ಭಗವಾನ್ ಮಹಾವೀರರ ಜಯಂತಿ ನಿಮಿತ್ತ ಆದೀವೀರ ಅವಾರ್ಡ್‌ ಭಾಷಣ ಸ್ಪರ್ಧೆ

Adivir Award Speech Competition on the occasion of Lord Mahavira's Jayanti

ಹಾರೂಗೇರಿ 11:  ಭಗವಾನ್ ಮಹಾವೀರರ ಜನ್ಮ ಕಲ್ಯಾಣೋತ್ಸವದಂದು ವಿಶ್ವಾಶಾಂತಿಗೆ ಜೈನಧರ್ಮದ ಸಂದೇಶಗಳು ಮತ್ತು ಜಗತ್ತಿಗೆ ಜೈನರ ಕೊಡುಗೆಗಳು ವಿಷಯ ಕುರಿತು ಭಾಷಣ ಸ್ಪರ್ಧೆಯು ರಾಯಬಾಗ ತಾಲೂಕಿನ ಹಾರೂಗೇರಿಯ ಜೈನ ಬಸದಿಯಲ್ಲಿ ಜರುಗಿತು.  

ಜೂನಿಯರ್ ವಿಭಾಗದಲ್ಲಿ  ಮೆಳವಂಕಿ ಸರಕಾರಿ ಶಾಲೆಯ ಲಕ್ಶ್ಮೀ  ಮಠಪತಿ ಪ್ರಥಮ, ಚಿಕ್ಕೂಡ ಸರಕಾರಿ ಪ್ರೌಢಶಾಲೆ ಪ್ರತಿಭಾವಂತ ಬಾಲಕಿ ಹೇಮಾ ರಾಜೇಂದ್ರ ಚೌಗಲಾ ದ್ವಿತೀಯ ಸ್ಥಾನ, ಎಮ್‌. ಬಿ.ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಾವಿತ್ರಿ ಮಲ್ಲಪ್ಪ ಮಾಳಿ ತೃತೀಯ ಬಹುಮಾನಕ್ಕೆ ಭಾಜನರಾದರು. ಸೀನಿಯರ್ ವಿಭಾಗದಲ್ಲಿ ಪವಿತ್ರಾ ಹತ್ತರವಾಟ ಪ್ರಥಮ, ಚನ್ನಪ್ಪ ಖಾನಾಪುರ ದ್ವಿತೀಯ, ಶ್ರೀಧರ ಹೊಳಕರ ತೃತೀಯ ಸ್ಥಾನ ಪಡೆದರು.ವಿಜೇತ ನುಡಿ ವೀರರಿಗೆ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ನಗದು ಬಹುಮಾನ, ಪುಸ್ತಕ, ಆಕರ್ಷಕ ಟ್ರೋಫಿ ಅರ​‍್ಿಸಿ ಗೌರವಿಸಲಾಯಿತು. 

ಪರಮ ಮುನಿ ಸಿದ್ದಸೇನ ಮಹಾರಾಜರು ಸಾನಿಧ್ಯ ಕರುಣಿಸಿದ್ದರು. ಡಿ. ಸಿ. ಸದಲಗಿ ಅಧ್ಯಕ್ಷತೆ ವಹಿಸಿದ್ದರು. ಜಿನ್ನಪ್ಪ ಅಸ್ಕಿ ಕಾರ್ಯಕ್ರಮವನ್ನು ಭಾವ ಪೂಜೆಗೈದು ಉದ್ಘಾಟಿಸಿದರು.ಬಾಳಾಸಾಹೇಬ ಲೋಕಾಪೂರ, ಸಿದ್ದಪ್ಪ ನಾಗನೂರ ಅತಿಥಿಯಾಗಿ ಆಗಮಿಸಿದ್ದರು. ಡಾ. ಬಿ. ಪಿ. ನ್ಯಾಮಗೌಡ, ಡಾ. ವಿ. ಎಸ್‌. ಮಾಳಿ, ಡಾ. ಪ್ರಿಯವಂದ ಹುಲಗಬಾಳಿ ನಿರ್ಣಾಯಕರಾಗಿ ಆಗಮಿಸಿದ್ದರು.ಸಮಾಜಸೇವಾ ಮುಕುಟ ಸಂತೋಷ ತಮದಡ್ಡಿ ಭಾಷಣ ನಿಯಮಗಳನ್ನು ಬಿತ್ತರಿಸಿದರು.ಸಾಧಕರಾದ ಡಾ. ಸುಮಿತ ಪಾಟೀಲ,ಡಾ.ಸಂಜಯ ಹಂಜೆ, ಮಂಜುನಾಥ ಕಡಹಟ್ಟಿ, ನ್ಯಾಯಧೀಶ ಶಿರಹಟ್ಟಿ, ಪ್ರಿಯಾ ನಾಗನೂರ ಅವರನ್ನು ಸನ್ಮಾನಿಸಲಾಯಿತು.  

ರಾಯಬಾಗ ತಾಲೂಕು ಕ. ಸಾ. ಪ ಅಧ್ಯಕ್ಷ ರವೀಂದ್ರ ಪಾಟೀಲ, ಭೀಮಪ್ಪ ತಮದಡ್ಡಿ, ಭೂಪಾಲ ಆಲಗೂರ, ಮಹಾವೀರ ದಟವಾಡ, ಮಹಾದೇವ ಬದನಿಕಾಯಿ,ಬಸಗೊಂಡ ನಾಗನೂರ, ಸುರೇಶ ಬದನಿಕಾಯಿ,ಡಾಽಽಯಮನಪ್ಪ ನಾಗನೂರ,ರಮೇಶ ಹಳಿಂಗಳಿ, ಪ್ರಮೋದ ಅಸ್ಕಿ, ಪ್ರಮೋದ ಆಲಗೂರ ಮತ್ತಿತರರು ಉಪಸ್ಥಿತರಿದ್ದರು.ಶ್ರಾವಕ, ಶ್ರಾವಕಿಯರು ಕಾರ್ಯಕ್ರಮದ ಹೂರಣ ಸವಿದರು. ಕರ್ಮವೀರ,ಸೇವಾಪ್ರೇ ಮಿ ಸಂತೋಷ ತಮದಡ್ಡಿ ಕಾರ್ಯಕ್ರಮ ಆಯೋಜಿಸಿದ್ದರು. ತ್ರಿಶಲಾ ನಾಗನೂರ ನಿರೂಪಿಸಿದರು, ಸುಕುಮಾರ ಆಲಗೂರ ಸ್ವಾಗತಿಸಿದರು. ಭರತೇಶ ಆಲಗೂರ ವಂದಿಸಿದರು.