ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮಧ್ಯೆಯೇ ಅಹ್ಮದ್ ಪಟೇಲ್-ಗಡ್ಕರಿ ಭೇಟಿ

 ನವದೆಹಲಿ, ನ.6:   ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ಸಹಾಯಕ ಅಹ್ಮದ್ ಪಟೇಲ್ ಅವರು ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಬುಧವಾರ ಅವರ ನಿವಾಸದಲ್ಲಿ ಭೇಟಿಯಾದರು. ಸಮಕಾಲೀನ ನೆಲೆಯಲ್ಲಿ ಇದೊಂದು ಅಪರೂಪದ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗಿದೆ.  ಆದಾಗ್ಯೂ, ಹಿಂಬಾಗಿಲ ಮೂಲಕ ಹಲವು ರಾಜಕೀಯ ಕಾರ್ಯತಂತ್ರಗಳನ್ನು ಹೆಣೆದ ಕೀರ್ತಿಗೆ ಪಾತ್ರರಾಗಿರುವ ಕಾಂಗ್ರೆಸ್ ನಾಯಕ ಪಟೇಲ್,  "ನಾನು ಮಹಾರಾಷ್ಟ್ರ ರಾಜಕೀಯದ ಬಗ್ಗೆ ಯಾವುದೇ ಚಚರ್ೆ ನಡೆಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಗಡ್ಕರಿ ಅವರೊಂದಿಗಿನ ತಮ್ಮ ಭೇಟಿಗೂ ಮಹಾರಾಷ್ಟ್ರ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ರೈತರ ಸಮಸ್ಯೆಯ ಬಗ್ಗೆ ಚರ್ಚಿಸಲು ನಾನು ಅವರ ಬಳಿಗೆ ಹೋಗಿದ್ದೆ ಎಂದು ಅಹ್ಮದ್ ಪಟೇಲ್ ಹೇಳಿದರು. ಸೋಮವಾರ ಹಗಲು ಹೊತ್ತಿನಲ್ಲಿ ಹಲವು ಸುದ್ದಿವಾಹಿನಿ ಸಿಬ್ಬಂದಿಯ ಸಮ್ಮುಖದಲ್ಲೇ ನಡೆದ ಎರಡು ಸಭೆ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ನಡುವೆ ಒಂದು ಸಭೆ ನಡೆದರೆ, ಮತ್ತೊಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸೋನಿಯಾ ನಡುವೆ ಗಾಂಧಿ ನಡೆದಿದೆ. ಆದರೆ ಈ ಎರಡೂ ಸಭೆ ನಡೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಯಾವುದೇ ಪ್ರಗತಿ ಉಂಟಾಗಿಲ್ಲ. ಅಕ್ಟೋಬರ್ 24 ರಂದು ಬಿಜೆಪಿ ಮತ್ತು ಅದರ ಚುನಾವಣಾ ಪೂರ್ವ ಮಿತ್ರ ಪಕ್ಷ ಶಿವಸೇನೆಗೆ ಸ್ಪಷ್ಟ ಬಹುಮತ ನೀಡಿ ಮಹಾರಾಷ್ಟ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿವೆ. ಆದರೆ ಮುಖ್ಯಮಂತ್ರಿ ನೇಮಕ ವಿಷಯದಲ್ಲಿ ಈ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸರ್ಕಾರ ರಚನೆ ಇನ್ನೂ ಸಾಧ್ಯವಾಗಿಲ್ಲ. ಮಹಾರಾಷ್ಟ್ರದಲ್ಲಿ 1990 ರ ದಶಕದಲ್ಲಿ ಸೇನಾ-ಬಿಜೆಪಿ ಸರ್ಕಾರದಲ್ಲಿ ಪಿಡಬ್ಲ್ಯುಡಿ ಸಚಿವರಾಗಿದ್ದ ಗಡ್ಕರಿ ಅವರು ರಾಜ್ಯ ರಾಜಕಾರಣಕ್ಕೆ ಮರಳಲು ಉತ್ಸುಕರಾಗಿಲ್ಲ ಎಂದು ಈ ಹಿಂದೆ ಹೇಳಿದ್ದರು. ಗಡ್ಕರಿ ಅವರು ಅಹ್ಮದ್ ಪಟೇಲ್ ಅವರ ಭೇಟಿಯು ಮಹತ್ವದ್ದಾಗಿದೆ, ಏಕೆಂದರೆ ಅವರು ಆರ್ಎಸ್ಎಸ್ ನಾಯಕತ್ವಕ್ಕೆ ಬಹಳ ಹತ್ತಿರವಾಗಿರುವ ನಾಯಕರು. ಮಾತ್ರವಲ್ಲ ಇತ್ತೀಚೆಗೆ ಶಿವಸೇನೆ ನಾಯಕರು, ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಶೀಘ್ರವಾಗಿ ರಚಿಸಲು ಸಹಾಯ ಮಾಡಲು 'ಮಧ್ಯಪ್ರವೇಶಿಸಬೇಕೆಂದು ಆರ್ಎಸ್ಎಸ್ ಅನ್ನು ಒತ್ತಾಯಿದ್ದಾರೆ. ಬಹುನಿರೀಕ್ಷಿತ ಅಯೋಧ್ಯೆ ವಿವಾದದ ತೀರ್ಪನ್ನು ನವೆಂಬರ್ 17 ರ ಮೊದಲು ಸುಪ್ರೀಂ ಕೋರ್ಟ್ ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ಇತ್ತೀಚೆಗೆ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.