ಐಹೊಳೆಯವರ ಹುಟ್ಟುಹಬ್ಬದ ಕಾರ್ಯಕ್ರಮ

Aihole's birthday event

ಐಹೊಳೆಯವರ ಹುಟ್ಟುಹಬ್ಬದ ಕಾರ್ಯಕ್ರಮ 

ರಾಯಬಾಗ  23: ಪ್ರಸ್ತುತ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ ರಾಜಕಾರಣಿ ದುರ್ಯೋಧನ ಐಹೊಳೆಯವರು ಅಂದರೆ ತಪ್ಪಾಗಲಾರದು ಎಂದು ಸಾಹಿತಿ ವಿ.ಎಸ್‌.ಮಾಳಿ ಹೇಳಿದರು.ಬುಧವಾರ ಪಟ್ಟಣದ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಶಾಸಕ ಡಿ.ಎಮ್‌.ಐಹೊಳೆಯವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಹಣಬಲ, ತೋಳಬಲ, ಜಾತಿಬಲ ಮೀರಿ ಜನರ ವಿಶ್ವಾಸ ಗೆದ್ದು ಸತತ ನಾಲ್ಕನೆಯ ಬಾರಿ ಶಾಸಕರಾಗಿ ಆಯ್ಕೆಯಾಗಿರುದಕ್ಕೆ ಒಳ್ಳೆಯ ಉದಾಹಣೆ. ಅವರು ಅತ್ಯಂತ ಸಜ್ಜನ ಮತ್ತು ಸರಳ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಆಗಿದ್ದಾರೆ ಎಂದರು. 

ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ,  ಆಧ್ಯಾತ್ಮಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಐಹೊಳೆಯವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.ಸಾನ್ನಿಧ್ಯವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ವಹಿಸಿದ್ದರು. ಶಾಸಕ ಡಿ.ಎಮ್‌.ಐಹೊಳೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಅರುಣ ಐಹೊಳೆ, ಶಿವಾನಂದ ಐಹೊಳೆ ಸೇರಿ ಅನೇಕರು ಇದ್ದರು.