ಅಲಿಘರ್ ನಲ್ಲಿ ವಿಮಾನ ಅಪಘಾತ: 6 ಜನ ಪಾರು

ಅಲಿಘರ್, ಆಗಸ್ಟ್ 27   ಧನಿಪುರ ಬಳಿ ಮಂಗಳವಾರ ವಿಮಾನ ಅಪಘಾತ ಸಂಭವಿಸಿ  ಇಬ್ಬರು ಪೈಲಟ್ಗಳು ಸೇರಿದಂತೆ ಆರು ಮಂದಿ  ಪವಾಡ ಸದೃಶ ರೀತಿಯಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಟಿ-ಎವಿವಿ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಡಿಕ್ಕಿ ಬಡಿದಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿಸಿದರೂ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿ ಆಹುತಿಯಾಯಿತು.  ನವದೆಹಲಿಯಿಂದ ಬರುತ್ತಿದ್ದ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ  ವಿದ್ಯುತ್ ತಂತಿಗೆ ಬಡಿದು ಈ ಅವಗಢ ಸಂಭವಿಸಿದೆ.  ಕಿಶೋರ್ ಮತ್ತು ದೀಪಕ್ ಎಂಬ ಇಬ್ಬರು ಪೈಲಟ್ಗಳು ಎಂಜಿನಿಯರ್ಗಳಾದ ರಾಂಪ್ರಕಾಶ್ ಗುಪ್ತಾ, ಪ್ರಭಾತ್ ತ್ರಿವೇದಿ, ಆನಂದ್ ಕುಮಾರ್ ಮತ್ತು ಕಾರ್ತಿಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಪನಿಯ ವಿಮಾನಗಳನ್ನು ರಿಪೇರಿ ಮಾಡಲು ಎಂಜಿನಿಯರ್ಗಳನ್ನು ಕರೆದುಕೊಂಡು ಹೋಗುತ್ತಿತ್ತು ಎನ್ನಲಾಗಿದೆ.