ಕೊಪ್ಪಳ 27: ಉದ್ಯೋಗ ಖಾತ್ರಿಯಡಿ ಸಮುದಾಯ ಆಧರಿತ ಕಾಮಗಾರಿಗಳನ್ನು ಕೈಗೊಂಡು ದುಡಿಯುವ ಕೈಗಳಿಗೆ ಕೆಲಸ ನೀಡಿ ಬರಗಾಲದಲ್ಲಿ ನೆರವಾಗಬೇಕಿರುವುದು ಪಂಚಾಯತಿಗಳ ಕೆಲಸವಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನೀಡುವುದರ ಜೊತೆಗೆ ದಂಡ ವಿಧಿಸಿ, ಸೇವಾ ಪುಸ್ತಕದಲ್ಲಿ ನಮೂದಿಸುವುದು ಮತ್ತು ಅಗತ್ಯವಿದ್ದಲ್ಲಿ ಇಲಾಖಾ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೃಷ್ಣಬೈರೇಗೌಡರವರು ತಿಳಿಸಿದರು.
ಅವರು ಇಂದು (ಜೂನ್. 27ರಂದು) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ತಿಳಿಸಿದರು. ಕಳೆದ ವರ್ಷ ರಾಜ್ಯದಲ್ಲಿ ನರೇಗಾದಡಿ 8 ಕೋಟಿ ಮಾನವ ದಿನಗಳ ಸೃಜನೆ ಮಾಡುವ ಗುರಿ ಹೊಂದಲಾಗಿ 10 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿತ್ತು. 2019-20ರಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಜಿಸಬೇಕೆನ್ನುವ ಗುರಿ ಹೊಂದಲಾಗಿರುತ್ತದೆ. ನಮ್ಮ ರಾಜ್ಯಕ್ಕಿಂತಲೂ ಅಕ್ಕ-ಪಕ್ಕದ ರಾಜ್ಯಗಳು 20 ಕೋಟಿಗಿಂತಲೂ ಹೆಚ್ಚು ಮಾನವ ದಿನಗಳನ್ನು ಸೃಜಿಸಲು ಸಾಧ್ಯವಾದರೆ ನಮಗೇಕೆ ಇದು ಸಾಧ್ಯವಾಗುತ್ತಿಲ್ಲ. ನಾವು ಸಹ ಉದ್ಯೋಗ ಖಾತರಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆಸ್ತಿ ಸೃಜಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ 227325 ಜಾಬ್ ಕಾಡರ್್ಗಳನ್ನು ನೀಡಲಾಗಿದ್ದು 2019-20 ರಲ್ಲಿ 40 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದ್ದು ಜೂನ್. 26 ರವರೆಗೆ 13.57 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಉದ್ಯೋಗ ಖಾತರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಹದ್ದುಬಸ್ತಿಗೆತಂದು ಅವರಿಂದ ಕೆಲಸ ತೆಗೆದುಕೊಳ್ಳುವ ನಿಟ್ಟನಲ್ಲಿ ಸಿಇಒ ರವರು ಕೆಲಸ ನಿರ್ವಹಿಸಲು ಸೂಚಿಸಿದರು.
ಪಂಚಾಯತಿಯಿಂದ ಅನುಷ್ಠಾನಗೊಳಿಸುವ ಕಾಮಗಾರಿಯಲ್ಲದೇ ಉಳಿಕೆ ಇಲಾಖೆಗಳ ಮೂಲಕವೂ ಉದ್ಯೋಗ ಖಾತರಿಯಡಿ ಕೆಲಸ ಮಾಡಲು ವಿಪುಲ ಅವಕಾಶವಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಾಂಪೌಂಡ ನಿಮರ್ಾಣ, ಕೈ ತೋಟ ನಿಮರ್ಾಣ, ಆಟದ ಮೈದಾನ ನಿಮರ್ಾಣ ಮಾಡಬಹುದು. ಈ ವರ್ಷ ಜಿಲ್ಲೆಯಲ್ಲಿನ 400 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಾಂಪೌಂಡ ನಿಮರ್ಿಸಲು ಸೂಚಿಸಿ ಬಿಆರ್ಸಿ ಸಿಆರ್ಸಿಗಳನ್ನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸೂಚಿಸಿ ಇನ್ನೊಂದು ವಾರದಲ್ಲಿ 400 ಶಾಲೆಗಳ ಕ್ರಿಯಾ ಯೊಜನೆಯನ್ನು ತಯಾರಿಸಲು ಡಿಡಿಪಿಐ ಗೆ ಸೂಚಿಸಿದರು.
