ಮುಂಬೈ, ಸೆ 17 ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿಗಷ್ಟೇ ರಾಜೀನಾಮೆ ನೀಡಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ ಸೇರಲಿದ್ದಾರೆ ಎಂಬ ಸುದ್ದಿಗಳು ಹರಡಿವೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಕಾರ್ಯದಶರ್ಿ ಮಿಲಿಂದ್ ನವ್ರೇಕರ್ ಅವರೊಂದಿಗೆ ಮಾತೋಂಡ್ಕರ್ ನಡೆಸಿದ ಭೇಟಿ ಈ ಕುರಿತ ಅನುಮಾನಗಳನ್ನು ಸೃಷ್ಟಿಸಿದೆ.
ಉದ್ಧವ್ ಠಾಕ್ರೆ ಆಪ್ತ ಕಾರ್ಯದರ್ಶಿಯೊಂದಿಗೆ ಊರ್ಮಿಳಾ ಮಾತೋಂಡ್ಕರ್ ಭೇಟಿ ಮಾಡಿರುವುದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಉಹಾಪೋಹಾಗಳು ಹರಡಿವೆ. ಮತ್ತೊಂದೆಡೆ ಊರ್ಮಿಳಾ, ಶಿವಸೇನೆ ಪಕ್ಷ ಸೇರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಸದ್ಭಾವನೆಯ ಕ್ರಮವಾಗಿ ಮಿಲಿಂದ್ ನವ್ರೇಕರ್ ಅವರನ್ನು ಭೇಟಿಯಾಗಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
2019 ರ ಲೋಕಸಭಾ ಚುನಾವಣೆಗೆ ಕೆಲ ದಿನಗಳ ಮುನ್ನ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಊರ್ಮಿಳಾ, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಮುಂದಿನ ಹೆಜ್ಜೆಗಳು, ಅವರು ಕುತೂಹಲ ಕೆರಳಿಸಿವೆ. \\
ಕಾಂಗ್ರೆಸ್ ಪಕ್ಷದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳ ಜೊತೆಗೆ ಕೆಲಸ ಮಾಡಲು ನನ್ನ ರಾಜಕೀಯ ಹಾಗೂ ಸಾಮಾಜಿಕ ಪ್ರಜ್ಞೆ ಒಪ್ಪುತ್ತಿಲ್ಲ ಎಂದು ಊರ್ಮಿಳಾ ಮಾತೋಂಡ್ಕರ್ ಇತ್ತೀಚಿಗೆ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ದೊಡ್ಡ ಮಟ್ಟದ ಗುರಿ ಇಟ್ಟುಕೊಂಡು ಹೋರಾಟ ನಡೆಸುವ ಬದಲು ಮುಂಬೈ ಕಾಂಗ್ರೆಸ್ ಆಂತರಿಕ ಕಚ್ಚಾಟಕ್ಕೆ ಪ್ರಾಧಾನ್ಯತೆ ನೀಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದ್ದರು.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವೇಳೆ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದ ಊರ್ಮಿಳಾ, ಕಾಶ್ಮೀರದಲ್ಲಿರುವ ಅತ್ತೆ, ಮಾವ ಹೇಗಿದ್ದಾರೋ ಗೊತ್ತಾಗುತ್ತಿಲ್ಲ ಎಂದು ವೇದನೆ ಪಟ್ಟಿದ್ದರು.
ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ, ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.