ನಾಳೆ ರಾತ್ರಿ ಜ್ಯೋತಿ ಬೆಳಗಿಸಲು ಚಿತ್ರ ನಟ ದರ್ಶನ್ ಮನವಿ

ಬೆಂಗಳೂರು,ಏ 4,ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಕೊರೋನ ವೈರಸ್‌ನಿಂದ ತುಂಬಿರುವ  ಅಂಧಕಾರವನ್ನು ಹೊಡೆದೋಡಿಸಲು ಏಪ್ರಿಲ್ 5 , ರಾತ್ರಿ 9 ಗಂಟೆಗೆ ಎಲ್ಲರೂ ಜ್ಯೋತಿ  ಬೆಳಗಿಸೋಣ ಎಂದು ಚಿತ್ರನಟ ದರ್ಶನ್ ಮನವಿ ಮಾಡಿದ್ದಾರೆ.ಮನೆಯಂಗಳದಿಂದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲಿಯೂ ಮೂಡಿಸಬೇಕು.ಎಲ್ಲಾ  ಭಾರತೀಯಿರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ.  ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ ಎಂದು ದರ್ಶನ್  ಟ್ವಿಟರ್‌ನಲ್ಲಿ ಹೇಳಿದ್ದಾರೆ.