ದನದ ಕೊಟ್ಟಿಗೆ: ಉದ್ಯೋಗ ಖಾತರಿಯಲ್ಲಿ ದನದ ಕೊಟ್ಟಿಗೆ ನಿಮರ್ಾಣಕ್ಕೆ 19500 ಹಾಗೂ ಇದರೊಂದಿಗೆ ನೆಲ ಸಮತಟ್ಟು ಮಾಡಿಕೊಂಡಲ್ಲಿ ಒಟ್ಟು 55 ಸಾಮಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಸಮೀಕ್ಷೆಯನ್ವಯ ಜಿಲ್ಲೆಯಲ್ಲಿ 1,24,748 ಕುಟುಂಬಗಳು ಪಶುಸಂಗೋಪನೆ ಕೈಗೊಂಡಿದ್ದು ನಿವೇಶನ ಇದ್ದವರಿಗೆ ದನದ ಕೊಟ್ಟಿಗೆ ನಿಮರ್ಾಣಕ್ಕೆ ಅವಕಾಶವಿರುತ್ತದೆ. ಈ ವರ್ಷ ಮಾದರಿಯಾಗಿ 5000 ಜನರಿಗೆ ದನದ ಕೊಟ್ಟಿಗೆ ನಿಮರ್ಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು.
ರೇಷ್ಮೇಗೆ ವಿಪುಲ ಅವಕಾಶ: ಖಾತರಿಯಡಿ ರೇಷ್ಮೇ ಬೆಳೆಗಾರರಿಗೂ ಸಾಕಷ್ಟು ಪ್ರೋತ್ಸಾಹ ನಿಡುವ ಕಾರ್ಯಕ್ರಮವಿದ್ದು ಅವರು ಹೂಡುವ ಬಂಡವಾಳಕ್ಕಿಂತಲೂ ಹೆಚ್ಚಿಗೆ ಹಣವನ್ನು ನೀಡಲಾಗುತ್ತದೆ. ರೇಷ್ಮೇ ಬೆಳೆಗೆ ಪ್ರತಿ ಎಕರೆಗೆ ಮೂರು ವರ್ಷಕ್ಕೆ 3 ಲಕ್ಷದವರೆಗೆ ಪ್ರೋತ್ಸಾಹಧನ ಪಡೆಯುವ ಅವಕಾಶವಿದೆ.
ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ: ಉದ್ಯೋಗ ಖಾತರಿಯಡಿ ತೋಟಗಾರಿಕೆ ಬೆಳೆಗಳಾದ ತೆಂಗು, ಬಾಳೆ, ದಾಳಿಂಬೆ, ಪಪ್ಪಾಯ, ಮಾವು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ. ಬಾಳೆಗೆ ಉದ್ಯೋಗ ಖಾತರಿಯಡಿ ಎಕರೆಗೆ 1.20 ಲಕ್ಷದವರೆಗೆ ನೀಡಲು ಅವಕಾಶವಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅಗತ್ಯವಿರುವ ಗುಂಡಿ ತೆಗೆಯುವುದು, ಸಸಿ ಖರೀದಿ, ಹನಿ ನೀರಾವರಿಗೆ ಪ್ರೋತ್ಸಾಹ ನೀಡಲಿದ್ದು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ನೀಡುವ ಹಣಕ್ಕಿಂತಲೂ ಹೆಚ್ಚಿನ ಲಾಭ ನರೇಗಾದಲ್ಲಾಗುತ್ತದೆ. ರೈತರಿಗೆ ಖಾತರಿಯಲ್ಲಿ ಪ್ರೋತ್ಸಾಹಿಸುವ ತೋಟಗಾರಿಕೆ ಬೆಳೆಗಳ ಕುರಿತಂತೆ ಮಾಹಿತಿ ಇಲ್ಲದ ಕಾರಣ ಇದರ ಲಾಭ ಪಡೆಯಲು ಮುಂದಾಗುತ್ತಿಲ್ಲ. ಆದ್ದರಿಂದ ತೋಟಗಾರಿಕೆ ಅಧಿಕಾರಿಗಳು ರೈತರಲ್ಲಿ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸೂಚಿಸಿದರು.
