವೈದ್ಯರುಗಳು, ಸರ್ಕಾರಿ ನೌಕರರ ನಿವೃತ್ತ ಸಂಘದವರು, ಪ್ರಾದ್ಯಾಪಕರು ಪ್ಯಾರಾಮೆಡಿಕಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಆಶಾ ನಾಯಕ, ಡಾ. ಅಶೋಕ ಮತ್ತಿಗಟ್ಟಿ,  ಡಾ. ಮಹೇಶ ಹಿರೇಮಠ ಬೇಟಗೇರಿ, ಡಾ. ಪ್ರಕಾಶ ರಕ್ಕಸಗಿ, ಇವರು ದೀಘರ್ಾಯುಷ್ಯಕ್ಕಾಗಿ ಆಯುವರ್ೆದ ಕುರಿತು ಉಪನ್ಯಾಸ ನೀಡಿದರು. 

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ, ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಎಂದು ಹೇಳಿದರು. ಡಾ. ಸುನೀತಾ ನಾರಪ್ಪನವರ  ಮತ್ತು ಡಾ. ಅಶೋಕ ಮತ್ತಿಗಟ್ಟಿ ಪ್ರಾರ್ಥಿಸಿದರು.  ಡಾ. ಪಿ.ಬಿ.ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಎ ಹಾದಿಮನಿ ವಂದಿಸಿದರು.