ನವದೆಹಲಿ ಏ.18,ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮೇ 4 ರಿಂದ ದೇಶೀಯ ವಿಮಾನಗಳನ್ನು ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನಗಳ ಟಿಕೆಟ್ ನೀಡಲು ಪ್ರಾರಂಭಿಸಿದೆ.ಎರಡನೇ ಹಂತದ ಲಾಕ್‌ಡೌನ್ ಮುಗಿದ ನಂತರ ಮೇ 4 ರಿಂದ ಆಯ್ದ ಮಾರ್ಗಗಳಲ್ಲಿ ದೇಶೀಯ ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ಕಂಪನಿ ತಿಳಿಸಿದೆ. ಜೂನ್ 1 ರಿಂದ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭವಾಗಲಿವೆ. ಖಾಸಗಿ ವಿಮಾನಯಾನ ಕಂಪನಿಗಳು ಈಗಾಗಲೇ ಮೇ 4 ರಿಂದ ಬುಕಿಂಗ್ ಪ್ರಾರಂಭಿಸಿವೆ.ಮಾರ್ಚ್ 25 ರಿಂದ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಜಾರಿಗೆ ತಂದಿರುವುದು ಗಮನಾರ್ಹ. ಇದನ್ನು ಮೊದಲು ಏಪ್ರಿಲ್ 14 ರವರೆಗೆ ಜಾರಿಗೆ ತರಲಾಗಿತ್ತು. ಲಾಕ್‌ಡೌನ್ ಅನ್ನು ಮೇ 3 ಕ್ಕೆ ವಿಸ್ತರಿಸಲಾಗಿದೆ.