ಜಿ ಎಸ್ ಟಿ ಇನ್ನಷ್ಟು ಸರಳೀಕರಣಕ್ಕೆ ಕ್ರಮ : ನಿರ್ಮಲಾ ಸೀತಾರಾಮನ್
ಜಿ ಎಸ್ ಟಿ ಇನ್ನಷ್ಟು ಸರಳೀಕರಣಕ್ಕೆ ಕ್ರಮ : ನಿರ್ಮಲಾ ಸೀತಾರಾಮನ್Action to further simplify GST: Nirmala Sitharaman
Lokadrshan Daily
1/5/25, 4:03 PM ಪ್ರಕಟಿಸಲಾಗಿದೆ
ನವದೆಹಲಿ, ಜ 8 ಕೇಂದ್ರ ಸರ್ಕಾರ ವರ್ತಕರ ಅನುಕೂಲಕ್ಕಾಗಿ ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಸರಳೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನವದೆಹಲಿಯಲ್ಲಿ ಅಖಿಲ ಭಾರತ ವರ್ತಕರ ಒಕ್ಕೂಟ ಸಿಎಐಟಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಜಿ ಎಸ್ ಟಿ ಸರಳೀಕರಣಕ್ಕೆ ಪ್ರಯತ್ನ ನಡೆಯುತ್ತಿದೆ ಎಂದರು. ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಅವರು, ಪರೋಕ್ಷ ತೆರಿಗೆ ಕುರಿತಂತೆ ವ್ಯಾಪಾರಿಗಳಿಂದ ಸರ್ಕಾರ ಸಲಹೆಗಳನ್ನು ಕೋರಿದೆ ಎಂದು ತಿಳಿಸಿದರು. ಕಂಪ್ಯೂಟರ್ ಆಧಾರಿತ ದಸ್ತಾವೇಜನ್ನು ಗುರುತಿನ ಸಂಖ್ಯೆ - ಡಿಐಎನ್ ವ್ಯವಸ್ಥೆಯನ್ನು ಸರ್ಕಾರ ಪ್ರಾರಂಭಿಸಿದೆ. ಇದು ತೆರಿಗೆ ಇಲಾಖೆ ಮತ್ತು ತೆರಿಗೆ ಪಾವತಿದಾರರ ನಡುವೆ ಪಾರದರ್ಶಕ ವ್ಯವಹಾರ ಖಾತರಿಪಡಿಸುತ್ತದೆ ಮತ್ತು ಸಂವಹನಕ್ಕೆ ದಾಖಲೆ ಒದಗಿಸುತ್ತದೆ ಎಂದು ವಿವರಿಸಿದರು. ತೆರಿಗೆ ಆಡಳಿತದಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಈ ವ್ಯವಸ್ಥೆ ಖಚಿತಪಡಿಸುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ 60 ವರ್ಷ ವಯಸ್ಸಿನ ನಂತರ ಅಂಗಡಿಯವರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಕನಿಷ್ಠ ಮಾಸಿಕ ಪಿಂಚಣಿ ನೀಡುವ ಹೊಸ ಯೋಜನೆಯನ್ನು ತಂದಿದೆ ಎಂದು ಸೀತಾರಾಮನ್ ಪುನರುಚ್ಚರಿಸಿದರು