ತಾಲೂಕ ಕ್ರೀಡಾಕೂಟದಲ್ಲಿ ಅತ್ತಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಯಮಕನಮರಡಿ 06 : ಹುಕ್ಕೇರಿ ತಾಲೂಕಿನ ಅತ್ತಿಹಾಳ ಪ್ರೌಡಶಾಲೆ ವಿಧ್ಯಾರ್ಥಿಗಳು ಇಂದು ಯಾದಗೂಡು ಪ್ರೌಢಶಾಲೆಯ ಮೈದಾನದಲ್ಲಿ ನಡೆದ ತಾಲೂಕ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಮ್ಮ ಅತ್ತಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು 100ಮೀ, 200ಮೀ, 400ಮೀ ಓಟದಲ್ಲಿ ರೋಹನ್ ನಾಯಿಕ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆ ಪಾತ್ರನಾಗಿದ್ದಾನೆ. 

 3000ಮೀ ಓಟದಲ್ಲಿ ಭೈರ​‍್ಪ ಪಾಟೀಲ್ ಪ್ರಥಮ ಸ್ಥಾನ,  14 ವಯೋಮಾನದ ಒಳಗಿನ ಓಟದಲ್ಲಿ ಅಭಿಷೇಕ ನಾಯಿಕ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ 1500ಮೀ, 3000ಮೀ ಓಟದಲ್ಲಿ ಲಗಮವ್ವ ನಾಯಿಕ ತೃತೀಯ ಸ್ಥಾನ ಹಾಗೂ 800ಮೀ ಓಟದಲ್ಲಿ ಕೀರ್ತಿ ಸುತಾರ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ.  ಖೋತ ಸರ್ ಅವರಿಗೂ ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಸರ್ವ ಸಿಬ್ಬಂದಿ ಪರವಾಗಿ ಹಾರ್ದಿಕ ಅಭಿನಂದನೆಗಳು.