ಮೂರನೇ ಟೆಸ್ಟ್ ಪಂದ್ಯದಿಂದ ಏಡೆನ್ ಮರ್ಕರಮ್ ಔಟ್

ರಾಂಚಿ, ಅ 17:     ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್ಮನ್ ಏಡೆನ್ ಮರ್ಕರಮ್ ಅವರು ಗಾಯದಿಂದಾಗಿ ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯೆಕ್ಕೆ ಅಲಭ್ಯರಾಗಿದ್ದಾರೆ. 

ಕಳೆದ ಎರಡು ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಏಡೆನ್ ಮರ್ಕರಮ್ ಅವರು ನಿರಾಸೆಗೆ ಒಳಗಾಗಿದ್ದರು. ಅಲ್ಲದೇ, ಪುಣೆ ಪಂದ್ಯದ ವೇಳೆ ಡ್ರೆಸ್ಸಿಂಗ್  ಕೊಠಡಿಯಲ್ಲಿ ಅವರ ವೈಫಲ್ಯದ ಬಗ್ಗೆ ಅಸಮಾಧಾನವಿತ್ತು. ಇದರ ನಡುವೆ ಅವರ ಮುಷ್ಟಿ ಗೆ ಗಾಯವಾಗಿದ್ದು, ಶನಿವಾರ ರಾಂಚಿನಲ್ಲಿ ನಡೆಯುವ ಪಂದ್ಯದಿಂದ ಮರ್ಕರಮ್ ದೂರ ಉಳಿಯಲಿದ್ದಾರೆ. 

ಮರ್ಕರಮ್ ಅವರ ಸ್ಥಾನೆಕ್ಕೆ ಬೇರೆ ಆಟಗಾರನ ಹೆಸರನ್ನು ದಕ್ಷಿಣ ಆಫ್ರಿಕಾ ಗುರುತಿಸಲಿಲ್ಲ. ಏಡೆನ್ ಮರ್ಕರಮ್ ಅವರ  ಮುಷ್ಟಿಗೆ ಗಾಯವಾಗಿದ್ದು, ಅವರು ತವರಿಗೆ ಮರಳಿದ ಬಳಿಕ ಅವರು ವಿಶೇಷ ತಜ್ಞರನ್ನು ಭೇಟಿಯಾಗಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ವೈದ್ಯ ಹಾಶೇಂದ್ರ ರಾಮ್ಜೀ ಮಾಹಿತಿ ನೀಡಿದ್ದಾರೆ. 

ಮರ್ಕರಮ್ ಅವರ ಮುಷ್ಟಿಯನ್ನು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಅವರ ಮುಷ್ಟಿ ಮೂಳೆಗೆ ಬಲವಾಗಿ ಹೊಡೆತ ಬಿದ್ದಿರುವುದು ವರದಿ ಧೃಡೀಕರಿಸಿದೆ. ಹಾಗಾಗಿ, ಅವರನ್ನು ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯೆಕ್ಕೆ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ. 

ಏಡೆನ್ ಮರ್ಕರಮ್ ಅವರು ಕಳೆದ ಎರಡು ಪಂದ್ಯಗಳಲ್ಲಿ ವಿಫಾಲರಾಗಿದ್ದಾರೆ. ಗುರುವಾರ ಬೆಳೆಗ್ಗೆ ಅವರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸ್ಪಿನ್ನರ್ ಕೇಶವ್ ಮಹರಾಜ್ ಕೂಡ ಭುಜದಲ್ಲಿ ನೋವು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರು ಮೂರನೇ ಪಂದ್ಯೆಕ್ಕೆ ಅಲಭ್ಯರಾಗಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ತಂಡ 0-2 ಅಂತರದಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿ ಬಿಟ್ಟುಕೊಟ್ಟಿದೆ.