ಜಲಾಮೃತ ಯೋಜನೆ, ಜಲ ವರ್ಷ: ಪ್ರತಿ ವರ್ಷ ಮಳೆಗಾಲ ಕುಂಟಿತವಾಗುತ್ತಲೇ ಸಾಗಿದ್ದು ಬರವನ್ನು ನಿವಾರಿಸುವ ನಿಟ್ಟಿನಲ್ಲಿ ದೀರ್ಘಕಾಲಿನವಾದ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಬರ ನಿರೋಧಕ ಶಕ್ತಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ನೀರಿನ ಮಹತ್ವತೆ ಅರ್ಥಮಾಡಿಸುವ ಮೂಲಕ ನೀರಿನ ಸಂಗ್ರಹ, ಮಿತ ಬಳಕೆ, ಪರಿಸರ ಸಂರಕ್ಷಣೆಗೆ ಗಿಡ ಮರಗಳನ್ನು ಬೆಳಸಬೇಕೆಂಬ ಪ್ರಮುಖ ಈ ನಾಲ್ಕು ಅಂಶಗಳನ್ನೊಳಗೊಂಡ ಜಲಾಮೃತ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ 2019 ಅನ್ನು ಜಲವರ್ಷ ಎಂದು ಘೋಷಿಸಿ ನೀರಿನ ಸಂರಕ್ಷಣೆಗಾಗಿ ರಾಜ್ಯದಲ್ಲಿ 20 ಸಾವಿರ ಚೆಕ್ಡ್ಯಾಂ ನಿಮರ್ಾಣದ ಗುರಿಹೊಂದಿ ನೀರಾವರಿ ಪ್ರದೇಶ ಹೊರತು ಪಡಿಸಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ ಐದು ಚೆಕ್ಡ್ಯಾಂ ನಿಮರ್ಿಸುವ ಗುರಿ ನೀಡಲಾಗಿದೆ. ಇದನ್ನು ಬರುವ ಡಿಸೆಂಬರ್ ಒಳಗಾಗಿ ನಿಮರ್ಾಣ ಮಾಡಬೇಕಾಗಿದೆ. ಹಾಗೂ ಪಿಆರ್ಇಡಿ, ಆರ್ಡಬ್ಲ್ಯೂಎಸ್ ವಿಭಾಗದಿಂದಲೂ ಚೆಕ್ಡ್ಯಾಂ ನಿಮರ್ಿಸಬೇಕೆಂದು ಸೂಚಿಸಿದರು. ಮತ್ತು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ 500 ಸಸಿಗಳನ್ನು ನೆಡಬೇಕು. ಈ ಸಸಿಗಳನ್ನು ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ನಡೆಸುವುದರ ಮೂಲಕ ವಿತರಣೆ ಮಾಡಬೇಕು. ಸಾಮಾಜಿಕ ಅರಣ್ಯ ವಿಭಾಗದಿಂದ ಪ್ರತಿವರ್ಷ ಲಕ್ಷಾಣತ ಸಸಿಗಳನ್ನು ಬೆಳಸುತ್ತಿವೇಂದು ಹೇಳುತ್ತಾರೆ. ಈ ಸಂಖ್ಯೆ ಕೇಳಿದರೆ ಜನ ನಗುವಂತಾಗಿದೆ. ಜನರಲ್ಲಿ ವಿಶ್ವಾಸ ಮೂಡಿಸಲು ಪಿಡಿಒಗಳ ಮೂಲಕ ಜನರಿಗೆ ನೇರವಾಗಿ ಸಸಿ ವಿತರಿಸಬೇಕೆಂದು ಸೂಚಿಸಿದರು.
