ಬಾಗಲಕೋಟೆ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ವಿವಿಧ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಕೃಷಿ ಅಭಿವೃದ್ದಿಪಡಿಸಬೇಕೆಂದು ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಆತ್ಮಾ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದರು. ಆತ್ಮಾ ಯೋಜನೆಯ ಉದ್ದೇಶಗಳಾದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಮದ್ಯೆ ಹೆಚ್ಚಿನ ಸಹಕಾರ ಹಾಗೂ ಸಂಬಂಧ ಬಲಪಡಿಸಬೇಕು. ರೈತರು, ಕೃಷಿ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖಾ ಅಧಿಕಾರಿಗಳೊಡನೆ ಸಂಪರ್ಕ ಏರ್ಪಡುವಂತಾಗಬೇಕು ಎಂದರು.
ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಂದ ಅನುಷ್ಠಾನಗೊಳಿಸುವ ಯೋಜನೆಗಳ ಸಂಪೂರ್ಣ ಲಾಭಗಳು ರೈತರಿಗೆ ಮುಟ್ಟಬೇಕು. ಈ ಯೋಜನೆಯಡಿ ಹಮ್ಮಿಕೊಳ್ಳುವ ಪ್ರಮುಖ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಇದರಿಂದ ಕೃಷಿ ಅಭಿಯಾಗಬೇಕು ಎಂದರು. ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ಅಧ್ಯಯನ ಪ್ರವಾಸ, ರೈತ ಗುಂಪು ರಚನೆ ಮತ್ತು ಸಂಘಟನೆ, ರೈತ ವಿಜ್ಞಾನಿಗಳ ಚಚರ್ಾಗೋಷ್ಠಿ ಕಾರ್ಯಕ್ರಮ ಸೇರಿದಂತೆ ಇತರೆ ಚಟುವಟಿಕೆಗಳು ರೈತರಿಗೆ ಮುಟ್ಟಬೇಕು ಎಂದರು. ಕೃಷಿ ಚಟುವಟಿಕೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಾಕಷ್ಟು ಅನುಕೂಲಗಳಿದ್ದು, ಅವುಗಳನ್ನು ಇಲಾಖೆಯವರು ಬಳಸಿಕೊಳ್ಳಲು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿದರ್ೇಶಕಿ ಚೈತ್ರಾ ಪಾಟೀಲ ಆತ್ಮ ಯೋಜನೆಯಡಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತಾ ಅಂತರರಾಜ್ಯ, ರಾಜ್ಯ ಹಾಗೂ ಜಿಲ್ಲೆಯ ವಿವಿಧ ಕೃಷಿ ತರಬೇತಿ ಸಂಸ್ಥೆಗಳಲ್ಲಿ ವಿವಿಧ ಬೆಳೆಗಳ ಆಧುನಿಕ, ಸಮಗ್ರ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉತ್ಪಾದನೆ ಮಾಡುವಂತ ರೈತರ ಗುಂಪು ಮಾಡಿ ಒಗ್ಗಟ್ಟಿನ ಬಲವನ್ನು ಅಳವಡಿಸಿಕೊಳ್ಳುವ ಆಸಕ್ತ ಹಾಗೂ ಅಗತ್ಯತೆಗಳನ್ನು ಸಾಧಿಸುವ ರೈತರ ಗುಂಪನ್ನು ಉತ್ಪಾದನೆ ಸಂಸ್ಥೆಗಳನ್ನಾಗಿ ಸಂಘಟಿಸಲಾಗುತ್ತಿದ್ದು, ಈಗಾಗಲೇ 29 ರೈತರ ಗುಂಪುಗಳನ್ನು ರಚಿಸಲಾಗಿದೆ. ಅಲ್ಲದೇ ಸಮಾಜದ ಹಿಂದುಳಿದ ವರ್ಗ, ದುರ್ಬಲ ವರ್ಗದ ಸಮಾನ ಮನಸ್ಕ ರೈತರನ್ನು ಒಳಗೊಂಡ ಗುಂಪುಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಗುಂಪಿಗೆ 10 ಸಾವಿರ ರೂ.