ಲಿನ್‌ಕಾಲ್ನ್, ಫೆ 10, ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಆದರೆ, ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಶತಕ ಹಾಗೂ ವಿಜಯ್ ಶಂಕರ್ ಅವರ ಅರ್ಧಶತಕ ಕೊನೆಯ ದಿನ ಆಕರ್ಷಕವಾಗಿತ್ತು.ನಾಲ್ಕನೇ ಹಾಗೂ ಅಂತಿಮ ದಿನವಾದ ಸೋಮವಾರ ಬೆಳಗ್ಗೆ ಒಂದು ವಿಕೆಟ್ ನಷ್ಟಕ್ಕೆ 234 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ಎ ತಂಡ, 109.3 ಓವರ್‌ಗಳಿಗೆ 467 ರನ್ ಗಳಿಸಿತು. ಆ ಮೂಲಕ ನಾಲ್ಕನೇ ದಿನ ಅಂತ್ಯವಾಯಿತು. ತೀರ್ಪುಗಾರರು ಪಂದ್ಯವನ್ನು ಡ್ರಾ ಘೋಷಿಸಿದ್ದರು.ಮೂರನೇ ದಿನ ಶತಕ ಸಿಡಿಸಿದ್ದ ಶುಭಮನ್ ಗಿಲ್ ಅಂತಿಮ ದಿನ ಹೆಚ್ಚುವರಿಯಾಗಿ 35 ರನ್ ತನ್ನ ಖಾತೆಗೆ ಸೇರಿಸಿದರು. ಆ ಮೂಲಕ ಒಟ್ಟು 136 ರನ್ ಕಲೆಹಾಕಿ ಔಟ್ ಆದರು. ಚೇತೇಶ್ವರ ಪೂಜಾರ 53 ರನ್ ಗಳಿಸಿ ಮರೆಯಾದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಜಿಂಕ್ಯಾ ರಹಾನೆ ಅತ್ಯುತ್ತಮ ಪ್ರದರ್ಶನ ತೋರಿದರು. 148 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 15 ಬೌಂಡರಿಯೊಂದಿಗೆ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಮತ್ತೊಂದು ತುದಿಯಲ್ಲಿ ರಹಾನೆಗೆ ಹೆಚ್ಚು ಹೊತ್ತು ಸಾಥ್ ನೀಡಿದ್ದ ವಿಜಯ್ ಶಂಕರ್ ಕೂಡ ಭರವಸೆ ಹುಸಿ ಮಾಡಲಿಲ್ಲ. 103 ಎಸೆತಗಳಲ್ಲಿ 66 ರನ್ ಗಳಿಸಿ ಅರ್ಧಶತಕ ಬಾರಿಸಿದರು. ಶ್ರೀಕಾರ್ ಭರತ್ 22 ರನ್ ಗಳಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.
ನ್ಯೂಜಿಲೆಂಡ್ ಎ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 131.5 ಓವರ್‌ಗಳಿಗೆ 386 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡು ಭಾರತ ಎ ಗೆ ಪ್ರಥಮ ಇನಿಂಗ್ಸ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೂ ಮುನ್ನ ಎರಡನೇ ದಿನ ಮಳೆಯಿಂದಾಗಿ ಒಂದೂ ಎಸೆತ ಕಂಡಿರಲಿಲ್ಲ. ಅಮತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯತು. ಎರಡೂ ಪಂದ್ಯಗಳಿ ಡ್ರಾನಲ್ಲಿ ಅಂತ್ಯ ಕಂಡಿವೆ. ಆ ಮೂಲಕ ಭಾರತ ಎ ತಂಡದ ನ್ಯೂಜಿಲೆಂಡ್ ಪ್ರವಾಸ ಅಂತ್ಯವಾಯಿತು.ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಎ
ಪ್ರಥಮ ಇನಿಂಗ್ಸ್: 386 ಭಾರತ ಎ
ಪ್ರಥಮ ಇನಿಂಗ್ಸ್: 109.3 ಓವರ್‌ಗಳಿಗೆ 467/5 (ಶುಭಮನ್ ಗಿಲ್ 136, ಅಜಿಂಕ್ಯಾ ರಹಾನೆ ಔಟಾಗದೆ 101, ವಿಜಯ್ ಶಂಕರ್ 66, ಹನುಮ ವಿಹಾರಿ 59; ಎಡಿ ನಟ್ಟಲ್ 98 ಕ್ಕೆ 2, ನತಾನ್ ಜಿ ಸ್ಮಿತ್ 54 ಕ್ಕೆ 10)