ಆದಿತ್ಯ ಶ್ರೀವಾತ್ಸವ ಆಕರ್ಷಕ ಶತಕ: ಕರ್ನಾಟಕಕ್ಕೆ ಮಧ್ಯ ಪ್ರದೇಶ ತಿರುಗೇಟು

ಶಿವಮೊಗ್ಗ, ಫೆ 6 :    ಆದಿತ್ಯ ಶ್ರೀವಾತ್ಸವ್ (ಔಟಾಗದೆ 109 ರನ್) ಹಾಗೂ ವೆಂಕಟೇಶ್ ಅಯ್ಯರ್ (ಔಟಾಗದೆ 80 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮಧ್ಯ ಪ್ರದೇಶ ತಂಡ 2019/ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಕರ್ನಾಟಕಕ್ಕೆ ತಿರುಗೇಟು ನೀಡಿದೆ.

ಇಲ್ಲಿನ ಜವಾಹರ್ ಲಾಲ್ ನೆಹರು ಮೈದಾನದಲ್ಲಿ ಗುರುವಾರ ಎರಡು ವಿಕೆಟ್ ಕಳೆದುಕೊಂಡು 60 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಪ್ರವಾಸಿ ಮಧ್ಯ ಪ್ರದೇಶ ತಂಡ ಮೂರನೇ ದಿನದಾಟ ಮುಕ್ತಾಯಕ್ಕೆೆ 124 ಓವರ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು 311 ರನ್ ದಾಖಲಿಸಿದ್ದು, ಇನ್ನೂ 115 ರನ್ ಗಳಿಸಬೇಕಿದೆ.

ಗುರುವಾರ ಬೆಳಗ್ಗೆೆ ಬ್ಯಾಟಿಂಗ್ ಮುಂದುವರಿಸಿದ ಯಶ್ ದುಬೆ ಹಾಗೂ ಶುಭಂ ಶರ್ಮಾ ಜೋಡಿ ಅತ್ಯುತ್ತಮ ಬ್ಯಾಟಿಂಗ್ ಮಾಡಿತ್ತು. ಈ ಜೋಡಿ 63 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 159  ಎಸೆತಗಳಲ್ಲಿ 45 ರನ್ ಗಳಿಸಿ ತಾಳ್ಮೆೆಯ ಬ್ಯಾಟಿಂಗ್ ಯಶ್ ದುಬೆ ಅವರನ್ನು ಶ್ರೇಯಸ್ ಗೋಪಾಲ್ ಎಲ್ ಡಬ್ಲ್ಯು ಬಲೆಗೆ ಕೆಡವಿದರು. ಆ ಮೂಲಕ ದುಬೆ ಮತ್ತು ಶುಭಂ ಜೋಡಿಯನ್ನು ಬೇರ್ಪಡಿಸಿದರು.

73 ಎಸೆತಗಳಲ್ಲಿ 28 ರನ್ ಗಳಿಸಿ ಯಶ್ ದುಬೆಗೆ ಸಾಥ್ ನೀಡುತ್ತಿದ್ದ ಶುಭಂ ಶರ್ಮಾ ಅವರನ್ನು ಕೆ.ಗೌತಮ್ ಔಟ್ ಮಾಡಿದರು. ನಂತರ, ಜತೆಯಾದ ಆದಿತ್ಯ ಶ್ರೀವಾತ್ಸವ ಮತ್ತು ವೆಂಕಟೇಶ್ ಅಯ್ಯರ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಈ ಜೋಡಿ ಕರ್ನಾಟಕದ ಬೌಲರ್‌ಗಳಿಗೆ ಬೆವರಿಳಿಸಿದರು. ಮುರಿಯದ ಐದನೇ ವಿಕೆಟ್‌ಗೆ ಈ ಜೋಡಿಯು 188 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತು. ಆ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಈ ಜೋಡಿ ಪಾರು ಮಾಡಿತು.

ಶ್ರೀವಾತ್ಸವ ಆಕರ್ಷಕ ಶತಕ: 

ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಆದಿತ್ಯ ಶ್ರೀವಾತ್ಸವ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ತಾಳ್ಮೆೆಯ ಇನಿಂಗ್ಸ್‌ ಕಟ್ಟಿದ ಅವರು ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 223 ಎಸೆತಗಳನ್ನು ಎದುರಿಸಿದ ಇವರು 15 ಬೌಂಡರಿಯೊಂದಿಗೆ ಅಜೇಯ 109 ರನ್ ಗಳಿಸಿ ಶತಕ ಸಿಡಿಸಿ ಸಂಭ್ರಮಿಸಿದರು. 

ಮತ್ತೊಂದು ತುದಿಯಲ್ಲಿ ಇವರಿಗೆ ಹೆಗಲು ನೀಡಿದ್ದ ವೆಂಕಟೇಶ್ ಅಯ್ಯರ್ ಕೂಡ ಸಮಯಕ್ಕೆೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇವರು ಎದುರಿಸಿದ 200 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 80 ರನ್ ಗಳಿಸಿ ಅಂತಿಮ ದಿನಕ್ಕೆೆ ಬ್ಯಾಾಟಿಂಗ್ ಕಾಯ್ದುಕೊಂಡಿದ್ದಾರೆ.

ಎರಡನೇ ದಿನ ಎರಡು ವಿಕೆಟ್ ಬಹುಬೇಗ ಉರುಳಿಸಿದ್ದ ಕರ್ನಾಟಕ ತಂಡ ಮೂರನೇ ದಿನ ಕೂಡ ಮತ್ತೆೆರಡು ವಿಕೆಟ್‌ಪಡೆದಿದ್ದರು. ಆದರೆ, ಆದಿತ್ಯ ಶ್ರೀವಾತ್ಸವ ಮತ್ತು ವೆಂಕಟೇಶ್ ಅಯ್ಯರ್ ಜೋಡಿಯನ್ನು ಬೇರ್ಪಡಿಸಲು ಬೌಲರ್‌ಗಳು ಹರಸಾಹಸ ಪಟ್ಟರು ಸಕಾರ ಮಾಡಲು ಸಾಧ್ಯವಾಗಲಿಲ್ಲ.

ಕರ್ನಾಟಕ ತಂಡ ಪ್ರಥಮ ಇನಿಂಗ್‌ಸ್‌‌ನಲ್ಲಿ 132 ಓವರ್‌ಗಳಿಗೆ 426 ರನ್ ಗಳಿಸಿ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರ್. ಸಮರ್ಥ್ 108 ರನ್, ಕೆ.ಗೌತಮ್ 82 ರನ್ ಹಾಗೂ ಶ್ರೇಯಸ್ ಗೋಪಾಲ್ 50 ರನ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ

ಪ್ರಥಮ ಇನಿಂಗ್ಸ್‌: 426

ಮಧ್ಯ ಪ್ರದೇಶ

ಪ್ರಥಮ ಇನಿಂಗ್ಸ್‌: 124 ಓವರ್‌ಗಳಿಗೆ 311/4  (ಆದಿತ್ಯ ಶ್ರೀವಾತ್ಸವ ಔಟಾಗದೆ 109, ವೆಂಕಟೇಶ್ ಅಯ್ಯರ್ ಔಟಾಗದೆ 80, ಯಶ್ ದುಬೆ 45; ಕೆ.ಗೌತಮ್ 13 ಕ್ಕೆೆ 3, ಶ್ರೇಯಸ್ ಗೋಪಾಲ್ 25 ಕ್ಕೆೆ 1)