ಅಕ್ಕಮಹಾದೇವಿಯ ಜಯಂತಿ ಉತ್ಸವ ಕಾರ್ಯಕ್ರಮ

Akka Mahadevi's Jayanti Festival Program

ಅಕ್ಕಮಹಾದೇವಿಯ ಜಯಂತಿ ಉತ್ಸವ ಕಾರ್ಯಕ್ರಮ   

ಹುಬ್ಬಳ್ಳಿ  17:  ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು, ಧಾರವಾಡ ಜಿಲ್ಲಾ ಮಹಿಳಾ ಘಟಕ, ಬಸವಕೇಂದ್ರ-ಮಹಿಳಾ ಘಟಕದ ಸಹಯೋಗದಲ್ಲಿ ಸ್ತ್ರೀಶಕ್ತಿಯ ಪ್ರತಿಪಾದಕಿ, ಮಹಾನ್ ಸಾಧಕಿ, ಕನ್ನಡದ ​‍್ರ​‍್ರಥಮ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ ಉತ್ಸವ ಕಾರ್ಯಕ್ರಮ ವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸವಿತಾ ನಡಕಟ್ಟಿ ಅವರು ಉಧ್ಘಾಟಿಸಿದರು. ಬಸವಕೇಂದ್ರದ ಮಹಿಳಾ ಘಟಕದ ಅಧ್ಯಕ್ಷರಾದ ಸುನಿಲಾತಾಯಿ ಬ್ಯಾಹಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ-ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅವರು ಮಾತನಾಡಿ ಒಳ್ಳೆಯ ಗುಣಗಳು ಸಾವದಾನದಿಂದ ಬರುತ್ತವೆ ಜೀವನವನ್ನು ಪಾವನಗೊಳಿಸುತ್ತವೆ. ಕೆಟ್ಟ ಗುಣಗಳಾದ ದ್ವೇಷ, ಮತ್ಸರ, ಹೊಟ್ಟೆಕಿಚ್ಚು, ಅಸೂಯೆ, ಮುಂತಾದವು ಗುಂಪು ಕಟ್ಟಿಕೊಂಡು ಬರುತ್ತವೆ ಜೀವನವನ್ನು ನಾಶ ಮಾಡುತ್ತವೆ. ಅಕ್ಕ ತನು ಗುಣ, ಮನ ಗುಣ, ಭಾವ ಗುಣ ನಾಸ್ತಿಯಾಗಬೇಕು ಎಂದು ಹೇಳಿದ್ದಾಳೆ. ಸ್ತ್ರೀ ಕುಲಕ್ಕೆ ಅಕ್ಕ ಒಂದು ಮಹಾನ್ ಶಕ್ತಿಯಾಗಿದ್ದಾಳೆ. ನನಗೆ ಅರಿವು ಇರಬೇಕು.   

ನನ್ನನ್ನು ನಾನು ಅರಿಯಬೇಕು. ನನ್ನನ್ನು ನಾನು ಅರಿತ ಬಳಿಕ ಬಾಹ್ಯ ಪ್ರಪಂಚದ ಹಂಗು ಇರುವುದಿಲ್ಲ. ಹೊರಗೆ ನೋಡುವುದನ್ನು ಕಡಿಮೆ ಮಾಡಿ ಒಳಗೆ ನೋಡುವುದನ್ನು ಕಲಿತರೆ ಬೆಳಕು, ದಿವ್ಯ ಪ್ರಭೆ ನಮಗೆ ಆಗುತ್ತದೆ. ನಾಲ್ಕು ಜನರಿಗೆ ಬೆಳಕು ತೋರಿಸುವ ಕೆಲಸ ನಮ್ಮಿಂದಾದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಕನ್ನಡದ ​‍್ರ​‍್ರಥಮ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಆದರ್ಶ ಗುಣಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದರು. ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷ ಎಂ.ವಿ.ಗೊಂಗಡಶೆಟ್ಟಿ, ಬಿ.ಎಲ್‌.ಲಿಂಗಶೆಟ್ಟರ, ಎಸ್‌.ವಿ.ಕೊಟಗಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ,ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಉದ್ಯಮಿ ಶಂಕರ ಕೋಳಿವಾಡ, ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ, ಆರ್‌.ಸಿ.ಹಲಗತ್ತಿ, ತಾರಾದೇವಿ ವಾಲಿ, ಪ್ರಭು ಅಂಗಡಿ, ಕಲ್ಲಪ್ಪ ಗುಂಜಾಳ, ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಮುಂತಾದವರು ಭಾಗವಹಿಸಿದ್ದರು. ಲತಾ ಮಂಟಾ, ಪ್ರಜ್ಞಾ ನಡಕಟ್ಟಿ ಪ್ರಾರ್ಥಿಸಿದರು.  ಶಶಿಕಲಾ ಕೊಡೇಕಲ್  ಸ್ವಾಗತಿಸಿದರು. ಡಾ. ಸ್ನೇಹಾ ಭೂಸನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.   ಜಯಶ್ರೀ ಹಿರೇಮಠ  ವಂದಿಸಿದರು.  ದಾಕ್ಷಾಯಣಿ ಕೋಳಿವಾಡ   ನಿರೂಪಿಸಿದರು. ಶರಣೆಯರು ಶಿವಶರಣೆ ಅಕ್ಕಮಹಾದೇವಿಯ 25 ವಚನಗಳ ಸಾಮೂಹಿಕ ಪಾರಾಯಣ ಮಾಡಿದರು.