ಗಳಂತೆ ಆವರ್ತ ನಿಧಿ ನೀಡಲಾಗುತ್ತಿದ್ದು, 1 ಗುಂಪಿಗೆ ನೀಡಲಾಗಿದೆ. ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆಗೆ ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸುವ ಕುರಿತು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಿಂದ ಕ್ಷೇತ್ರ ಭೇಟಿ ಮೂಲಕ ಸಲಹೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಪಾಠಶಾಲೆ ಒಂದು ವಿಶಿಷ್ಟ ವಿಸ್ತರಣಾ ಶಿಕ್ಷಣ ಪದ್ದತಿಯಾಗಿದ್ದು, ರೈತರು ಬೆಳೆದ ಸಂಪೂರ್ಣ ಅವಧಿಯಲ್ಲಿ ಬೀಜದಿಂದ ಬೀಜದವರೆಗೆ ಅಳವಡಿಸುವ ತಂತ್ರಜ್ಞಾನಗಳನ್ನು ಸಹಭಾಗಿತ್ವ ಹಾಗೂ ಅನುಭವ ಪೂರ್ವಕವಾಗಿ ಕಲಿಯುವ ಕಲಿಕಾ ಪದ್ದತಿ ಇದಾಗಿದ್ದು, ತಾಲೂಕಿಗೆ ಕನಿಷ್ಠ 3 ಕ್ಷೇತ್ರ ಪಾಠಶಾಲೆ ಮಾಡಬೇಕಾಗಿದ್ದು, ಪ್ರತಿ ಶಾಲೆಗೆ 25 ರೈತರನ್ನು ಗ್ರಾಮ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ರೈತರಿಗೆ ಕ್ಷೇತ್ರ ಪಾಠಶಾಲೆ ನಡೆಸಲಾಗುತ್ತಿದೆ. ಸಿಜನ್ವೈಜ್ ಪಾಠಶಾಲೆ ನಡೆಸಲಾಗುತ್ತಿದ್ದು, ಈ ಚಟುವಟಿಕೆ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ತಾಲೂಕಿನ ನೀರಕೇರಿ ಗ್ರಾಮದ ಶ್ರೀಶೈಲ ಕಾಖಂಡಕಿ ಹಾಗೂ ಅವರ ಪತ್ನಿ ಅನಸೂಯಾ ಕಾಖಂಡಕಿ ಅವರು ಬರಡು ನೆಲದಲ್ಲಿ ಬಹು ಬೆಳೆ ಕೃಷಿ ಪದ್ದತಿಯನ್ನು ಅನುಸರಿಸಿ ವಿವಿಧ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ಸಾಗಿಸಿ ಮಧ್ಯವತರ್ಿಗಳಿಗೆ ಮಾರಾಟ ಮಾಡದೇ ಸ್ವತಃ ತಾವೇ ಮಾರಾಟ ಮಾಡುತ್ತಿರುವ ವಿಷಯವನ್ನು ತಿಳಿಸಿದಾಗ ಅವರ ಸಾಧನೆ ಇತರ ರೈತರಿಗೆ ಮಾದರಿಯಾಗುವಂತೆ ಮಾಡಬೇಕು. ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಕೃಷಿ ಇಲಾಖೆಯ ಉಪನಿದರ್ೇಶಕ ಕೊಂಗವಾಡ ಸೇರಿದಂತೆ ತೋಟಗಾರಿಕೆ ಇಲಾಖೆ, ಪಶು ಇಲಾಖೆ, ಸಾಮಾಜಿಕ ಅರಣ್ಯ, ರೇಷ್ಮೆ ಹಾಗೂ ಕೈಗಾರಿಕಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.