ಮುಂಬೈ, ಏ ೩೦,ಕೆಲವು ದಿನಗಳಿಂದ ಬಾಲಿವುಡ್ ನಟ ರಿಷಿ ಕಪೂರ್ ಪುತ್ರ ರಣಬೀರ್ ಕಪೂರ್, ಅಲಿಯಾ ಭಟ್ ಜೋಡಿಯ ಅದ್ದೂರಿ ವಿವಾಹ ಸದ್ಯದಲ್ಲೇ ನಡೆಯಲಿದೆ ಎಂದು ದೊಡ್ಡ ಪ್ರಚಾರ ನಡೆಯುತ್ತಿತ್ತು. ಅಲಿಯಾ- ರಣಭಿರ್ ಸಂಬಂಧದ ಬಗ್ಗೆ ರಿಷಿಕಪೂರ್ ಬಹಳಷ್ಟು ಸಾರಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ಕೊನೆಗೂ ಅವರು ತಮ್ಮ ಮಗನ ವಿವಾಹ ನೋಡದೆ ಇಹಲೋಕ ತ್ಯಜಿಸಿರುವುದು ಪ್ರತಿಯೊಬ್ಬರಿಗೂ ಬೇಸರ ಮೂಡಿಸಿದೆ. ಇಂದು ಬೆಳಗ್ಗೆ ತಮ್ಮ ಭಾವಿ ಮಾವ ರಿಷಿ ಕಪೂರ್ ಸಾವಿನ ಸುದ್ದಿ ತಿಳಿದಕೂಡಲೇ ಅಲಿಯಾ ಭಟ್ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಮುಂಬೈನಲ್ಲಿರುವ ಹೆಚ್ ಎನ್ ರಿಯಲನ್ಸ್ ಆಸ್ಪತ್ರೆಗೆ ತೆರಳಿ, ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ನಾಳೆ ರಿಷಿ ಕಪೂರ್ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.