ಅಲೆಮಾರಿಗಳಿಗೆ ದಿನಸಿ ವಿತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ, ಮಾ.31, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಅಲೆಮಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್  ದಿನಸಿ ವಿತರಿಸಿದರು.ಕೊರೊನಾ  ಭೀತಿಯಿಂದ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಎಪ್ಪತ್ತಕ್ಕೂ ಹೆಚ್ಚು ಜನರು ಊಟ  ಸಿಗದೇ ಪರದಾಡುವುದನ್ನು ಗಮನಿಸಿದ ಸಚಿವರು ಇಂದು ಬೆಳಿಗ್ಗೆ ಅಲೆಮಾರಿಗಳನ್ನು ಭೇಟಿಯಾಗಿ  ದಿನಸಿ ವಿತರಿಸಿದರು.ಕೊರೋನಾ ಹಿನ್ನೆಲೆಯಲ್ಲಿ ಯಾವ ಗ್ರಾಮದಲ್ಲಿಯೂ ತಮ್ಮನ್ನು  ಬಿಟ್ಟುಕೊಳ್ಳುತ್ತಿಲ್ಲ. ಯಾರೂ ಸಹ ಭಿಕ್ಷೆ ನೀಡುತ್ತಿಲ್ಲ ಎಂದು ಸಚಿವರಿಗೆ ಅಲೆಮಾರಿಗಳು  ಮನವಿ ಮಾಡಿದ್ದರು. ಅಲೆಮಾರಿಗಳ ಮನವಿಗೆ ಸ್ಪಂದಿಸಿದ ಬಿ.ಸಿ.ಪಾಟೀಲ್ ದಿನಸಿಗಳನ್ನು  ವಿತರಿಸಿದರು.