ಲೋಕದರ್ಶನ ವರದಿ
ಬೆಳಗಾವಿ 05: ಪ್ರಸ್ತುತ ಜಗತ್ತು ಸ್ಪಧರ್ಾತ್ಮಕ ವಿದ್ಯಮಾನದಿಂದ ಕೂಡಿದೆ. ಇಂಥ ಸಂಧರ್ಭದಲ್ಲಿ ವಿದ್ಯಾಥರ್ಿಗಳು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಸವರ್ಾಂಗೀಣ ಉನ್ನತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸವರ್ಾಂಗೀಣ ಉನ್ನತಿಗೆ ಅತ್ಯಂತ ಅವಶ್ಯಕವಾಗಿವೆ. ಇಂತಹ ಸ್ಪಧರ್ೆಗಿಳಿದು ಜಯಶಾಲಿಗಳಾಗಬೇಕಾದ ಅಗತ್ಯತೆ ವಿದ್ಯಾಥರ್ಿಗಳಿಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ಪಿಡಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಬಿಂಬಾ ನಾಡಕಣರ್ಿಯವರು ನಗರದ ರಾಣಿ ಪಾರ್ವತಿದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ಆಯೋಜಿಸಿರುವ ಎರಡು ದಿನದ ಅಂತರಕಾಲೇಜು ವಿದ್ಯಾಥರ್ಿ ಯುವ ಜನೋತ್ಸವ "ಹೆರಿಟೇಜ2020" ಉದ್ಘಾಟಿಸಿ ಮಾತನಾಡಿದರು.
ಸ್ಪಧರ್ೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪಧರ್ೆಗಿಳಿದು ತಮ್ಮ ಪ್ರತಿಭೆಯನ್ನು ಹೊರಹಾಕುವುದು ಅತ್ಯಂತ ಪ್ರಮುಖವಾಗಿದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಕಾಲೇಜಿನ ಪ್ರಾಚಾಯರ್ೆ ಡಾ. ಎ.ಎ. ದೇಸಾಯಿಯವರು ಹೇಳಿದರು.
ಇದೇ ಸಂದರ್ಭದಲ್ಲಿ ಹೆರಿಟೇಜ್ ಕುರಿತಾದ ಕಿರುಚಿತ್ರವನ್ನು ಪ್ರದಶರ್ಿಸಲಾಯಿತು. ಸಂಜನಾ ಪೋವಾರ ಕಾರ್ಯಕ್ರಮದ ಕುರಿತಾಗಿ ಸ್ಪಧರ್ಾಳುಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ವಿದ್ಯಾಥರ್ಿ ಆಯೋಜನಾ ಮಂಡಳಿಯಿಂದ ನೃತ್ಯ ಪ್ರದಶರ್ಿಸಲಾಯಿತು.ಕಾಲೇಜಿನ ಜಿ ಎಸ್ ಐಶ್ವಯರ್ಾ ಹೊಸುರ ಸ್ವಾಗತಿಸಿದರು. ಧನಶ್ರೀ ಕೊರಾಟೆ ಅತಿಥಿಗಳನ್ನು ಪರಿಚಯಿಸಿದರು . ವಾಣಿ ಚಿನ್ನಪ್ಪಗೌಡರ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಲೋನಿ ಪಾಟೀಲ ಹಾಗೂ ದೇವಯಾನಿ ಶಾಹಪುರಕರ ಅವರು ವಹಿಸಿಕೊಂಡಿದ್ದರು.
ಎರಡು ದಿನಗಳಕಾಲ ನಡೆಯುವ ಈ ಯುವಜನೋತ್ಸವವನ್ನು ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಬಿ.ಕೊಲ್ಕಾರ ಹಾಗೂ ಸಾಂಸ್ಕೃತಿಕ ವಿಭಾಗದ ಸದಸ್ಯರು ಮತ್ತು ವಿದ್ಯಾಥರ್ಿ ಪ್ರತಿನಿಧಿಗಳು ಏರ್ಪಡಿಸಿದ್ದಾರೆ. ಇದೇ ಸಂಧರ್ಭದಲ್ಲಿ ಸುಮಾರು 14 ಕಾಲೇಜಿನ ನೂರಾರು ವಿದ್ಯಾಥರ್ಿಗಳು ವಿವಿಧ ಸ್ಪಧರ್ೆಯಲ್ಲಿ ಭಾಗವಹಿದ್ದಾರೆ.