ಗೀತೆ ಸ್ಪರ್ಧೆಯಲ್ಲಿ ಅದ್ವೀತಾ ಪ್ರಥಮ ಸ್ಥಾನ

ಲೋಕದರ್ಶನ ವರದಿ

ಶಿಗ್ಗಾವಿ : ತಾಲೂಕಿನ ಬನ್ನೂರ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಧರ್ಮಸಭೆಯ ಪುರಾಣ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ 1 ರಿಂದ 4 ನೇ ತರಗತಿಯ ಅಭಿನಯ ಗೀತೆ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ಅದ್ವೀತಾ ಹುಡೆದಗೌಡ್ರ ಇವಳನ್ನು ಭಾರತ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ದಿಂಗಾಲೇಶ್ವರ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ತಾಪಂ ಸದಸ್ಯ ಶ್ರೀಕಾಂತ ಪೂಜಾರ, ಗುತ್ತಿಗೆದಾರರಾದ ಕಿರಣ ಅವರಾದಿ, ಮಂಜುನಾಥ ದುಬೈ, ನೌಕರ ಸಂಘದ ಅಧ್ಯಕ್ಷ ಅರುಣ ಹುಡೆದಗೌಡ್ರ, ಮುಖಂಡರಾದ ವೀರಭದ್ರಪ್ಪ ಅಗಡಿ, ರೇವಣಸಿದ್ದಯ್ಯ ಹಿರೇಮಠ, ಬ್ರಹ್ಮಾನಂದ ಬಡಿಗೇರ ಇದ್ದರು.