ಆದಿನಾಥ ಹಾಗೂ 24 ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವ

ಲೋಕದರ್ಶನ ವರದಿ

ಬೆಳಗಾವಿ, 3: ಬೆಳಗಾವಿಯ ಹಿಂದವಾಡಿಯಲ್ಲಿನ ಜೈನ ಬಸದಿಯ  ನೂತನೀಕರಣ ಮತ್ತು ಶ್ರೀ 1008 ಚಂದ್ರಪ್ರಬ, ಆದಿನಾಥ ಹಾಗೂ 24 ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವದ ಕೊನೆಯ ದಿನಾವಾದ ಗುರುವಾರದಂದು ವಿವಿಧ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ಮುಕ್ತಾಯಗೊಂಡಿತು.

ಗುರುವಾರ ಬೆಳಿಗ್ಗೆ ಮಂಗಲವಾದ್ಯ ಘೋಷಣೆ  ಯಜಮಾನರ ಆಗಮನ,ಮಂಗಲ ಕುಂಭಾನಯನ,ನಿತ್ಯ ವಿಧಿ,ಪಂಚಾಮೃತ ಅಭಿಷೇಕ,ಶಾಂತಿ ಮಂತ್ರ, ನಿವರ್ಾಣ ಕಲ್ಯಾಣ ಸಂಸ್ಕಾರ ವಿಧಿ, ನಿವರ್ಾಣ ಕಲ್ಯಾಣ ಪೂಜಾ , 1008 ಕಲಶಾಭಿಷೇಕ ಮಹೋತ್ಸವ ಧರ್ಮಸಭಾ ಪ್ರವಚನ ಸಮಾರೋಪ ಸಭಾ, ಧ್ವಜಾ ಆರೋಹಣ , ವಿಸರ್ಜನೆ ಕಂಕಣ ವಿಮೋಚನೆ ಕಾರ್ಯಕ್ರಮಗಳು ನಡೆದವು. 

ಇದೇ  ಸಂದರ್ಭದಲ್ಲಿ  ಐದು ದಿನಗಳ ಪಂಚಕಲ್ಯಾಣ ಮಹಾಮಹೋತ್ಸವದ ಸಾನಿಧ್ಯ ವಹಿಸಿದ್ದ ಶ್ರೀ.108 ಆಚಾರ್ಯ  ಧರ್ಮಸೇನ  ಅವರ ಪಾದಪೂಜೆ ನೆರವೇರಿಸಿ ಅವರಿಗೆ ಶಾಸ್ತ್ರ ದಾನ ಮಾಡಲಾಯಿತು. ಅದರಂತೆ ಮಹಾಮಹೋತ್ಸವದಲ್ಲಿ  ಪ್ರಮುಖ ಉಪಸ್ಥಿತರಿದ್ದ ಸ್ವಾದಿ (ಸೋಂದಾ) ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರಿಗೂ ಸಹ ಸಮಿತಿ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿ ಅವರಿಗೆ ಶಾಸ್ತ್ರ ದಾನ ಮಾಡಿದರು. ಶ್ರೀ 105 ಕ್ಷುಲ್ಲಕ ಚಂದ್ರಸೇನ ಮಹಾರಾಜರು ಉಪಸ್ಥಿತರಿದ್ದರು. 

ಅದಲ್ಲದೇ ಜೈನ ಮಂದಿರಕ್ಕೆ ದಾನ ನೀಡಿದ ದಾನಿಗಳು,ಸಹಕರಿಸಿದ ವಿವಿಧ ಗಣ್ಯರನ್ನು, ಮಹಾಮಹೋತ್ಸವದಲ್ಲಿ ವಿವಿಧ ಸೇವೆ ನೀಡಿದ ಮಹನೀಯರನ್ನು, ಮೂತರ್ಿಕಾರರನ್ನು , ವಿನ್ಯಾಸಕಾರರನ್ನು ಮಹಿಳಾ ಮಂಡಳದ ಸದಸ್ಯರನ್ನು ಸೇರಿದಂತೆ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಪ್ರತಿಷ್ಠಾಚಾರ್ಯ ಪಂಡಿತ ವೃಷಭಸೇನ ಉಪಾಧ್ಯೆ , ಸಹ ಪ್ರತಿಷ್ಠಾಚಾರ್ಯ ಪಂಡಿತ  ಪಾರೀಸ ಉಪಾಧ್ಯೆ,ಪಂಡಿತ ಸಂಜೀವ ಉಪಾಧ್ಯೆ ಮತ್ತು ಉದಯಕುಮಾರ್ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಧಾಮರ್ಿಕ ಕಾರ್ಯಕ್ರಮ ನಡೆದವು. 

ಸೌಧರ್ಮ ಇಂದ್ರ-ಇಂದ್ರಾಣಿ ಸೌ ಸವಿತಾ ಮತ್ತು ಅಜರ್ುನ ಭಾಗಣ್ಣವರ, ಈಶಾನ್ಯ ಇಂದ್ರ-ಇಂದ್ರಾಣಿ ಸೌ ಪ್ರಮಿಳಾ ಮತ್ತು ಅಪ್ಪಾಸಾಹೇಬ ಕಬ್ಬುರ, ತೀರ್ಥಂಕರ ಮಾತಾ-ಪಿತಾ ಸೌ ಪದ್ಮಜಾ ಮತ್ತು ಶೀತಲಕುಮಾರ ನಿಲಜಗಿ, ಧನಪತಿ ಕುಬೇರ ಸೌ. ಸವಿತಾ ಮತ್ತು ಶ್ರೀಧರ ಪತ್ರಾವಳಿ, ಮಹಾಯಜ್ಞ ನಾಯಕ  ಸೌ ಸುಕನ್ಯಾ ಮತ್ತು ಅನಂತರಾಜ ಸೂಜಿ, ಸುವರ್ಣ ಸೌಭಾಗ್ಯವತಿ ಸೌ ರಾಜಶ್ರೀ ಮತ್ತು ಮಹಾವೀರ ಗಣಿ , ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಬಾಳಾಸಾಹೇಬ ಪಾಟೀಲ, ಪಂಚಕಲ್ಯಾಣ ಮಹಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಮಂಡಳದ ಸದಸ್ಯರು, ಶ್ರಾವಕ - ಶ್ರಾವಕಿಯರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.