ಬರಪೀಡಿತ ಜಿಲ್ಲೆಯ ಬೆಳೆ ಹಾನಿ ಸಮೀಕ್ಷೆ ಸಿದ್ಧಪಡಿಸಲು ಕ್ರಮ

ವಿಜಯಪುರ 16:   ವಿಜಯಪುರ ಜಿಲ್ಲೆ ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ, ಬೆಳೆ ನಷ್ಟ ಸಮೀಕ್ಷೆ ಕುರಿತಂತೆ ಸಮಗ್ರ ವರದಿ ರೂಪಿಸಿ ಸಕರ್ಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ಹೇಳಿದರು. 

ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಜನಸಂಪರ್ಕ ಸಭೆ ನಡೆಸಿದ ಅವರು, ಜಿಲ್ಲೆಯ 5 ತಾಲೂಕುಗಳು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಮೂರು ಹಂತದಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಬೆಳೆ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ ಹಾಗೂ ವಸ್ತುನಿಷ್ಠ ಬೆಳೆ ಹಾನಿ ಸಮೀಕ್ಷೆ ಕುರಿತು ವರದಿ ಸಿದ್ಧಪಡಿಸಲಾಗುತ್ತಿದ್ದು, ವರದಿಯನ್ನು ಸಕರ್ಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. 

ಟಕ್ಕಳಕಿ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕೆರೆಗಳ ಪುನಶ್ಚೇತನ, ಹೂಳೆತ್ತುವುದು ಹಾಗೂ ಕೆರೆ ತುಂಬುವ ಯೋಜನೆಯಡಿ ನೀರು ತುಂಬಿಸುವ ಕ್ರಮ ಕೈಗೊಳ್ಳಲಾಗುವುದು. ತುತರ್ು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ನರೇಗಾದಡಿ ಕೆರೆ ಸುಧಾರಣೆ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಟಕ್ಕಳಕಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿಗಳ ನೇಮಕ, ಕೃಷಿ ಮಾರುಕಟ್ಟೆ, ಸಂತೆ, ಬಜಾರ ಹಾಗೂ ಜಾನುವಾರು ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿದಂತೆ ಲಭ್ಯವಿರುವ ಸಂಪನ್ಮೂಲಕ್ಕೆ ಅನುಗುಣವಾಗಿ ನಿಯಮಾವಳಿಯಂತೆ ಅವಶ್ಯಕ ಕ್ರಮ ಕೈಗೊಳ್ಳಲು ಹಾಗೂ ಈ ಕುರಿತು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಟಕ್ಕಳಕಿ ಗ್ರಾಮದಲ್ಲಿ ಈಗಾಗಲೇ ಆರ್.ಸಿ.ಸಿ. ರಸ್ತೆಗಳು ನಿಮರ್ಾಣಗೊಂಡಿರುವುದರಿಂದ ಯೋಜನಾಬದ್ಧವಾಗಿ ನೀರು ಪೂರೈಕೆ ನಲ್ಲಿಗಳ ನಿಮರ್ಾಣ ಮಾಡಬೇಕಾಗಿತ್ತು. ಈಗ ಗ್ರಾಮಸ್ಥರಿಂದ ಕಬ್ಬಿನ ಪೈಪ್ಗಳ ಅಳವಡಿಕೆ ಕುರಿತು ಬೇಡಿಕೆ ಬಂದಿದ್ದು, ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಗ್ರಾಮದಲ್ಲಿ ಹಳೆಯ ವಿದ್ಯುತ್ ಕಂಬಗಳ ಹಾಗೂ ವಿದ್ಯುತ್ ಲೈನ್ಗಳ ಬದಲಾವಣೆಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಗ್ರಾಮಸ್ಥರಿಗೆ ಹನಿ ನೀರಾವರಿ ಯೋಜನೆ ಸೌಲಭ್ಯ ದೊರಕಿಸುವ ಕುರಿತಂತೆ ಸೂಕ್ತ ಪ್ರೋತ್ಸಾಹ ನೀಡಲಾಗುವುದು ಜಲಸಂಪನ್ಮೂಲ ಇಲಾಖೆಯೊಂದಿಗೆ ಈ ಕುರಿತಂತೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಟಕ್ಕಳಕಿ ಗ್ರಾಮಸ್ಥರ ಹಿಂದು ಸಮಾಜಕ್ಕೆ ಒಂದು ತಿಂಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲಾಗುವುದು. ಗಾವಠಾಣ ಹಾಗೂ ಗಾಯರಾಣ ಜಮೀನುಗಳ ಅಳತೆಗೆ ಸಂಬಂಧಪಟ್ಟಂತೆ ಸಕರ್ಾರದಿಂದ ಮಾರ್ಗದರ್ಶನ ಕೋರಲಾಗುವುದು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯಗಳ ನಿಮರ್ಾಣ, ಗ್ರಾಮದ ಸ್ವಚ್ಛತೆ ಹಾಗೂ ವೈಯಕ್ತಿಕ ಶೌಚಾಲಯಗಳ ನಿಮರ್ಾಣಕ್ಕೆ ಎಲ್ಲ ಗ್ರಾಮಸ್ಥರು ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು. 