1000 ಪಂಚಾಯತಿಗಳಲ್ಲಿ ಕಸ ವಿಲೇವಾರಿಗೆ ಕ್ರಮ: ಪರಿಸರ ಸಂರಕ್ಷಣೆಯ ಹಿನ್ನೆಯಲ್ಲಿ ಕಸ ನಿರ್ವಹಣೆಯನ್ನು ಪಂಚಾಯತಿಗಳಲ್ಲಿ ಮಾಡಬೇಕೆನ್ನುವ ಗುರಿಯೊಂದಿಗೆ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕಿ ಪರಿಸರ ಹಾಳು ಮಾಡಲಾಗುತ್ತಿದೆ. ಚರಂಡಿಗೆ ಪ್ಲಾಸ್ಟಿಕ್ ಹಾಕಿ ರೋಗಗಳು ಹರಡುವಂತೆ ಮಾಡಲಾಗಿದೆ. ಈ ಕಸವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ಪಂಚಾಯತಿಗಳಲ್ಲಿ ಕಸ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಇದ್ದಕ್ಕಾಗಿ ಪ್ರತಿ ಪಂಚಾಯತಿಗೆ 20 ಲಕ್ಷ ಹಣವನ್ನು ನೀಡಲಿದ್ದು, ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಇದನ್ನು ಸಂಗ್ರಹಿಸಲಾಗುತ್ತದೆ. ಒಣ ಕಸವನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಮತ್ತು ಕಾಗದವನ್ನು ಅನೇಕ ಜನರು ಖರೀದಿಸಲು ಮುಂದೆ ಬಂದಿದ್ದು ಅವರಿಗೆ ನೀಡಲಾಗುತ್ತದೆ. ಆದ್ದರಿಂದ ಕೊಪ್ಪಳ ಜಿಲ್ಲೆಯಲ್ಲಿ 21 ಪಂಚಾಯತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರೆ.
ಯಾವ ಗ್ರಾಮಕ್ಕಾದರೂ ಹೋದರು ಅಲ್ಲಿ ಪ್ಲಾಸ್ಟಿಕ್ ಬಾಟಲಿ, ಚಿಪ್ಸ್ ಕವರ್, ಗುಟ್ಕಾ ಪ್ಯಾಕೇಟ್, ಶಾಂಪೂ ಕವರ್ ಸೇರಿದಂತೆ ಅನೇಕ ತರಹದ ಪ್ಲಾಸ್ಟಿಕಗಳು ನಮಗೆ ಸಿಗುತ್ತವೆ. ಈ ಪ್ಲಾಸ್ಟಿಕಗಳನ್ನು ಪರಿಸರದಲ್ಲಿ ಹಾಗೆಯೇ ಬಿಡದೇ ಇವೆಲ್ಲವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಈ ಮೂಲಕ ಜನರಲ್ಲಿ ಪರಿಸರ ಸಂರಕ್ಷನೆಯ ಅರಿವನ್ನು ಮೂಡಿಸಿದಂತಾಗುತ್ತದೆ. ಮುಂದೊಂದು ದಿನ ಜಾಗೃತರಾಗಿ ಎಲ್ಲಂದರಲ್ಲೆ ಕಸ ಬಿಸಾಡುವುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದ ಅವರು ಈ ನಿಟ್ಟಿನಲ್ಲಿ ಈ ವರ್ಷದ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಎಲ್ಲರೂ ಸೇರಿ ಸಾಕಾರಗೊಳಿಸೋಣ ಎಂದರು.
ಜಿಲ್ಲೆಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು, ಬರ ನಿರ್ವಹಣೆ ಕುರಿತಂತೆ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಂಡರಗಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಪರಿಶೀಲನೆ, ಬೂದಗುಂಪಾ ಬಳಿ ಮಲ್ಟಿ ಆಚರ್್ ಚೆಕ್ಡ್ಯಾಂ ವೀಕ್ಷಣೆ ಮತ್ತು ನರೇಗಾದಡಿ ಪ್ರೋತ್ಸಾಹ ಪಡೆದಿರುವ ಬಾಳೆ ಬೆಳೆ ವೀಕ್ಷಣೆ ಮಾಡಿದರು.
ಸಭೆಯಲ್ಲಿ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಶಾಸಕರಾದ ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.