ಬಾಗಲಕೋಟೆ: ಕಳೆದ 2009 ರಲ್ಲಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಕಮತಗಿಯಲ್ಲಿ ನಿಮರ್ಿಸಲಾದ ಆಶ್ರಯ ಮನೆಗಳನ್ನು ಮೂರು ತಿಂಗಳಲ್ಲಿ ದುರಸ್ತಿ ಮಾಡಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲಾಗುವುದೆಂದು ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾದ ವಿ.ಸೋಮಣ್ಣ ತಿಳಿಸಿದರು.
ಹುನಗುಂದ ತಾಲೂಕಿನ ಕಮತಗಿ ಪಟ್ಟದ ನೆರೆ ಸಂತ್ರಸ್ತರ ಮನೆ ಹಾನಿ ವೀಕ್ಷಿಸಿ ನಂತರ ಆಶ್ರಯ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಅವರು ಈಗಾಗಲೇ ನಿಮರ್ಿಸಿದ ಆಶ್ರಯ ಮನೆಗಳಲ್ಲಿ ವಾಸ ಮಾಡದೇ ಹಾಲಾಗಿದ್ದು, ವಸತಿ ಇಲಾಖೆಯ ವತಿಯಿಂದ ಆಶ್ರಯ ಮನೆಗಳನ್ನು ರಿಪೇರಿ ಮಾಡಿ ಕೊಡಲಾಗುವುದು. ಇದರ ಜೊತೆಗೆ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು 2-3 ತಿಂಗಳಲ್ಲಿ ಒದಗಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಆಗಸ್ಟ ಮಾಹೆಯಲ್ಲಿ ಉಂಟಾದ ಪ್ರವಾಹಕ್ಕೆ ತುತ್ತಾಗಿ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಕಟ್ಟಿಕೊಳ್ಳಲು ಸರಕಾರದಿಂದ 5 ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಸರಕಾರ ಯಾವ ಉದ್ದೇಶಕ್ಕೆ ಹಣವನ್ನು ನೀಡುತ್ತದೆ ಅದೇ ಉದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು. ಬೇರೆ ಉದ್ದೇಶಗಳಿಗೆ ಬಳಸಕೂಡಬಾರದು. ಮನೆ ಕಟ್ಟಲು ಮೊದಲ ಕಂತಾಗಿ 1 ಲಕ್ಷ ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಕಟ್ಟಡ ಪ್ರಾರಂಭಿಸಿದರೆ ಮಾತ್ರ ಮುಂದಿನ ಕಂತಿನ ಹಣವನ್ನು ಜಮಾ ಮಾಡಲಾಗುವುದೆಂದು ತಿಳಿಸಿದರು.
ಪದೇ ಪ್ರವಾಹಕ್ಕೆ ಒಳಗಾಗುವ ನದಿ ಪಾತ್ರಯದಲ್ಲಿ ಇರುವ ಕುಟುಂಬಗಳು ಸಂಪೂರ್ಣವಾಗಿ ಸ್ಥಳಾಂತಗೊಳ್ಳಬೇಕು. ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ 30*40 ಅಳತೆಯಲ್ಲಿ ಮನೆಗಳನ್ನು ಕಟ್ಟಿಕೊಡಲಾಗುವುದೆಂದರು. ಇದಕ್ಕೆ ಸಂತ್ರಸ್ತರು ಒಪ್ಪಿದ್ದಲ್ಲಿ ಶಿಘ್ರದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದೆಂದು ತಿಳಿಸಿದರು. ಈಗಾಗಲೇ ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ಬರದೇ ಇರುವವರಿಗೆ ಶೀಘ್ರದಲ್ಲಿ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಸಂತ್ರಸ್ತರು ಸಂಪೂರ್ಣ ಸ್ಥಳಾಂತರಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಕಮತಗಿ ಪಟ್ಟಣದಲ್ಲಿ 548 ಕುಟುಂಬಗಳು ಸಂತ್ರಸ್ತರಾಗಿದ್ದು, ತುತರ್ು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 548 ಕುಟುಂಬಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಪ್ರವಾಹದಿಂದ ಹಾನಿಗೊಳಗಾಗ ಮಣ್ಣಿನ ಮನೆಗಳಿಗೆ ಪುನಃ ಮನೆ ಕಟ್ಟಿಕೊಳ್ಳಲು ರೂ.5 ಲಕ್ಷ ಪರಿಹಾರ ನೀಡಲಾಗುತ್ತಿದೆ. ನೇಕಾರರ ಕುಟುಂಬಗಳ ಮಗ್ಗಗಳಿಗೆ ರೂ.25 ಸಾವಿರ ರೂ.ಗಳಂತೆ ಒಟ್ಟು 174 ಕುಟುಂಬಗಳಿಗೆ ಪರಿಹಾರವನ್ನು ಈಗಾಗಲೇ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಹಾನಿಗೊಳಗಾದ ನೇಕಾರರ ಮಗ್ಗಗಳಿಗೆ ತಲಾ ರೂ.25 ಸಾವಿರ ಜಮಾ ಮಾಡಲಾಗಿದ್ದು, ಒಂದೇ ಕುಟುಂಬಗಳಲ್ಲಿ 1ಕ್ಕಿಂತ ಹೆಚ್ಚಿನ ಮಗ್ಗಗಳು ಹಾಳಾಗಿರುವದನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ನದಿ ಪಾತ್ರಯದಲ್ಲಿ ಇರುವ ಕುಟುಂಬಗಳಿಗೆ ಬೆರೆಡೆ ಮನೆ ನಿಮರ್ಿಸಿಕೊಡಲು ಸರಕಾರ ಸಿದ್ದವಾಗಿದ್ದು, ಮನೆಗಳನ್ನು ನಿಮರ್ಿಸಿಕೊಟ್ಟ ನಂತರ ಸಂತ್ರಸ್ತರು ಸ್ಥಳಾಂತರಗೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ, ಗ್ರೇಟ್-2 ತಹಶೀಲ್ದಾರ ಆನಂದ ಕೋಲಾರ, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಪುಷ್ಪಾ ಕಮ್ಮಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.