ಬಾಗಲಕೋಟೆ: ಜಿಲ್ಲೆಯಲ್ಲಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ದಾಸಶ್ರೇಷ್ಟ ಕನಕದಾಸರ ಭವನ ನಿಮರ್ಿಸಲು ಕ್ರಮಕೈಗೊಳ್ಳಲಾಗುವುದೆಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತ ಭಾಷೆಯನ್ನಾಗಿ ಮಾಡಿದ್ದು, ಅಂತಹ ಮಹಾನ್ ಸಂತರ ಭವನ ನಿಮರ್ಾಣಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಸಂತರ, ಮಹಾಪುರುಷರ ಆದರ್ಶ ಹಾಗೂ ತತ್ವಗಳಿಗೆ ತದ್ವಿರುದ್ದವಾಗಿ ನಡೆಕೊಳ್ಳಬಾರದು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಿವೆಲ್ಲರೂ ನಡೆದುಕೊಳ್ಳಬೇಕಾಗಿದೆ. ತಮ್ಮ ನಡೆ, ನುಡಿ ಜೀವನದ ಮೂಲಕ ಮಹಾನತೆಯನ್ನು ತೋರಿದವರು ಭಕ್ತ ಕನಕದಾಸರಾಗಿದ್ದು, ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಸಮಾಜ ಭಾಂದವರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದಾಗ ಮಾತ್ರ ಅವರಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗ ಆಗಮಿಸಿದ್ದ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ದೇವರನ್ನು ಪೂಜಿಸುವ ಮೂಲಕ ಕಾಣಬಹುದಾಗಿದೆ ಎಂದು ತೋರಿಸಿ ಕೊಟ್ಟವರು ಕನಕದಾಸರು. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಮ್ಮ ಕಿರ್ತನೆಗಳ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಮನುಷ್ಯ ಜನ್ಮ ತಾಳಿ ಭೂಮಿಗೆ ಬಂದ ಮೇಲೆ ಜಾತಿ, ಮತ, ಪಂಥಗಳಿಗೆ ಒಳಪಡುತ್ತಾನೆ.
ಇವೇಲ್ಲ ನಾವು ಮಾಡಿಕೊಂಡಿದ್ದು, ಬೆಳಕು ಚೆಲ್ಲುವ ಸೂರ್ಯ, ಉಸಿರಾಡುವ ಗಾಳಿ, ಕುಡಿಯುವ ನೀರು, ಭೂಮಿ ಎಂದು ಯಾರನ್ನು ತಿರಸ್ಕರಿಸಿಲ್ಲ. ಜ್ಯಾತ್ಯಾತೀತತೆಯ ಭಾವವನ್ನು ಎಲ್ಲರಲ್ಲಿ ತರುವ ಕೆಲಸ ಕನಕದಾಸರು ಮಾಡಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಗೊಟಗೋಡಿ ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ಡಾ.ಎಚ್.ಎಸ್.ಘಂಟಿ ಮಾತನಾಡುತ್ತಾ, ಹಾಲಮತ ಸಮಾಜ ಶಿವ-ಪಾರ್ವತಿಯರ ಸಂಸ್ಕೃತಿಯ ಪ್ರತೀಕವಾಗಿದ್ದು, ಇಂತಹ ಸಮಾಜದಲ್ಲಿ ಜನಿಸಿದ ಆದ್ಯಾತ್ಮದ ಅನುಭಾವಿ, ದಾಸಶ್ರೇಷ್ಠ ಭಕ್ತ ಕನಕದಾಸರು ತಮ್ಮ ಕೀತರ್ಿನೆಗಳ ಮೂಲಕ ದಾಸ ಪರಂಪರೆಯಲ್ಲಿ ಅಗ್ರಗಣ್ಯರಾಗಿದ್ದಾರೆ.
ಅಂದಿನ ಕಾಲದಲ್ಲಿ 78 ಗ್ರಾಮಗಳ ಹೋಬಳಿ ಆಗಿದ್ದ ಇಂದಿನ ಬಾಲಗ್ರಾಮ ಇದರ ನಾಡಗೌಡಿಕೆಯನ್ನು ನಿರ್ವಹಿಸುತ್ತಿದ್ದ ಕನಕದಾಸರು ಹಣದಿಂದ ಅಧಿಕಾರದಿಂದ, ದರ್ಪದಿಂದ ಏನು ಸಾಧಿಸಲು ಆಗುವುದಿಲ್ಲ ಕರುಣೆ, ವಿಶ್ವಾಸದಿಂದ ಎಲ್ಲವೂ ಭಗವಂತನ ಕೃಪೆ ಎಂದು ಬದುಕಿದರೆ ಅದೇ ಸುಂದರವಾದ ಜೀವನ ಎಂದು ತೋರಿಸಿಕೊಟ್ಟಿದ್ದಾರೆ ಎಂದರು. ಅವರ ಜೀವನ ಶೈಲಿ ಹಾಗೂ ಆದರ್ಶವನ್ನು ಯುವಜನರು, ವಿದ್ಯಾಥರ್ಿಗಳು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ದೀಪ ಬೆಳೆಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷತೆ ಬಾಯಕ್ಕ ಮೇಟಿ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಶಿಕ್ಷಣವಂತರನ್ನಾಗಿ ಮಾಡಬೇಕು.
ಅಂದಾಗ ಮಾತ್ರ ಮಹಾನ್ ವ್ಯಕ್ತಿಗಳ ಆದರ್ಶ, ತತ್ವಗಳನ್ನು ಅರಿವಯಲು ಅನುಕೂಲವಾಗುತ್ತದೆ ಇದರಿಂದ ಮೆಲೇರಸಲು ಸಾಧ್ಯವಾಗುತ್ತದೆ.
ಇದೇ ಸಂದರ್ಭದಲ್ಲಿ ಖಾಸಗಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನೀಡಲಾಗುತ್ತಿರುವ ಕನಕಸಿರಿ ಪ್ರಶಸ್ತಿಗೆ ಪ್ರಸಕ್ತ ಸಾಲಿಗೆ ಆಯ್ಕೆಯಾದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಆರ್.ಗೇನಣ್ಣವರ ಅವರಿಗೆ ನೀಡಿ ಸನ್ಮಾನಿಸಲಾಯಿತು. ನಂತರ ಪ್ರಶಸ್ತಿ ಸ್ವೀಕರಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸೀತಿಮನಿಯ ವಶಿಷ್ಟ ಮುನಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸದಸ್ಯೆ ಹನಮವ್ವ ಕರಿಹೊಳೆ, ನಗರಸಭೆಯ ಸದಸ್ಯರಾದ ಸರಸ್ವತಿ ಕುರಬರ, ಶಾಂತಾ ಬರಮಕ್ಕನವರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸ್ವಾಗತಿಸಿದರೆ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ವಂದಿಸಿದರು. ಶಿಕ್ಷಣ ಇಲಾಖೆಯ ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.