ಸಹಕಾರಿ ರತ್ನ ಪ್ರಶಸ್ತಿಗೆ ಸಾಧಕರಿಗೆ ಸನ್ಮಾನ
ಗಂಗಾವತಿ 20 : ನಗರದ ಓಷಧೀಯ ಭವನದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಯಲಬುರ್ಗಾ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಭಾನಾಪೂರ ಸಹಕಾರಿ ಒಕ್ಕೂಟದ ನಾಗಲಿಂಗಪ್ಪ ಪತ್ತಾರ ಮತ್ತು ದೊಡ್ಡಪ್ಪ ದೇಸಾಯಿ ಇವರುಗಳನ್ನು ಬುಧವಾರದಂದು ಕೊಪ್ಪಳ ಜಿಲ್ಲಾ ಓಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಸನ್ಮಾನಿಸಿದರು.ಈ ಸಂಧರ್ಭದಲ್ಲಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಮುದೇನೂರ ಪತ್ರಕರ್ತರಾದ ವೀರಾಪೂರ ಕೃಷ್ಣ ಚಂದ್ರಶೇಖರ ಮುಕ್ಕುಂದಿ ಮತ್ತು ನ್ಯಾಯವಾದಿ ಸಂಧ್ಯಾ ಹೇರೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಿಂಗಾರೆಡ್ಡಿ ಆಲೂರ ಸೇರಿದಂತೆ ಹಲವು ಓಷಧ ವ್ಯಾಪಾರಿಗಳು ಹಾಜರಿದ್ದರು.