ವಿದ್ಯಾರ್ಥಿನಿ ಕವಿತಾ ಹೂಲಿಹಳ್ಳಿ ಸಾಧನೆ
ರಾಣೆಬೆನ್ನೂರು 10 : ವಿದ್ಯಾರ್ಥಿ ಜೀವನ ಮತ್ತು ಬದುಕು ಅತಿ ಸುಂದರ ವಾಗಬೇಕಾದರೆ, ಶೈಕ್ಷಣಿಕ ಹಂತದಲ್ಲಿ ಪ್ರಗತಿ ಸಾಧಿಸಲು ನಿರಂತರ ಅಧ್ಯಯನ ಅಗತ್ಯ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ಕಲಾ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಎ, ಹೇಳಿದರು. ಅವರು, ಕಾಲೇಜು ಸಭಾಭವನದಲ್ಲಿ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿ.ವಿ ನಡೆದ ಬಿಎ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಕು : ಕವಿತಾ ಗುಡಪ್ಪ ಹೂಲಿಹಳ್ಳಿ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸಾಧನೆಗೆ ತಾವೇ ಜವಾಬ್ದಾರರು. ಕಷ್ಟಪಟ್ಟು ಓದಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕವಿತಾ ಅವರು ಗಳಿಸಿರುವ ರಾಂಕ್ ಮಾದರಿಯಾಗಿದೆ ಎಂದರು. ಕಾಲೇಜು ಮತ್ತು ಆಡಳಿತದ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕು. ಕವಿತಾ ಹೂಲಿಹಳ್ಳಿ ಅವರು, ಶಿಕ್ಷಣ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗೆ ಭೂಷಣ ಇದರಿಂದ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಸಮಾನತೆಯ ಜೊತೆಗೆ ದೇಶದ ನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ ಎಂದರು.
ಕಾಲೇಜು ಆಡಳಿತ ಮತ್ತು ಗುರು ಬಳಗದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ, ಕು. ಕವಿತಾ ಹೂಲಿಹಳ್ಳಿ ಅವರು, ಸಾಧನೆಗೆ ಮೊದಲು ಗುರು ಮಾರ್ಗದರ್ಶನ, ಕುಟುಂಬದ ಸಹಕಾರ, ವಿದ್ಯಾರ್ಥಿ ಸಹೋದ್ಯೋಗಿಗಳ ಅಚಲ ವಿಶ್ವಾಸದ ಪ್ರೋತ್ಸಾಹದಾಯಕ ಮಾತುಗಳು ಬಹಳ ಮುಖ್ಯ. ಪ್ರಾಮಾಣಿಕತೆ, ಸಾಧಿಸಬೇಕೆನ್ನುವ ಛಲ ಮತ್ತು ಅದಕ್ಕಾಗಿ ಸಮಯ ಮೀಸಲು ಸಮರ್ಕವಾಗಿ ಕಂಡುಕೊಂಡರೆ ಏನಾದರೂ ಸಾಧಿಸಬಹುದಾಗಿದೆ ಎನ್ನುವ ಆತ್ಮವಿಶ್ವಾಸದ ಮಾತುಗಳು ತಮ್ಮ ಈ ಸಾಧನೆಗೆ ಸಹಕಾರಿಯಾಗಿವೆ. ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಎಲ್ಲರಿಗೂ ಉತ್ತಮವಾದ ಮಾಹಿತಿ ಮತ್ತು ಮಾರ್ಗದರ್ಶನ ಕೊಡುತ್ತಾರೆ. ಕಾಯಾ, ವಾಚಾ ಮನಸಾ ನಿತ್ಯದಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಿದೆ ಎಂದರು. ಅಭಿನಂದನಾ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಅನುರಾಧಾ ಎಸ್, ಎಮ್. ಎನ್.ಸೂರಣಗಿ, ರೇಖಾ ಎಸ್, ಕೃಷ್ಣ ಎಲ್. ಹೆಚ್. ಭೀಮಾರತಿ ತೀರ್ಥ, ವೀರೇಶ ಕುರಹಟ್ಟಿ, ಪಾಲಕರಾದ ನಿಂಗಪ್ಪ ಹೂಲಿಹಳ್ಳಿ ಸೇರಿದಂತೆ ಮತ್ತಿತರೆ ಉಪನ್ಯಾಸಕರು ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.