ಟಕ್ಕಳಕಿ ಗ್ರಾಮದಲ್ಲಿ ಹಿರಿಯ ಕನ್ನಡ  ಪ್ರಾಥಮಿಕ ಶಾಲೆ ಹಾಗೂ ಉದರ್ು ಪ್ರಾಥಮಿಕ ಶಾಲೆಗೆ ಅವಶ್ಯಕವಿರುವ ಜಾಗವನ್ನು ಮಂಜೂರು ಮಾಡಲಾಗುವುದು ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಮಾತನಾಡಿ, ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವುದು, ಹಳ್ಳ-ಕೊಳ್ಳಗಳ ಪುನಶ್ಚೇತನಕ್ಕೆ ಗಮನ ನೀಡಲಾಗುವುದು. ಅದರಂತೆ ರೈತರು ಕೂಡ ತಮ್ಮ ಹೊಲಗಳಲ್ಲಿ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಕೃಷಿ ಹೊಂಡಗಳನ್ನು ನಿಮರ್ಿಸಿಕೊಳ್ಳುವ ಜೊತೆಗೆ ಪ್ರತಿ ಹೊಲಗಳ ಮೂಲಕ ಕಿರುಕಾಲುವೆ ನಿಮರ್ಿಸಿಕೊಂಡು ಕೆರೆಗಳಿಗೆ ನೀರು ಹೋಗಲು ಅವಕಾಶ ಮಾಡಿಕೊಡಬೇಕು. ನರೇಗಾ ಯೋಜನೆಯಡಿ ಚೆಕ್ಡ್ಯಾಂ ನಿಮರ್ಾಣ ಸೇರಿದಂತೆ ಇನ್ನಿತರ ರೈತರ ಕಾಮಗಾರಿಗಳಿಗೆ ಸಂಬಂಧಪಟ್ಟ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅವಶ್ಯಕ ಅನುದಾನ ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ನೂರು ಕೆರೆಗಳನ್ನು ಪುನಶ್ಚೇತನಕ್ಕೆ ಆಯ್ಕೆ ಮಾಡಿದ್ದು, ಆರಂಭಿಕವಾಗಿ 30 ಕೆರೆಗಳ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿ, ಸ್ವಂತ ಶೌಚಾಲಯಗಳ ನಿಮರ್ಾಣಕ್ಕೆ ಗಮನ ನೀಡುವಂತೆ ಮನವಿ ಮಾಡಿದರು. 

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ನೀಡಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೆಂಕಟರಾಮ ದೇವಸ್ಥಾನ ಹಾಗೂ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ, ಪ್ರಭಾರ ಉಪವಿಭಾಗಾಧಿಕಾರಿ ಔದ್ರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ ಬಸವನಬಾಗೇವಾಡಿ ತಹಶೀಲ್ದಾರ ಎಂ.ಎನ್.ಚೋರಗಸ್ತಿ, ಪೋಲಿಸ್ ಉಪಾಧೀಕ್ಷಕ ಶ್ರೀರಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಭೆಯಲ್ಲಿ ಗ್ರಾಮಸ್ಥರಿಂದ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲುಗಳ ಅಜರ್ಿ ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಲಾಯಿತು.